ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನನ್ನ ಸಂಸಾರ 19 \ # $ $ $ 1 1 1 1 F +_ * * * * : \ 1 #

  • * * * * * * * \ \ " } # /

ಹರಿಕೆ, ಮುತ್ತೈದೆಯ ಪ್ರಾರ್ಥನೆ, ಇತ್ಯಾದಿ ಹಗರಣಗಳಿಂದ ನನಗೆ ದಿಕ್ಕೇ ತೋಚದೆ ಹೋಯಿತು. ನನಗೆ ದಿನೇದಿನೇ ನಿಶ್ಯಕ್ತಿಯೇ ಹೆಚ್ಚುತ್ತಬಂತು. ಮಗುವಿನ ವಿಷಯವಂತೂ ಹೇಳಲಶಕ್ಯ. ಈ ರೀತಿಯಾದ ಕಟಪಟೆಯಿಂದ ನನ್ನ ಬಾಣಂತನವು ಬೇಗ ಮುಗಿಯಲೇ ಇಲ್ಲ. ಮೂರನೇ ತಿಂಗಳಲ್ಲಿ, ಐದನೇ ತಿಂಗಳಲ್ಲಿ, ಏಳನೇ ತಿಂಗಳಲ್ಲಿ, ಕಳುಹಿಸಿಕೊಡಬೇಕೆಂದು ಹರಪುರದಿಂದ ಕಾಗದ ಬರುತ್ತಲೇ ಇತ್ತು. ಏಳು ತಿಂಗಳಾಗುವವರೆಗೂ ನನ್ನ ಬಾಣಂತನವೂ ಮುಗಿಯಲಿಲ್ಲ. ಹರಪುರಕ್ಕೂ ಹೋಗಲಿಲ್ಲ. ನನ್ನ ಔಷಧಪಥ್ಯಗಳಿಗಾಗಿ ನಮ್ಮ ತಂದೆಗೆ ಬಹಳ ದ್ರವ್ಯವು ವ್ಯಯವಾಯಿತು. ಸಾಲದುದಕ್ಕೆ ಇದೇ ಸಮಯದಲ್ಲಿ ನಮ್ಮ ತಂದೆಯು ನೋಡುತ್ತಿದ್ದ ಕೆಲಸವೂ ತಪ್ಪಿ ಹೋಯಿತು. ಈಗ ನಮ್ಮ ತಂದೆತಾಯಿಗಳಿಗೆ ಜೀವನಕ್ಕೆ ಬಹು ತೊಂದರೆಯೂ ಪ್ರಾಪ್ತವಾಯಿತು. ಅವರ ಕಷ್ಟವನ್ನು ನೋಡಲಾರದೆ ನನ್ನ ವಶಕ್ಕೆ ನಮ್ಮ ಮನೆಯವರು ಕೊಟ್ಟಿದ್ದ ಕೆಲವು ರೂಪಾಯಿಗಳನ್ನು ಕೊಟ್ಟು ಅವರ ತೊಂದರೆಯನ್ನು ತಪ್ಪಿಸಬೇಕಾಯಿತು. ಅಲ್ಲದೆ ನಮ್ಮ ತಂದೆಗೆ ಆಗ ಅನುಕೂಲವಿರಲಿಲ್ಲವಾದ್ದರಿಂದ ಮಗುವಿಗೆ ನಾನೇ ಒಂದೆರಡು ಒಡವೆಗಳನ್ನು ನಮ್ಮ ಯಜಮಾನರ ಹಣದಿಂದಲೇ ಮಾಡಿಸಿ ಇಟ್ಟನು. ಇಂತಹ ಕಷ್ಟಕಾಲವು ನಮ್ಮ ತಂದೆಗೆ ಸಂಭವಿಸಿದ್ದಾಗ್ಯೂ ನಮ್ಮ ತಾಯಿಯು ಮಾತ್ರ ಕಷ್ಟದಲ್ಲಿ ಸಹಾಯವಾಗಲೆಂದು ಐವತ್ತೈದು ರೂಪಾಯಿಗಳನ್ನು ಯಾರಿಗೂ ಕಾಣದಂತೆ ಇಟ್ಟುಕೊಂಡಿದ್ದರು. ನನ್ನನ್ನು ಒಂಭತ್ತನೇ ತಿಂಗಳಲ್ಲಿ ನಮ್ಮ ಯಜಮಾನರೇ ಬಂದು ನಮ್ಮ ತಂದೆತಾಯಿಗಳನ್ನು ನನ್ನೊಡನೆ ಒಟ್ಟಿಗೆ ಹರಪುರಕ್ಕೆ ಕರೆದು ಕೊಂಡುಹೋದರು. ಹರಪುರಕ್ಕೆ ಬಂದಮೇಲೆ ನಮ್ಮ ತಾಯಿಯು ತಮ್ಮ ವಶದಲ್ಲಿದ್ದ ಐವತ್ತೈದು ರೂಪಾಯಿಗಳನ್ನು "ಯಾರಿಗೂ ತಿಳಿಯದಂತೆ ನಿನ್ನ ವಶದಲ್ಲಿಟ್ಟು ಕೊಂಡಿರು ” ಎಂದು ಹೇಳಿ ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಬಹು ಗೂಢವಾಗಿ ನನ್ನ ಪೆಟ್ಟಿಗೆಯಲ್ಲಿಟ್ಟು ಕೊಂಡೆನು.

                   V
  ಶ್ರೀನಗರವು ಸುಪ್ರಸಿದ್ಧವಾದ ಪಟ್ಟಣ. ಈ ಪಟ್ಟಣದ ಸೌಂದರ್ಯವು ಪ್ರೇಕ್ಷಕರ ಕಣ್ಮನಗಳನ್ನು ಮುಗ್ಧಮಾಡುತ್ತಿರುವುದು. ಈ ಊರಿನ ಸುತ್ತಳತೆಯು ಹತ್ತು ಮೈಲಿಯಾಗುವುದು. ಊರಿನ ಮಧ್ಯದಲ್ಲಿ ವಿಸ್ತಾರವಾದ ಧೂಮಶಕಟಮಂದಿರ (ರೈಲ್ವೆ ಸ್ಟೇರ್ಷ) ವೊಂದುಂಟು. ಹರಪುರದಲ್ಲಿ ಬೆಳಗಿನ ಏಳು ಘಂಟೆಗೆ ಧೂಮಶಕಟವನ್ನೇರಿದರೆ ಹತ್ತು ಘಂಟೆ ಹೊತ್ತಿಗೆ ಶ್ರೀನಗರಕ್ಕೆ ತಲಪಬಹುದು. ಶ್ರೀನಗರದಲ್ಲಿ ಇಳಿಯದೆ ಮುಂದಕ್ಕೆ ಪ್ರಯಾಣಮಾಡಿದರೆ ಹನ್ನೆರಡು ಘಂಟೆಗೆ ರಂಗಪುರಿಗೆ ಹೋಗ