ಪುಟ:ನನ್ನ ಸಂಸಾರ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

14 ಕಾದಂಬರೀಸಂಗ್ರಹ ದಲ್ಲಿಯೂ ಅದು ಮೇಲ್ಗಯ್ಯಾಗಿರುವುದಾದರೂ, ಸಾಮಾನ್ಯತಃ (Culture) ಸಭ್ಯತೆಯ ವಿಷಯದಲ್ಲಿ ಮದ್ರಾಸು ಮತ್ತು ಬೊಂಬಾಯಿ ಕರ್ಣಾಟಗಳು ಕೂಡ ಮೈಸೂರಿಗಿಂತ ಸ್ವಲ್ಪವೂ ಹಿಂದಿಲ್ಲವೆನ್ನಬಹುದು, ಸಾಲದುದಕ್ಕೆ ಈಗ ೨೫ ವರ್ಷದಿಂದ ಚೆನ್ನಾಗಿನಡೆದು ಬಂದಿರುವ ಧಾರವಾಡದ ಕರ್ಣಾಟಕ ವಿದ್ಯಾವರ್ಧಕ ಸಂಘವೂ ಒಂದು ಇರುವುದು. ಇದನ್ನು ಪರಿಷತ್ತಿನ ಶಾಖೆಯಾಗಿ ಏರ್ಪಡಿಸುವುದು ಕಷ್ಟ, ಸುಮ್ಮನಿರುವುದು ಅಸಾಧ್ಯ. ಇಂಥ ಪ್ರತಿ ಕೂಲಸ್ಥಿತಿಯಲ್ಲಿ ಶಾಖಾಸಂಘಗಳನ್ನು ಹೇಗೆ ಸ್ಥಾಪಿಸಬೇಕೋ ? ಇತರ ಸಂಘಗಳನ್ನು ಹೇಗೆ ಸ್ವೀಕರಿಸಿಕೊಳ್ಳಬೇಕೋ ?-ಎಂಬ ಪ್ರಶ್ನವು ಬಹು ಕುಶಲತೆಯಿಂದ ನಿರ್ಣಯಿಸಲ್ಪಡತಕ್ಕುದೆಂಬುದು ಸಭಿಕರಿಗೆ ತಾನಾಗಿಯೇ ತಿಳಿದು ಬಾರದಿರದು. ಇದಕ್ಕೆ ದೀರ್ಘಾನುಭವವೂ ಪೂರ್ವಾಪರವಿವೇಕವೂ ಬೇಕಾದುದೇ ವಿನಾ ಬರೀ ಭಾಷಾ ಪಾಂಡಿತ್ಯವಲ್ಲ ; ಯಾವ ಭಾಗದವರಿಗೂ ಯಾವ ಪಕ್ಷದವರಿಗೂ ಮನಸ್ಸು ನೋಯದ ಹಾಗೆ ಈ ಕೆಲಸವನ್ನು ನೆರವೇರಿಸಬೇಕಾಗಿದೆ. ಹೀಗಾದುದರಿಂದ ಕಾರ್ಯನಿರ್ವಾಹಕರು ಇದರ ವಿಚಾರವನ್ನು ವಿಳಂಬಿಸದೆ, ಪ್ರತಿ ಭಾಗದಿಂದಲೂ ಪ್ರಮುಖರಾದ ಎರಡು ಮೂರು ಮಂದಿ ದೊಡ್ಡ ಮನುಷ್ಯರನ್ನು ಸಭಿಕರಾಗಿ ಏರ್ಪಡಿಸಿ ಪರಿಷದಧ್ಯಕ್ಷರಾದ ಶ್ರೀಯುತ ನಂಜುಂಡೈಯ್ಯನವರು ತಾವೇ ಈ ಉಪಸಭೆಯ ಪ್ರವರ್ತಕರಾಗಿ ನಿಂತು, ಈ ದೊಡ್ಡ ಪ್ರಶ್ನವನ್ನು ಸರ್ವಸಮ್ಮತವಾದ ರೀತಿಯಲ್ಲಿ ತೀರಿಸುವುದು ಅಗತ್ಯವಾಗಿದೆ. "ಸಿರಿಗನ್ನಡಂಗೆಲ್ಗೆ"