ಈ ಪುಟವನ್ನು ಪರಿಶೀಲಿಸಲಾಗಿದೆ
ಕಂ|| ಗುರುವೇ ಬೊಮ್ಮಂಗುರುವೇ| ವರವಿಷ್ಟುವೆ ನಿಪ್ಪ ನಾಗುರುವುಮಾಪತಿಯೈ || ಗುರುವೇ ಸಾಕ್ಷಾದಜನೈ| ಪಿರಿದಾಗುರುಚರಣ ಕೇಗಳಾನತನಪ್ಪೆಂ||೧|| ಮೆರೆವುದೊ ಮೈಸೂರ಼್ನಾಡೋಳ್ ವರಶಿವಗಂಗಾಭಿಧಾನ ಯಾತ್ರಾಸ್ಥಲಮೇಂ || ಕರೆವರ್ ದಕ್ಷಿಣಕಾಶೀ|ಪುರಮೆಂದವನೀಧ್ರಮಂಕಕುದ್ಗಿರಿಯೆಂಬರ್||೨|| ಇದರೆಡೆಯೊಳ್ಪಾವನ ಮೆನ| ಲದುವೆ ಪುರಂ ತ್ಯಾಮಗೊಂಡ್ಲ ವೆಂಬಾಸೆಸರಿಂ || ಪದದೇಂ ಮರೆಗುವೊ ಸುಜನಾ। ಸ್ಪದಮಾಗಿರ್ಪುದು ಸಮಸ್ತವಸುಸಂಚಯದಿಂ||೩|| ವ||ಆಪುರದೊಳ್ ಶ್ರೀಕಂಠೇಶ್ವರ ಭಕುತಂ | ಶ್ರೀಕಂಠಾಹ್ವಯ ಮಹೀಸುರಂ ಛಂದೋಗಂ || ಶ್ರೀಕರ ವಾಸಿಷ್ಠಾನ್ವಯ | ನಾಕರುಣಾಕರನದೆಂತು ಮೆರೆದನೊಜಸದಿಂ||೪|| ಪಿರಿದುಂ ವ್ರತನಿಯಮದೊಳಂ| ಪರಮೌದಾರ್ಯಂಗಳೊಳಗೆ ಪಾಸಟಿಯಿಲ್ಲಂ|| ನೆರೆಮೆರೆವಾತನ ತನಯಂ | ವರನಂಜುಂಡಯ್ಯ ನೆಂಬ ಭೂಸುರನೆಸೆವಂ ||೫||ವರನಂಜುಂಡಯ್ಯಸುತಂ। ವರಗುರುಚರಣಾರವಿಂದಮಧುರೋಲಂಬಂ || ಬರೆದಂ ವೇಂಕಟಸುಬ್ಬಂ| ವರವಿಘ್ನೇಶ್ವರ ಚರಿತ್ರಮಂ ಷಟ್ಟದಿಯೊಳ್ ||೬||