ಪುಟ:ನನ್ನ ಸಂಸಾರ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪೀಠಿಕೆ .

ಸ್ಕಾಂದಪುರಾಣಾಂತರ್ಗತವಾಗಿರುವ ಈ ಗಣಪತಿಯ ಮಹಿಮೆಯಲ್ಲಿ 24 ಅಧ್ಯಾಯಗಳಿರುವುವು. ಇದುವರೆಗೂ ಈ ಗಣಪತಿಯ ಮಹಿಮೆಯು ಕನ್ನಡದಲ್ಲಿ ಪದ್ಯ ರೂಪವಾಗಿ ಪ್ರಕಟವಾದಂತೆ ಕಾಣಿಸಲಿಲ್ಲ, ಈಗ ಗಣಪತಿಯನ್ನು ಸರ಼಼್ವರೂ ಕಾರಾರಂಭದಲ್ಲಿಯೇ ಅರ್ಚಿಸುತ್ತಿರುವುದು ಸುಪ್ರಸಿದ್ಧವಾಗಿದೆ. ಹೀಗೆ ಆದಿಪೂಜ್ಯನಾದ ವಿನಾಯಕನ ಅವತಾರ ಕಥೆಯನ್ನು ಸರರೂ ತಿಳಿಯಬೇಕಾದುದು ಬಹಳ ಅವಶ್ಯಕವಾದ ಕಾರಣ ಇದನ್ನು ಕನ್ನಡದಲ್ಲಿ ಬರೆದೆನು, ಪ್ರಕಾಶಕ್ಕೆ ಅವಕಾಶವಿಲ್ಲದೆ ಬಹಳ ದಿನದಂದಲೂ ಹಾಗೆಯೇ ಇದ್ದ ಈ ಗ್ರಂಥವನ್ನು ಮೊದಲು ಮೈಸೂರು ನಾರಲ್ ಸ್ಕೂಲಿನಲ್ಲಿ ನಮಗೆ ಕನ್ನಡ ಗ್ರಂಥವನ್ನು ಬೋಧಿಸುತ್ತಿದ್ದು, ಪ್ರಕೃತದಲ್ಲಿ ಮದ್ರಾಸ್‌ ಗೌರ಼್ನಮೆಂಟ್ ಕನ್ನಡ ಟ್ರಾನ್‌ಸ್ಟೇಟರಾಗಿರುವ ಮ|| ರಾ|| ಬಿ. ರಾಮರಾವ್ M.A. L. L. B. ಯವರು ದಯವಿಟ್ಟು ಪರಾಂಬರಿಸಿ ನನಗಾಗಿ ತೊಂದರೆಯನ್ನು ತೆಗೆದುಕೊಂಡು ಅರ್ಧಭಾಗವನ್ನು ಪ್ರಕಾಶಕ್ಕೆ ಬರುವಂತೆ ಅವಕಾಶಮಾಡಿಕೊಟ್ಟರಲ್ಲದೆ, ಈ ಪುಸ್ತಕಕ್ಕೆ ವಿನಾಯಕವಿಜಯವೆಂಬ ಹೆಸರನ್ನು ಇಟ್ಟು ಕ ತ್ತಾರೆ. ಅದಕ್ಕಾಗಿ ಆ ಮಹನೀಯರಿಗೆ ಬಹಳ ಕೃತಜ್ಞನಾಗಿರುವೆನು. ಇದಕ್ಕ ಮುಂಚೆ ಈ ಗ್ರಂಥವನ್ನು ಆಮೂಲಾಗ್ರವಾಗಿ ನೋಡಿ ಪರಿಶೋಧಿಸಿದ ಮ|| ರಾ|| ಆರ್ ಶ್ರೀನಿವಾಸರಾಯರ ಸಹಾಯವು ಚಿರಸ್ಮರಣೀಯವಾಗಿರುವುದು. ಮೊದಲಿಂದಲೂ ನನ್ನ ಮೇಲೆ ಪೂರ್ಣವಿಶ್ವಾಸವನ್ನಿಟ್ಟು ಪದೇಶಿಸಿದ ತ್ಯಾಮಗೊಂಡ್ಹು ಎ.ವಿ.ಸ್ಕೂಲ್‌ ಸಂಸ್ಕೃತಪಂಡಿತರಾದ ವೇ|| ಬ್ರ|| ಶ್ರೀ|| ಕೃಷ್ಣಮೂರ್ತಾ ಚಾರ಼಼್ಯರ ಅಮೋಘವಾದ ಅನುಗ್ರಹವೇ ಸಕಲ ಶ್ರೇಯಸ್ಸಿಗೂ ಕಾರಣವಾಗಿರುವುದೆಂದು ತಿಳಿಸಲು ಸಂತುಷ್ಟನಾಗಿರುತ್ತೇನೆ. ಇದನ್ನು ತಮ್ಮ ಅಮೋಘವಾದ ಕಾದಂಬರಿ ಸಂಗ್ರಹ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಸಹಾಯಮಾಡಿದ ವೇ || ಚಾ || ವೆಂಕಟ ರಮಣಶಾಸ್ತ್ರಿಗಳಿಗೆ ನಾನು ಕೃತಜ್ಞನಾಗಿದೇನೆ. ಕನ್ನಡಭಾಷಾಭಿಮಾನಿಗಳೆಲ್ಲರೂ ಇದಕ್ಕುತ್ತೇಜನವನ್ನಿತ್ತು ಪ್ರೋತ್ಸಾಹಿಸುವರೆಂದು ನಂಬಿರುವ ತಮ್ಮ ವಿಧೇಯನಾದ

 ಆನೆಕಲ್                                    ತಾ|| 10-8-1916}      ವೆಂಕಟಸುಬ್ಬಯ್ಯ              ಮುಖ್ಯೋಪಾಧ್ಯಾಯ, ಆನೆಕಲ್,ಕರ್ಣಾಟಕಪಾಟಶಾಲಾ