ಪುಟ:ನನ್ನ ಸಂಸಾರ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

12 ಕಾದಂಬರೀಸಂಗ್ರಹ ಲಪಡಿಸಿ ಕೊಟ್ಟರೆ ಎಷ್ಟೋ ಮೇಲುಂಟು. ಇಂಥ ಕ್ರಮವು 'Standing Orders' ಎಂದರೆ ಕಾಯಂ ಹುಕುಮುಗಳೆಂಬ ಹೆಸರಿಂದ ಸರ್ಕಾರದಲ್ಲಿ ಯೂ ಸಲುವಳಿಯಲ್ಲಿದೆ.

(e). ಕಳೆದ ನವೆಂಬರು ೨೦ ನೇ ತಾರಿಖಿನ ದಿನ ನಡೆದ ಕಾರ್‍ಯನಿರ್ವಾಹಕರ ಸಭೆಯಲ್ಲಿ ಒಂದು ವಿಶೇಷವು ಜರಗಿತು. 'ಸರಿಷತ್ತು ಪ್ರಶಸ್ತಿಯನ್ನು ಪಡೆದುಕೊಳ್ಳು ವುದಕ್ಕೆ ಮುಂಚೆ ......ಸಮ್ಮೇಳನದಲ್ಲಿ ಆದ ನಿರ್ಣಯಗಳ ವಿಷಯದಲ್ಲಿ ಕಾರ್ಗ ಳನ್ನು ನಡೆಯಿಸುವುದು ಅಷ್ಟು ಫಲಕಾರಿಯಾದುದಲ್ಲವೆಂದು ಕಾಣುವುದರಿಂದ ಸದ್ಯ ದಲ್ಲಿ ಈ ವಿಷಯವನ್ನು ಮನ್ನಾ ಮಾಡಬಹುದು' ಎಂದು ಕಾ. ನಿ. ಸದಸ್ಯರು ನಿರ್ಣಯಿಸಿ ದರು. ಪರಿಷತ್ತಿನ ಪರಮ ಹಿತೇಚ್ಧುಗಳೂ ಪೂರ್ವಾಪರಜ್ಞರೂ ಆದ ದೊಡ್ಡ ಮನುಷ್ಯರು ಮಾಡಿದ ಈ ನಿರ್ಣಯವು ಯುಕ್ತವಾದುದೇ ಎಂದು ಚೆನ್ನಾಗಿ ಆಲೋಚಿಸಿ ನೋಡಿದ ವರಿಗೆ ಗೋಚರಿಸದಿರದು. ತಥಾಪಿ, ಸಮ್ಮೇಳನದಲ್ಲಿ ಆದ ನಿರ್ಣಯವನ್ನು ಸಮ್ಮೇಳನ ದವರಿಂದಲೇ ನೇಮಿಸಲ್ಪಟ್ಟವರಾದ ಕಾರ್‍ಯನಿರ್ವಾಹಕ ಮಂಡಲಿಯವರು ಈ ರೀತಿ ತಳ್ಳಿಬಿ ಡಲು ಸ್ವತಂತ್ರರೇ ? ಇದು ನ್ಯಾಯಸಮ್ಮತವೇ ? ಎಂದು ಕೆಲವರು ಆಕ್ಷೇಪಿಸಲೂಬ ಹುದು, ಸೂಕ್ಷ್ಮವಾಗಿ ಆಲೋಚಿಸಿದರೆ, ಇದು ನ್ಯಾಯಸಮ್ಮತವಲ್ಲವೆಂದು ಕೂಡ ಹೇಳಬಹುದು. ಆದರೆ ಸಮ್ಮೇಳನವು ಪರಿಷತ್ತಿನ ಪರವಾಗಿ ನಡೆಯತಕ್ಕುದು ; ಅದರಲ್ಲಿ ಪರಿಷತ್ತಿನ ಸದಸ್ಯರಿಗೆ ಮಾತ್ರವಲ್ಲದೆ ಇತರರಿಗೂ ಪ್ರವೇಶಿಸಲು ಅವಕಾಶವಿರುವುದು. ೨-೩ ದಿನದ ಹಬ್ಬದಲ್ಲಿ, ಉತ್ಸಾಹವೇ ಅಧಿಕವಾಗಿರಬಹುದಾದ ಸಮ್ಮೇಳನದ ಸಭೆ ಯಲ್ಲಿ ಆದ ಪ್ರತಿ ನಿರ್ಣಯವನ್ನು ಸ್ಥಿರವಾದ ಪರಿಷತ್ತಿನ ಕಾರ್‍ಯನಿರ್ವಾಹಕರು ನೆರವೇ ರಿಸಲು ಎಷ್ಟು ಮಟ್ಟಿಗೆ ಬದ್ಧರೆಂಬ ಇನ್ನೊಂದು ಪ್ರಸಕ್ತಿಯೂ ಆಲೋಚಿಸತಕ್ಕುದಾಗಿದೆ. ಆದರೆ ಸಮ್ಮೇಳನದ ಯಾವ ನಿರ್ಣಯವೂ ಕಾ.ನಿ. ರನ್ನು ಬದ್ಧ​ ಪಡಿಸಲಾರದೆನ್ನುವುದಾದರೆ ಸಮ್ಮೇಳನವನ್ನು ನಡೆಯಿಸುವುದರಿಂದ ಯಾವ ಪ್ರಯೋಜನವೂ ಉಂಟಾದ ಹಾಗಾಗ ಲಾರದು. ಆದುದರಿಂದ ಉಭಯಪಕ್ಷದವರಿಗೂ ಅಸಮಾಧಾನವಾಗದಂತೆ ಒಂದು ಮಧ್ಯ ಮಾರ್ಗವನ್ನು ಗೊತ್ತುಪಡಿಸುವುದು ಅಗತ್ಯವು. ಸಮ್ಮೇಳನದಲ್ಲಿ ಆದ ಯಾವುದೊಂದು ನಿರ್ಣಯವು ಕಾರಣಾಂತರಗಳಿಂದ ನೆರವೇರಿಸಬರುವುದಿಲ್ಲವೆಂದು ಸಮಸ್ತ ಕಾರ್‍ಯನಿರ್ವಾ ಹಕರೂ ಬಹುಮತದಿಂದ ಅಭಿಪ್ರಾಯಪಟ್ಟರೆ, ಪುನಃ ಅದೇ ನಿರ್ಣಯವು ಮುಂದಿನ ಸಮ್ಮೇಳನದಲ್ಲಿ ಆಗುವತನಕ ಅದನ್ನು ತಡೆದಿಡಬಹುದೆಂದು ಒಂದು ನಿಬಂಧನೆಯನ್ನು ಏರ್ಪಡಿಸಿದರೆ ಈ ಅಡಚಣಿಯು ದೂರವಾಗಬಹುದೆಂದು ನನಗೆ ತೋರುತ್ತಿದೆ.

(f). ಕಳೆದ ಸಮ್ಮೇಳನವು ಕೂಡಿದ ಕಾಲದಲ್ಲಿ 'ಬೊಂಬಾಯಿ, ಮದ್ರಾಸು ಹೈದರಾಬಾದು ಮತ್ತು ಕೊಡಗು ಪ್ರಾಂತ್ಯಗಳಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಶಾಖೆ (branches) ಗಳಿರಬೇಕು ; ಮತ್ಟು ಈ ಪರಿಷತ್ತಿನ ಉದ್ದೇಶಗಳನ್ನೇ ಇಟ್ಟು