ಪುಟ:ನನ್ನ ಸಂಸಾರ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೋಹಿಣಿ YYYYYYYYYY V/v** * * * * * * * • • # » ೪ v \ \ \r\ \ \ \ \ \ \ \ " * * * * * * *

  • * \)

ರೋ-ಅವರಂತೆಯೇ ನಾವೂ ಅಭ್ಯಾಸಮಾಡಲು ಆಗುವುದೇ ? ಏನೋ ಸ್ವಲ್ಪ ಓದುಬರಹವನ್ನು ಕಲಿತರೆ ಸಾಲದೆ ? ಕ-ಹಾಗಾದರೆ ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ? ರೋ-ಸ್ವಲ್ಪ ಕಲಿಯುವುದಕ್ಕೂ ಕೂಡ ಪಾಠಶಾಲೆಗೇ ಹೋಗಬೇಕೆ ? ಮನೆಯಲ್ಲಿ ಓದುಕೊಳ್ಳಲಾಗುವುದಿಲ್ಲವೆ ? ಕ-ಪಾಠಶಾಲೆಯಲ್ಲಿರತಕ್ಕ ಅನುಕೂಲಗಳು ಮನೆಯಲ್ಲಿಲ್ಲದ್ದರಿಂದ ಸುಲಭವಾಗಿಯೂ ಜಾಗ್ರತೆಯಾಗಿಯೂ ಕಲಿಯಲು ಅವಕಾಶವಿಲ್ಲ. ರೋ-ಪಾಠಶಾಲೆಯಲ್ಲಿರತಕ್ಕ ಅನುಕೂಲಗಳೇನು ? - ಕ-ಸರ್ಕಾರದವರು ಯೋಗ್ಯರಾದ ಉಪಾಧ್ಯಾಯರನ್ನು ನಿಯಮಿಸಿ ಸುಲಭವಾಗಿ ವಿದ್ಯೆಯನ್ನು ಕಲಿಸಲು ಅನುಕೂಲವಾದ ಸಲಕರಣೆಗಳನ್ನು ಕಲ್ಪಿಸಿರುವರು. ಅಲ್ಲದೆ ಅನೇಕರು ಅಲ್ಲಿ ವಿದ್ಯಾಭ್ಯಾಸಮಾಡುತ್ತಿರುವರು, ಆದುದರಿಂದ ಅಮೂಲ್ಯವಾದ ವಿದ್ಯೆಯನ್ನು ಕಲಿಯಲು ಪಾಠಶಾಲೆಗೆ ಹೋಗುವುದು ಒಳ್ಳೆಯದು. - ರೋ-ವಿದ್ಯೆಯು ಅಮೂಲ್ಯವಾದದ್ದೆಂದು ಹೇಳಿದೆಯಲ್ಲ, ಅದು ಹೇಗೆ ? ಕ-ಅದನ್ನು ವಿವರಿಸಿ ಹೇಳಬೇಕಾದರೆ ಅನೇಕ ದಿನಗಳು ಹಿಡಿಯುವುವು. ರೋ-ಅತ್ತೆಮ್ಮ ! ಚರ್ಚಿಸಿದುದಕ್ಕಾಗಿ ಅಜ್ಞಳಾದ ನನ್ನ ತಪ್ಪನ್ನು ಕ್ಷಮಿಸಬೇಕು, ಎಂದು ನಮಸ್ಕಾರಮಾಡಿದಳು, ಅದನ್ನು ನೋಡಿ ಕರುಣಾಂಬೆಯು ಮಗೂ! ರೋಹಿಣಿ ! ನೀನು ತಿಳಿದುಕೊಳ್ಳುವುದಕ್ಕಾಗಿ ಇಷ್ಟು ವಿಚಾರ ಮಾಡಿದುದು ಬಹಳ ಒಳ್ಳೆಯದೇಆಯಿತು, ಎಂದು ಹೇಳಿ ಆಕೆಯನ್ನು ಆಲಂಗಿಸಿದಳು ಮತ್ತೆ ರೋಹಿಣಿಯನ್ನು ಕುರಿತು ಮಗೂ ! ನೀನು ನಾಳೆಯಿಂದ ಪಾಠಶಾಲೆಗೆ ಹೋಗುವಿಯೋ ?ಎಂದು ಪ್ರಶ್ನಿಸಲು ರೋಹಿಣಿಯು ಬಹು ನಮ್ರತೆಯಿಂದ ಅತ್ತೆ ! ತಂದೆಯು ಇದುವರೆಗೆ ನನ್ನನ್ನು ಶಾಲೆಗೇತಕ್ಕೆ ಕಳುಹಿಸಲಿಲ್ಲ ಎಂದು ಕೇಳಿದಳು. ಕ-ಮಗೂ ! ನಿಮ್ಮ ತಂದೆಯು ಇದ್ದ ಊರು ಬಹಳ ಸಣ್ಣದು. ಅಲ್ಲಿ ಪಾಠಶಾಲೆ ಯಿಲ್ಲ. ಕರುಣಾಂಬೆಯ ಮಾತಿನಂತೆ ರೋಹಿಣಿಯು ಮಾರನೆಯದಿನದಿಂದ ಪಾಠಶಾಲೆಗೆ ಹೋಗಲಾರಂಭಿಸಿದಳು. ಲೋಕದಲ್ಲಿ ತಿಳಿಯದವನಿಗೆ ಸುಲಭವಾಗಿ ತಿಳಿಸಬಹುದು, ತಿಳಿದವನಿಗೆ ಇನ್ನೂ ಸುಲಭವಾಗಿ ತಿಳಿಸಬಹುದು. ತಿಳಿದೂ ತಿಳಿಯದ ಮೂರ್ಖನಿಗೆ ತಿಳಿಸಲು ಬ್ರಹ್ಮನಿಗೂ ಕೂಡ ಅಸಾಧ್ಯವು, ಎಂಬ ಭರ್ತೃಹರಿಯ ನುಡಿಯಂತೆ ನಮ್ಮ ರೋಹಿ