ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

13 ಕರ್ನಾಟಕಸಾಹಿತ್ಯ ಪರಿಷತ್ತು ಕೊಂಡು ಕೆಲಸಮಾಡುವ ಇತರ ಸಂಘಗಳನ್ನು ತನ್ನ ಜತೆಗೆ ಸೇರಿಸಿಕೊಳ್ಳುವುದಕ್ಕೆ (to affiliate) ಕ. ಸಾ. ಪರಿಷತ್ತಿಗೆ ಅಧಿಕಾರವಿರಬೇಕು" ಎಂಬುದಾಗಿ ಒಂದು ನಿರ್ಣಯವು ಮಾಡಲ್ಪಟ್ಟಿದ್ದಿತು. ಪರಿಷತ್ತಿನ ವರ್ತಮಾನಸ್ಥಿತಿಯಲ್ಲಿ ಈ ಭಾಗದಲ್ಲಿ ಯಾವ ಕೆಲಸವೂ ಆಗುವಂತಿಲ್ಲವಾದರೂ ಕರ್ಣಾಟಸಾಹಿತ್ಯಾಭಿರುಚಿಸಭ್ಯಯೂ ಸಭ್ಯತೆಯೂ ಜನರಲ್ಲಿ ವಿಸ್ತರಿಸಲು ಇದೇ ಮುಖ್ಯ ಉಪಾಯವಾದಪ್ರಯುಕ್ತ, ಒಂದಲ್ಲ ಒಂದು ದಿನ, ಆದಷ್ಟು ತ್ವರೆಯಾಗಿ, ಈ ಕಾರ್ಯವನ್ನು ಪರಿಷತ್ತಿನವರು ಕೈಕೊಳ್ಳಲೇಬೇಕಾಗಿರುವುದು, ತಥಾಪಿ, ಚೆನ್ನಾಗಿ ಆಲೋಚಿಸಿ ನೋಡಿದರೆ, ಇದರಷ್ಟು ಪ್ರಯಾಸಕರವಾದ ಕೆಲಸವು ಬೇರೊಂದಿಲ್ಲವೆಂಬುದು ಕೂಡ ತೋರಬಾರದಿರದು. ಶಾಖಾಸಂಘ ವೆಂದರೇನು ? ಸ್ವೀಕೃತ (Affiliated) ಸಂಘವೆಂದರೆನು ?- ಈ ಭೇದವು ಮೊದಲು ಸ್ಪಷ್ಟವಾಗಿ ತಿಳಿಯಬೇಕು, ಇವಕ್ಕೂ ಪರಿಷತ್ತಿಗೂ ಇರುವ ಪರಸ್ಪರ ಸಂಬಂಧವು ಗೊತ್ತಾಗಬೇಕು, ಶಾಖೆಗಳ ಅಥವಾ ಸ್ವೀಕೃತ ಸಂಘಗಳ ಒಳ ಆಡಳಿತೆಯ (Internal management) ಲ್ಲಿ ಪರಿಷತ್ತಿನವರು ಎಷ್ಟು ಮಟ್ಟಿಗೆ ಕೈಹಾಕಬಹುದು ? ಪರಿಷತ್ತಿನ ಮೇಲ್ವಿಚಾರಣೆಗೆ ಒಳಪಡಿಸಿಕೊಂಡುದರ ಮೂಲವಾಗಿ ಉಳಿದ ಸಂಘಗಳಿಗೆ ಆಗತಕ್ಕ ಲಾಭವೇನು ?-ಇವೇ ಮುಂತಾದ ವಿಷಯಗಳು ನಿರ್ಣಯವಾಗಬೇಕು, ಆಂಧ್ರ ಸಾಹಿತ್ಯ ಪರಿಷತ್ತಿನವರೂ ಇಂಥ ಒಂದು ಉದ್ದೇಶವನ್ನಿಟ್ಟುಕೊಂಡಿರುವರು. ಈ ಆಂಧ್ರ ಪರಿಷತ್ತು ನಿರ್ಮಾಣವಾಗಿ ನಾಲ್ಕೈದು ವರ್ಷಗಳ ಕಾಲವು ದಾಟಿಹೋಯಿತಾದರೂ ಈ ಉದ್ದೇಶವನ್ನು ಸಾಧಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳೆಲ್ಲ ಇದುವರೆಗೆ ಕೇವಲ ನಿರರ್ಥಕವಾದಂತೆ ತಿಳಿದುಬರುತ್ತಿದೆ. ಇಷ್ಟಾಗಿ ಸ್ವೀಕೃತ ಸಂಘಗಳಿಂದ ಯಾವ ಸಹಾಯವನ್ನೂ ಅಪೇಕ್ಷಿಸದೆ ಒಂದಿಷ್ಟು ಮೇಲ್ವಿಚಾರಣೆಗೆ ಮಾತ್ರ ಒಳಪಡಿಸಿ ಪ್ರತಿ ವಿಷಯದಲ್ಲಿಯೂ ಅಂಥ ಸಂಘಗಳಿಗೆ ತಾವೇ ಸಹಾಯಮಾಡಲು ಆ ಪರಿಷತ್ತಿನವರು ಸಿದ್ಧರಾಗಿದ್ದರು, ಇದಲ್ಲದೆ, ಮದ್ರಾಸುಆಧಿಪತ್ಯಕ್ಕೊಳಪಟ್ಟ ಆಂಧ್ರರೇ ಬಹು ಪಕ್ಷದವರಾಗಿಯೂ ನಾಗರಿಕತೆಯಲ್ಲಿ ಮುಂದೆಬಂದವರಾಗಿಯೂ ಇದ್ದು ಉಳಿದ ಪ್ರಾಂತ್ಯಗಳವರು ಯಾವ ವಿಷಯದಲ್ಲಿಯೂ ಅವರೊಡನೆ ಸಮಾನಸ್ಕಂಧರೆನ್ನಿಸುವ ಯೋಗ್ಯತೆಯನ್ನುಳ್ಳವರಲ್ಲವಾದುದರಿಂದ, ಎಲ್ಲರೂ ಮದ್ರಾಸಿನ ಆ. ಸಾ. ಪರಿಷತ್ತನ್ನೇ ಮುಖ್ಯವಾಗಿ ತಿಳಿಯಲು ಅಭ್ಯಂತರವಾವುದೂ ಇರಲಿಲ್ಲ.

ಕನ್ನಡಿಗರ ಸ್ಥಿತಿಯೇ ಬೇರೆ, ಕರ್ಣಾಟದೇಶವು ಕೇವಲ ಪ್ರತ್ಯೇಕವಾದ ಅಯಿದು ಭಾಗಗಳಾಗಿ ಏರ್ಪಟ್ಟಿದೆ. ಜನಸಂಖ್ಯೆಯಲ್ಲಿಯೂ ಕ್ಷೇತ್ರಫಲದಲ್ಲಿಯೂ ಮೈಸೂರು ಸೀಮೆಯು (ಕೊಡಗು ಬಿಟ್ಟು) ಉಳಿದ ಪ್ರತಿ ಭಾಗಕ್ಕಿಂತ ಸುಮಾರು ಎರಡರಿಂದ ಮಾರುಸಾಲುವರೆಗೂ ದೊಡ್ಡದಾಗಿರುವುದಾದರೂ, ಕರ್ಣಾಟ ಪಾಂಡಿತ್ಯದ ವಿಷಯ