ಪುಟ:ನನ್ನ ಸಂಸಾರ.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ನಾಟಕ ಸಾಹಿತ್ಯ ಪರಿಷತ್ತು 11 ದಿಲ್ಲ. ಇಂಥ ಏರ್ಪಾಡು ಅತ್ಯಾವಶ್ಯಕವೆಂದು ಪ್ರತ್ಯೇಕವಾಗಿ ಹೇಳಬೇಕಾದುದಿಲ್ಲ. ಆದುದರಿಂದ ಕನ್ನಡವನ್ನು ಬಲ್ಲವರಾಗಿಯೂ ತಮ್ಮ ತಮ್ಮ ಭಾಷೆಗಳಲ್ಲಿ ಪ್ರವೀಣರಾ ಗಿಯೂ ಇರುವ ಕೆಲಕೆಲವು ದೊಡ್ಡ ಮನುಷ್ಯರನ್ನು ವರ್ಗಣಿಂಯಿಲ್ಲದೆ ನಮ್ಮ ಪರಿಷತ್ತಿನ Corresponding ಮೆಂಬರಾಗಿ ನಿಯಮಿಸಿದರೆ ತನ್ಮೂಲಕ ನಮಗೆ ತುಂಬ ಸಹಾಯ ವಾಗುವಂತಿದೆ. ಇಂಥವರನ್ನು ನಾವು ವಿಶೇಷ (Special) ಸಭ್ಯರೆಂಬ ಪ್ರತ್ಯೇಕವರ್ಗ ವಾಗಿ ಇಟ್ಟುಕೊಳ್ಳಬಹುದು. ಪ್ರಕೃತದಲ್ಲಿ ತಮಿಳು, ತೆಲುಗು, ಮಲೆಯಾಳ ಮರಾಟೀ, ಭಾಷೆಗಳ ಮಟ್ಟಿಗಾದರೂ ಇಂಧ ವಿದ್ವಾಂಸರು ನಮಗೆ ಸಿಕ್ಕುವುದಕ್ಕೆ ಆತಂಕವಾಗಲಾ ರದೆಂದು ತೋರುತ್ತದೆ. ಕಳೆದ ನವೆಂಬರು ೨೦ ನೇ ತಾರೀಖಿನ ದಿನ ನಡೆದ ಕಾರನಿ ರ್ವಾಹಕ ಸಭೆಯವರು ಗ್ರಂಥಾಭಿವೃದ್ಧಿ ಉಪಸಭೆಯ ರಿಪೋರ್ಟಿನ ಮೇಲಿಂದ ನಿರ್ಧರಿ ಸಿದ ೪ ನೆಯ ವಿಷಯಕ್ಕೂ ಇದ​ರಿಂದ ಬಹು ಸಹಾಯವಾಗುವದು.

(C). ಕಾರ್‍ಯನಿರ್ವಾಹಕಮಂಡಲಿಯಲ್ಲಿ ಸಮಸ್ತ ಭಾಗಗಳ ಪ್ರತಿನಿಧಿಗಳೂ ಇರುವರಾದರೂ, ಇವರೆಲ್ಲ ಮಂಡಲಿಯ ಪ್ರತಿ ಸಭೆಗೆ ಬರುವುದು ಕೇವಲ ಅಸಾಧ್ಯ ವೆಂಬುದು ಸ್ಪಷ್ಟವಾಗಿದೆ. ಹೀಗಾದುದರಿಂದ ಬೆಂಗಳೂರಿನಲ್ಲಿರುವ ೮-೧೦ ಜನ ದೊಡ್ಡಮನುಷ್ಯರು ಮಾತ್ರ ಸೇರಿ ಮಾಡುವ ನಿರ್ಣಯಗಳು ಕಾರ್‍ಯತಃ ಮಂಡಲಿಯ ನಿರ್ಣಯಗಳಾಗಿ ನಿಲ್ಲುವ ಸಂಭವವಿರುವುದು. ಇದರ ದೆಸೆಯಿಂದ ಯಾವ ಕೆಡುಕೂ ಆಗಲಾರದು ನಿಜವಾದರೂ ಮಂಡಲಿಯ ಯಾವತ್ತು ಸದಸ್ಯರ (ಪತ್ರಮುಖೇನ) ಅಭಿಪ್ರಾಯ ಪಡೆದು ನಿರ್ಣಯಿಸತಕ್ಕುದೆಂದು ಮುಖ್ಯವಾದ ಕೆಲಕೆಲವು ವಿಷಯಗ ಳನ್ನು ನಿಬಂಧನೆಗಳಿಂದಲೇ ಪ್ರತ್ಯೇಕಿಸಿಡುವುದು ಉತ್ತಮವೆಂದು ಭಾವಿಸುವೆನು. ಹೀಗೆ ಮಾಡಿದರೆ ಉಳಿದವರ ಕಾರನಿರ್ವಾಹಕ ಸದಸ್ಯತ್ವವು ಕೇವಲ ಗೌರವಾರ್ಥ ಮಾತ್ರ ವಾಗದೆ ಅವರ ಆಲೋಚನೆಯ ಪ್ರಯೋಜನವು ಕೂಡ ಪರಿಷತ್ತಿಗೆ ದೊರೆತಂತಾ ಗುವುದು.

(d). ಪ್ರತಿ ವಿಷಯದಲ್ಲಿಯೂ ಪ್ರತಿ ಬಾರಿಯೂ ಕಾರ್‍ಯದರ್ಶಿಯೇ ಮೊದ ಲಾದ ಉದ್ಯೋಗಸ್ಥರು ಮೇಲ್ಪಟ್ಟವರ ಅನುಜ್ಞೆಯನ್ನು ಪಡೆಯುವುದೆಂದರೆ ಅನವಶ್ಯ ವಾದ ಕಾಲವಿಳಂಬವಾಗುವುದು. ಹೀಗಾದುದರಿಂದ ಸಂದರ್ಭಾನುಸಾರವಾಗಿ ಬಂದ ವಿಷಯಗಳನ್ನು ತೀರ್ಮಾನಗೊಳಿಸಿ ಸುಮ್ಮನಾಗದೆ ಕಾರೈಸಿರ್ವಾಹಕ ಮಂಡಲಿಯ ವರು ಅವುಗಳ ತತ್ತ್ವವನ್ನು ಗ್ರಹಿಸಿ ಅವುಗಳಿಂದಲೇ ಸಾಮಾನ್ಯಕ್ರಮಗಳನ್ನು ಏರ್ಪ ಡಿಸಿ, ಮುಂದೆ ಕಾರ್‍ಯದರ್ಶಿಯು ತದನುಸಾರವಾಗಿ ಕೂಡಲೇ ವರ್ತಿಸುವಂತೆ ಅನುಕೂ