ಪುಟ:ನನ್ನ ಸಂಸಾರ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಕಾದಂಬರಿ ಸಂಗ್ರಹ ಹೊಂದಿ ಕಡುತರವಾದ ಕಷ್ಟಗಳನ್ನನುಭವಿಸಿ ಕೊನೆಗೆ ಈ ಪದ ಪುಂಗ್ರಾಮಕ್ಕೆ ಬಂದು ಅಲ್ಲಿಯ ಜನರ ಅನುರಾಗಕ್ಕೆ ಪಾತ್ರನಾಗಿ ಅಲ್ಲಿ ವಾಸಿಸುತ್ತಿದ್ದನು. ಈತನು ವೇದಾ ಧ್ಯಯನ ಸಂಪನ್ನನು. ಸದಾಚಾರಶೀಲನು. ಕರ್ಮಠನು. ದಾನಶೀಲನು. ಸತ್ಯವಂತನು. ಬಹು ದರಿದ್ರಾವಸ್ಥೆಯಲ್ಲಿದ್ದ ಈತನು ಬಹುದಿವಸದಮೇಲೆ ಸತ್ತು ಲಪ್ರಸೂತೆಯ.ಸದಾಚಾರಸಂಪನ್ನಳೂ. ರೂಪವತಿಯ ಆದ ವಿಮಲಾಂಬೆಯೆಂಬ ಕನ್ಯಾರತ್ನ ವನ್ನು ವಿವಾಹಮಾಡಿಕೊಂಡು ಗೃಹಸ್ಥನಾಗಿ ಆ ಗ್ರಾಮದ ಜನರಿಂದ ಲಭಿಸಿದ ದ್ರವ್ಯದಿಂ ದಲೇ ಕಾಲಯಾಪನೆಮಾಡುತಲಿದ್ದನು. ಬಹುದಿವಸವಾದಾಗ್ಯೂ ಈ ದಂಪತಿಗಳಿಗೆ ಸಂತಾನವುಂಟಾಗಲಿಲ್ಲ. ಇದು ತಮ್ಮ ಪೂರ್ವಾರ್ಜಿತಪಾಪವೆಂದೂಷಿಸಿ ಇದಕ್ಕೆ ಪುಣ್ಯ ತೀರ್ಥಸ್ನಾನ. ಮತ್ತು ಭಗವತೇವೆಯೇ ಪರಿಹಾರವೆಂದು ಯೋಚಿಸಿ ಸಕಲ ಪುಣ್ಯತೀರ್ಥ ಗಳಲ್ಲಿ ಯ ಮಿಂದು ಸಕಲ ಕ್ಷೇತ್ರಗಳಲ್ಲಿಯೂ ಭಗವಂತನ ಪಾದಸೇವೆಯನ್ನು ಪರ ಮಭಕ್ತಿಯಿಂದ ಮಾಡತೊಡಗಿದರು.ಕೂಡಲೆ ಮಾಡಿದ್ದ ದುಷ್ಕೃತ್ಯಗಳು ತೊಲಗಿ ದವೋ ಎಂಬಂತೆ ವಿಮಲಾಂಬೆಯು ಈರ್ವರು ಪುತ್ರರನ್ನೂ ಓರ್ವ ಪುತ್ರಿಯನ್ನೂ ಪಡೆದು ಮಕ್ಕಳ ಆಟಪಾಟಗಳನ್ನು ನೋಡದೆಯೇ ಸ್ವಾಮಿ ಪಾದಾರವಿಂದವನ್ನು ಸೇರಿ ದಳು. ಪತ್ನಿ ಹೀನನಾದ ಸಚ್ಚಿದಾನಂದನು ಮಕ್ಕಳ ಅಭಿವೃದ್ಧಿಯನ್ನೇ ಮುಖ್ಯವಾಗಿ ಟ್ಟುಕೊಂಡು ಪತ್ನಿ ಯ ದುಃಖವನ್ನು ತೊರೆದು ಜೇಷ್ಠ ಪುತ್ರನಿಗೆ ಕರುಣಾಕರನೆಂದೂ ಕನಿಷ್ಟನಿಗೆ ದಯಾಕರನೆಂದೂ ಕುವರಿಗೆ ಕರುಣಾಂಬೆಯೆಂದೂ ನಾಮಕರಣಗಳನ್ನು ಮಾಡಿ ಮಾತೃಹೀನರಾದ ಮಕ್ಕಳೆನಿಸದಂತೆ ಸಂರಕ್ಷಿಸುತ್ತಲಿದ್ದನು. ತಾನು ದರಿದ್ರನಾ ಗಿದ್ದಾಗ್ಯೂ ತನ್ನ ಇಬ್ಬರು ಮಕ್ಕಳನ್ನೂ ಒಂದೇಸಮನಾಗಿ ವಿದ್ಯಾವಂತರನ್ನಾಗಿ ಮಾಡಬೇಕೆಂಬ ಕುತೂಹಲವು ಇವನಿಗೆ ಬಹಳವಾಗಿದ್ದಿತಾದರೂ ದ್ರವ್ಯಸಹಾಯವಿಲ್ಲ ದ್ದರಿಂದ ಚಿಂತಾಬ್ಲಿಯಲ್ಲಿ ಮುಳುಗಿದ್ದನು. ಇತ್ತ ಸುವರ್ಣಪುರದ ಪುರಾಧ್ಯಕ್ಷನ ದ್ವಿತೀಯಪತ್ನಿಯು ಲೋಕಾಂತರವ ವೈ ದಿದಳು. ಸೌಂದರ್ಯ. ಸುಗುಣ, ವಿವೇಕದಲ್ಲಿ ಬುದ್ದಿಮತಿಯಾಗಿ ಕರುಣಾಂಬೆ ಯು ಹೆಚ್ಚು ಹಣ ಇರುವುದನ್ನು ಆ ಪರಾಧ್ಯಕ್ಷನು ಕೇಳಿ ತನಗೆ ಆ ಕನ್ವಯನ್ನು ಕೊಟ್ಟರೆ ಬಹಳವಾಗಿ ಧನ ಕೊಡುವುದಾಗಿ ಹೇಳಿಸಿದನು. ಇದನ್ನು ಕೇಳಿ ಸಚ್ಚಿದಾನಂ ದನು ಬಹು ದಃಖಿತನಾಗಿ ಮನಸ್ಸಿನಲ್ಲಿ ಇಷ್ಟವಿಲ್ಲದಿದ್ದರೂ ತನ್ನ ಗಂಡಮಕ್ಕಳ ವಿದ್ಯಾಭಿವೃದ್ಧಿಗೋಸ್ಕರವಾದರೂ ಇದು ಒಂದುಪಕ್ಷ ಅನುಕೂಲವೆಂದೂ ಯೋಚಿಸಿ ಮಗಳನ್ನು ಕೊಡಲೊಪ್ಪಿದನು. ಬಹಳ ವಿಜೃಂಭಣೆಯಿಂದ ಕರುಣಾಂಬೆಗೂ ಸುವರ್ಣ ಪುರದ ಪುರಾಧ್ಯಕ್ಷನಿಗೂ ವಿವಾಹವು ನೆರವೇರಿತು. ಸಚ್ಚಿದಾನಂದನಿಗೆ ಅಪಾರವಾದ ದ್ರವ್ಯವೂ ಲಭಿಸಿತು.