ಪುಟ:ನನ್ನ ಸಂಸಾರ.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಕಾದಂಬರೀ ಸಂಗ್ರಹ , , ,

  • * * * * * *
  • r " f\ 11 hhhhhhhhnn h AAAAAAAAAAA

ರೋ-ಹಾಗಾದರೆ ಈ ಯುಗದಲ್ಲಿ ಯಾರೂ ಇಲ್ಲವೆ? ಕ-ಭಾರತಿ, ಲೀಲಾವತಿ, ಸರೋಜಿನಿ, ಸುಬಾಲೆ, ಸೂರ್ಯವತಿ, ಶೀಲವತಿ ಮೊದಲಾದವರು ಈ ಯುಗದವರು. ಇವರೂ ಕೂಡ ಪರಲೋಕಯಾತ್ರೆಯನ್ನು ಮಾಡಿದ್ದರೂ, ಅವರಿಂದ ರಚಿಸಲ್ಪಟ್ಟ ಅನೇಕ ಗ್ರಂಥಗಳು ಅವರ ಪ್ರಸಿದ್ಧಿಗೆ ಕಾರಣವಾಗಿವೆ. ರೋ-ಅತ್ತೆಮ್ಮ ! ಅವುಗಳಾವವು. ಕ-ಪೂರ್ವಯುಗದ ಮಹಿಳೆಯರು ರಚಿಸಿರತಕ್ಕ ಗ್ರಂಥಗಳನ್ನು ಹೇಳಲೋ? ಅಧವಾ ಈ ಯುಗದ ಮಹಿಳೆಯರಿಂದ ರಚಿಸಲ್ಪಟ್ಟ ಗ್ರಂಥಗಳನ್ನು ಹೇಳಲೋ? ರೋ-ಎಲ್ಲವನ್ನೂ ಹೇಳಿ, ಕ-ವಿಶ್ವವರೆಯು ಋಗ್ವೇದದ ಐದನೆ ಮಂಡಲದಲ್ಲಿ 28 ನೆಯ ಸೂಕ್ತವನ್ನೂ, ಲೋಪಾಮುದ್ರಾದೇವಿಯು ಋಗ್ವೇದದಲ್ಲಿ 179 ನೆಯ ಸೂಕ್ತವನ್ನೂ ರಚಿಸುವರು, ಮೈತ್ರೇಯಿಯು ಮಿತ್ರರಾಜನ ವೇದಪಾಠಾಲಯದಲ್ಲಿ ಉಪಾಧ್ಯಾಯಿನಿಯಾಗಿದ್ದಳು, ದೇವಹೂತಿ ಯೆಂಬುವಳು ಕಪಿಲಮುನಿಯ ತಾಯಿಯು, ಈಕೆಯೇ ಮೊದಲು ತನ್ನ ಮಗನಿಗೆ ವಿದ್ಯಾಭ್ಯಾಸವನ್ನು ಮಾಡಿಸಿ ದರ್ಶನಶಾಸ್ತ್ರವನ್ನು ಪ್ರಚುರಪಡಿಸುವುದಕ್ಕೆ ಉತ್ತೇಜನ ಕೊಟ್ಟಳು. ಸಂಗಮಿತೆಯು ಸಿಂಹಳದ್ವೀಪಕ್ಕೆ ಹೋಗಿ ಬೌದ್ಧ ಮತಧರ್ಮಗಳನ್ನು ಬೋಧಿಸಿ ಅನೇಕರು ಬೌದ್ಧಮತವನ್ನವಲಂಬಿಸುವಂತೆ ಮಾಡಿದಳು. ವಿಕ್ರಮಾದಿತ್ಯ ರಾಯನ ಸಭೆಯ ಮಹಾಪಂಡಿತನೊಬ್ಬನ ಕುವರಿಯಾದ ಖನೆಯು ಜೋತಿಷಶಾಸ್ತ್ರವನ್ನು ಅಭ್ಯಾಸಮಾಡಿ ಲೋಕೋಪಕಾರಮಾಡಿರುವಳು, ಶಕುಂತಲಾದೇ ವಿಯು ರಾಜನಾದ ದುಷ್ಯಂತಮಹಾರಾಜನಿಗೆ ಬರೆದ ಪತ್ರಿಕೆಯಿಂದಲೇ ಆಕೆಯು ವಿದ್ಯಾವತಿಯಾಗಿದ್ದಳೆಂಬುದು ವ್ಯಕ್ತಪಡಿಸುವುದು, ರುಕ್ಮಿಣೀದೇವಿಯು ತನ್ನ ತಂದೆಯು ತನ್ನನ್ನು ದುಷ್ಟನಾದ ಶಿಶುಪಾಲನಿಗೆ ಕೊಟ್ಟು ವಿವಾಹವನ್ನು ಮಾಡಬೇಕೆಂದಿದ್ದ ಸಂಗತಿಯನ್ನು ಪತ್ರಮುಖೇನ ಬ್ರಾಹ್ಮಣನ ಮೂಲಕ ಶ್ರೀಕೃಷ್ಣಪರಮಾತ್ಮನಿಗೆ ತಿಳಿಸಲಿಲ್ಲವೆ ? ಸತ್ಯಭಾಮೆ , ಚಂದ್ರಮತಿ ಮೊದಲಾದವರೂ ಕೂಡ ಹೀಗೆಯೇ. ಕಲಿಯುಗದಲ್ಲಾದರೋ ಮಂಡಮಿಶ್ರನ ಪತ್ನಿಯಾದ ಭಾರತೀದೇವಿಯು ತನ್ನ ಗಂಡನಿಗೂ ಶ್ರೀಮಚ್ಛಂಕರಭಗವತ್ಪಾದಾಚಾರ್ಯರವರಿಗೂ ನಡೆದ ವಾದದಲ್ಲಿ ಮಾಧ್ಯಸ್ಧ್ಯವನ್ನು ವಹಿಸಿರಲಿಲ್ಲವೆ ? ಭಾಸ್ಕರಾಚಾರ್ಯರವರ ಕುವರಿಯಾದ ಲೀಲಾವತಿಯು ಗಣಿ ತಾಗ್ಯದಲ್ಲಿ ನಿಪುಣೆ ಯಾಗಿ ಲೀಲಾವತಿಯೆಂಬ ಗ್ರಂಥವನ್ನು ರಚಿಸಿರುವಳು. ಹೀಗೆಯೇ ಎಷ್ಟೋ ಮಂದಿ ಮಹಿಳೆಯರು ವಿದ್ಯಾವತಿಯರಾಗಿದ್ದರು.