ಪುಟ:ನನ್ನ ಸಂಸಾರ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ರೋಹಿಣಿ 13 ವಾಯುವಿನ ಸಹಾಯದಿಂದ ಸಂಚಿತಕರ್ಮಗಳಂತಿರುವ ಎಲ್ಲಾ ಪತ್ರಗಳನ್ನೂ ದೂರ ಮಾಡಿ ನಿರ್ಲಿಪ್ತನಂತೆ ನಿರ್ಮಾಣವನ್ನು ಹೊಂದಿದಂತೆ ತೋರುವುವು. ಮೃಗಗಳು ಕಾಡಿ ನಲ್ಲಿ ಬೆಳೆದಿರುವ ತೃಣಗಳನ್ನು ಯಥೇಚ್ಛವಾಗಿ ಉಪಯೋಗಿಸಿಕೊಂಡು ಆಶಾಪಾಶಬದ್ಧ ರಾಗಿರುವ ಕೃಪಣರ ಲೋಭದಂತೆ ನಿರಂಕುಶಗಳಾಗಿದ್ದವು. ಕೋಗಿಲೆಗಳು ಈ ಕಾಲವು ತೊಲಗಿ ವಸಂತಕಾಲವು ಬಂದು ವೃಕ್ಷಗಳೆಲ್ಲವೂ ಚಿಗುರುವವರೆಗೂ ತಾವು ಅಧರಸ್ಪಂದ ಮಾಡಬಾರದೆಂದು ನಿಯಮವನ್ನು ಮಾಡಿಕೊಂಡಿರುವಂತೆ ಮೌನವಾಗಿದ್ದವು.ಕಾಗೆ ಗಳು ತಮ್ಮ ಗೂಡಿನಲ್ಲಿ ತಮ್ಮ ತತ್ತಿಗಳೊಡನೆ ಕೋಗಿಲೆಗಳು ತಂದು ಇಟ್ಟ ಮೊಟ್ಟೆಗೆ ಳನ್ನೂ ಕೂಡ ತಮ್ಮವುಗಳೇ ಎಂಬ ಭ್ರಾಂತಿಯಿಂದ ಅವುಗಳಮೇಲೆ ಕುಳಿತು ಪ್ರೀತಿ ಯಿಂದ ಮರಿಗಳನ್ನು ಮಾಡುತಲಿದ್ದವು, ದರಿದ್ರರ ಗೃಹಗಳ ಭಿತ್ತಿಗಳಲ್ಲಿರುವ ತಿಗುಣೆ ಗಳು ಮೊದಲು ಮನುಷ್ಯರ ಶುರಗಳನ್ನು ಕಚ್ಚಿ ರಕ್ತ ಪಾನಮಾಡುತ್ತಿದ್ದ ದುರ್ಗುಣ ವನ್ನು ಬಿಟ್ಟು ಸಜ್ಜನರ ಹಾಗೆ ಪರಹಿಂಸೆಯನ್ನು ಮಾಡದೆ ಮುನ್ನ ಮಾಡಿದ ಪಾಪವು ಕಳೆಯಲಿ ಎಂದು ಉಪವಾಸವ್ರತದಿಂದ ಕೃಶವಾಗಿವೆಯೋ ಎಂಬಂತೆ ಚರ್ಮಮಾತ್ರ ದಿಂದ ಪ್ರಾಣವನ್ನಿಟ್ಟು ಕೊಂಡಿರುವುವು. ಲೋಕಕ್ಕೆಲ್ಲಾ ತೆಜಸ್ಸನ್ನೂ ಔಷ್ಟವನ್ನೂ ದಯಪಾಲಿಸತಕ್ಕ ಸೂರ್ಯದೇವನು ಸೌಮ್ಯನಾಗಿ ಹಿಮಕರನಂತಿರುವನು. ಸಂಚಾರಕ್ಕೆ ಮಧ್ಯಾನ್ಯವೇಳೆಯು ಅತಿ ರಮ್ಯವಾಗಿರುವುದು, ನಿಶಿಯಲ್ಲಿ ನಿಶಾಕಾಂತನು ಹಿಮಾವೃತ ನಾಗಿ ಕಳೆಗುಂದಿರುವನು. ಪಡುವಣ ಗಾಳಿಯು ಶೀತಲವಾಗಿ ಬೀಸುತಲಿರುವುದು. ಧರಣಿಯು ಎಲ್ಲಿ ನೋಡಿದರೂ ಪೈರುಹಚ್ಚೆಗಳಿಂದ ತುಂಬಿತುಳುಕಿ ಆಹ್ಲಾದಕರವಾಗಿ ರುವುದು, ಚಾಡಿಕಾರರ ಮಾತಿಗೆ ಕಿವಿಗೊಡುವ ಸೃಢೀಪಾಲನ ಸಿರಿಯಂತೆಯ ಉತ್ತಮವಾದ ಸ್ತ್ರೀಪುರುಷರ ಕೋಪದಂತೆಯೂ ಹಗಲು ಬೇಗ ತೊಲಗುತಲಿರುವುದು. ಕ್ಷಿತಿಪರೆಲ್ಲರೂ ತಮ್ಮ ವೈರಿಗಳಮೇಲೆ ಚತುರಂಗಸೇನಾಸಮೇತರಾಗಿ ಕದನಕ್ಕೆ ತೆರಳು ವರು, ವಿಪಿನಗಳಲ್ಲಿ ಹಸ್ತಿಗಳು ಚಳಿಯನ್ನು ತಾಳಲಾರದೆ ತಮ್ಮತಮ್ಮ ಸೊಂಡಲುಗ ಳನ್ನು ಬಾಯಲ್ಲಿ ಮುಚ್ಚಿಕೊಂಡು ಶೀತಳವಾದ ಜಲವನ್ನು ನೀರಡಿಕೆಯಾದಾಗ್ಯೂ ಕುಡಿಯಲಾರದೆ ಬಳಲುತಲರುವುವು, ವನಾವಳಿಗಳು ವೂಗಳಿಲ್ಲದೆ ಮಲಗಿ ನಿದ್ರೆಹೋ ಗುತ್ತಿವೆಯೋ ಎಂಬಂತಿರುವುವು. ಇಂತಹ ಶೈತ್ಯಗಾಲದಲ್ಲಿ ಒಂದಾನೊಂದು ದಿನ ಸಚ್ಚಿದಾನಂದನು ಅಗ್ಗಿಷ್ಟಿಕೆ ಯಲ್ಲಿ ಬೆಂಕಿಯನ್ನು ಕಾಯಿಸಿಕೊಳ್ಳುತಲಿದ್ದನು. ಈತನ ವಾಸಸ್ಥಳವು ಸುವರ್ಣ ಪುರಕ್ಕೆ ಅನತಿದೂರದಲ್ಲಿರುವ ಪದ್ಮ ಪುರಿ ಎಂಬುವುದೊಂದು ಸಣ್ಣ ಗ್ರಾಮ. ಈತನು ಪೂರ್ವದಲ್ಲಿ ಕೇರಳದೇಶದವನು. ಬಾಲ್ಯದಲ್ಲಿಯೇ ಮಾತಾಪಿತೃಗಳ ಎಯೋಗವನ್ನು