ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಹಿಣಿ 15 hhhr\ >\n\ \ #\ \r\ # \ n 1 \ \ \ : \ \ * * * * * * * * * * * * * * * * * * * * * * \ \ \ \ A # P1 #\ N ANNhhhh ಎಲ್‌! ಲಕ್ಷ್ಮಿದೇವಿಯೇ !, ನಿನ್ನ ಅನುಗ್ರಹವೊಂದಿದ್ದರೆ ಎಂಥವನಾದರೂ ಸತ್ಕುಲಪ್ರಸೂತನೂ, ರೂಪವಂತನೂ, ವಿದ್ಯಾವಂತನೂ, ವಾಚಾಳಿಯ, ಸದ್ದು ಣಿಯೂ, ಆಗುವನು, ನಿನ್ನ ಕಟಾಕ್ಷ ಮಾತ್ರದಿಂದಲೇ ಎಲ್ಲ ಜನರೂ ಮಿತ್ರರೂ, ಬಂಧು ಗಳೂ, ಆಗುವರು; ನೀನು ಮಾಡಬಾರದ ಕೆಲಸಗಳನ್ನೂ ಕೂಡ ಮಾಡಿಸಿಬಿಡುವೆ. ಇಷ್ಟೇ ಅಲ್ಲ, ನೀನು ಮಾತಾಪಿತೃಗಳನ್ನೂ , ಭ್ರಾತೃಗಳನ್ನೂ, ಬಂಧು, ಮಿತ್ರರನ್ನೂ ಕ್ಷಣಮಾತ್ರದಲ್ಲೇ ಅಗಲಿಸುವೆ. ಪುನಃ ಸೇರಿಸುವೆ. ಹೇ ! ಧನಮಾತೆ ! ನಿನ್ನ ಶಕ್ತಿ ಯು ಅಪಾರವಾದುದು. ನೀನು ವಿಮುಖಳಾದರೆ ಅಗ್ನಿ ಸಾಕ್ಷಿಯಾಗಿಯೂ, ಪಾಣಿಗ್ರಹ ಣಮಾಡಿಕೊಂಡು ಅರ್ಧಾಂಗಿಯೆನ್ನಿಸಿಕೊಂಡಿರುವ ಸತಿಯೂ ಕೂಡ ಜರಿಯುವಳು ! ಮುಖ್ಯವಾಗಿ ಲೋಕವೆಲ್ಲವೂ ನಿನ್ನ ದಯದಿಂದಲೇ ನಿಂತಿರುವುದು, ನೀನು ಮುನಿದರೆ ಲೋಕವೇ ನಾಶವಾಗುವುದು. ಹೇ ! ಚಂಚಲಸ್ವರೂಪವೇ ನಿನಗೆ ಅನೇಕ ನಮಸ್ಕಾರ ಗಳಿರಲಿ ! ನಮ್ಮನ್ನು ಅನುಗ್ರಹಿಸು, ಪ್ರಕೃತಸಚ್ಚಿದಾನಂರನೂ ಕೂಡ ನಿನ್ನ ಕಟಾಕ್ಷಸಂ ಪಾದನೆಗಾಗಿ ಮಾತೃವಿಹೀನಳಾದ ತನ್ನ ಮುದ್ದು ಕುವರಿಯನ್ನು ವೃದ್ಧನೂ, ಪುತ್ರವಂ ತನೂ, ಪರಲೋಕಪ್ರಯಾಣೋನ್ಮುಖನೂ ಆದ ಸುವರ್ಣವುರಾಧ್ಯಕ್ಷನಿಗೆ ಕೊಟ್ಟು ವಿವಾಹಮಾಡಿದನು. ಈ ದ್ರವ್ಯದಿಂದ ಸಚ್ಚಿದಾನಂದನು ತನ್ನ ಪುತ್ರರೀರ್ವರಿಗೂ ವಿದ್ಯಾಭ್ಯಾಸಮಾ ಡಿಸತೊಡಗಿದನು. ಕೆಲ ಕಾಲದಲ್ಲಿಯೇ ಸಕಲವಿದ್ಯಾಪಾರಂಗತರೂ, ಯೌವನಸ್ಥರೂ, ದೃಢಾಂಗರೂ ಆದ ಪುತ್ರರನ್ನು ನೋಡಿ ತಂದೆಯು ಸಂತೋಷಾಬ್ಬಿಯಲ್ಲಿ ಮುಳುಗಿ ಇಂತು ಆಲೋಚಿಸಿದನು. ನನಗೆ ವೃದ್ಧಾಪ್ಯವು ಸನ್ನಿಹಿತವಾಗುತ್ತಾ ಬಂತು. ತನ್ನ ಪುತ್ರರೀರ್ವರಿಗೂ ಸುಲಪ್ರಸೂತೆಯರಾದ ಕನ್ಯಾರತ್ನಗಳನ್ನು ತಂದು ವಿವಾಹವನ್ನು ನೆರವೇರಿಸಿದರೆ ತನ್ನ ವಂಶವು ಆಚಂದ್ರಾರ್ಕಸ್ಥಾಯಿಯಾಗಿ ನಿಲ್ಲುವುದೆಂದು ಭಾವಿಸಿ ಅನುರೂಪರಾದ ಕನೈಯರನ್ನು ವಿಚಾರಮಾಡಲುಪಕ್ರಮಿಸಿದನು. ಇದನ್ನು ಅರಿತ ಕನ್ಯಾಪಿತೃಗಳನೇಕರು ಯೌವನಸ್ಥರೂ ರೂಪವಂತರೂ, ವಿದ್ಯಾವಂತರೂ, ಸದ್ಗುಣ ಶೀಲರೂ, ಆದ ಕರುಣಾಕರ, ದಯಾಕರರಿಗೆ ಹೆಣ್ಣು ಕೊಡಲು ನಾನುತಾನೆಂದು ಮೇಲಾಡಲಾರಂಭಿಸಿದರು, ಪಾಠಕರೇ ! ಕನ್ಯಾ ಸಂಖ್ಯೆಯು ಅತ್ಯಧಿಕವಾಗಿರುವ ಈ ಕಾ ಲದಲ್ಲಿ ಕನೈಯಪಿತನು ವರಪಿತನ ಸನ್ನಿಧಿಯಲ್ಲಿ ತನ್ನ ಕನ್ಯಾಪಿತೃತ್ವವನ್ನು ಹೋಗಲಾ ಡಿಸಿಕೊಡಬೇಕೆಂದು ಬಹು ನವ್ರಭಾವದಿಂದ ಬೇಡಿಕೊಂಡರೆ ಆಗ, ವರಸಿತನ ಅಹಂ ಕಾರವನ್ನೂ ಔದಾಸೀನ್ಯವನ್ನೂ ವರ್ಣಿಸುವುದು ಅಸಾಧ್ಯವೇಸು, ಮತ್ತು ವರದಕ್ಷಿಣೆ, ವಿವಾಹದ ವೆಚ್ಚ, ವರನಮುಂದಿನ ವಿದ್ಯಾಭ್ಯಾಸದ ವೆಚ್ಚ ಇವುಗಳೆಲ್ಲವನ್ನೂ ವಹಿಸಿ