ಪುಟ:ನನ್ನ ಸಂಸಾರ.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


20 ಕಾದಂಬರಿ ಸಂಗ್ರಹ

ಬಹುದು. ಈ ವಿಧವಾದ ಪ್ರಯಾಣಸೌಕರ್ಯವನ್ನು ಕಲ್ಪಿಸಿರುವವರು ಚಿರಸ್ಮರಣೀ ಯರೇ ಸರಿ. ಈ ಧೂಮಶಕಟವು ನಮ್ಮ ದೇಶಕ್ಕೆ ಬರುವುದಕ್ಕೆ ಮುನ್ನ ನಮ್ಮ ದೇಶೀಯರ ಪ್ರಯಾಣಸ್ಥಿತಿಗಳು ಅತ್ಯಂತ ಕಷ್ಟಕರಗಳಾಗಿದ್ದುವು. ಒಂದೂರಿನಿಂದ ಇನ್ನೊಂದೂರಿಗೆ ಹೋಗಬೇಕಾದರೆ ಮಾರ್ಗಗಳೇ ಸರಿಯಾಗಿರಲಿಲ್ಲ. ಒಂದೊಂದು ಗಾಡಿಗೆ ಎಷ್ಟೋ ಬಾಡಿಗೆಯನ್ನು ಕೊಡಬೇಕಾಗುತ್ತಿದ್ದಿತು. ಇಷ್ಟು ಕಷ್ಟದಿಂದ ಪ್ರಯಾಣಮಾಡಿಕೊಂಡು ಹೋಗುವಾಗ ಮಧ್ಯಮಾರ್ಗದಲ್ಲಿ ಕಳ್ಳಕಾಕರ ಭೀತಿ ಬೇರೆ. ಮತ್ತು ವಿಶೇಷವಾದ ಪದಾರ್ಥಗಳನ್ನು ದೂರ ದೇಶಕ್ಕೆ ಸಾಗಿಸುವುದಕ್ಕೆ ಆಗು ತ್ತಲೇ ಇರಲಿಲ್ಲ. ಈ ಕಾರಣದಿಂದ ಅಲ್ಲಲ್ಲಿ ಬೆಳೆದ ಧಾನ್ಯಾದಿಗಳು ಅಲ್ಲಲ್ಲಿಯೇ ಉಳಿದುಕೊಳ್ಳುತ್ತಿದ್ದುವಲ್ಲದೆ ನಮಗೆ ಆವಶ್ಯಕವಾಗಿ ಬೇಕಾಗುವ, ದೂರದೇಶದಲ್ಲಿ ದೊರೆವ ಪದಾರ್ಥಗಳು ನಮಗೆ ದೊರಿಯುವುದು ಕಷ್ಟವಾಗಿದ್ದಿತು. ಮತ್ತು ದೂರ ದೇಶದೊಡನೆ ಆಗ ವ್ಯಾಪಾರವೆಂಬುದು ಶಶವಿಪಾಣ ಪ್ರಾಯವಾಗಿದ್ದಿತು. ಕ್ಷಾಮಡಾ ಮರಾದಿಗಳು ದೇಶದಲ್ಲಿ ಪ್ರಾಪ್ತವಾದಾಗ ಆಗಣಕಾಲದ ಕಷ್ಟವನ್ನು ವರ್ಣಿಸತೀರದು. ಜನರಿಗೆ ಯಾವ ವಿಧದಲ್ಲಿಯೂ ಸರಿಯಾದ ಆನುಕೂಲ್ಯಗಳಿರಲಿಲ್ಲ. ಅಂಚೆಮನೆ ಬಂದಮೇಲೂ ಗಾಡಿಯ ರಸ್ತೆ ಬಂದಮೇಲೆಯೂ ಮೇಲೆ ವಿವರಿಸಿದ ಕಷ್ಟಗಳು ಸ್ವಲ್ಪ ಮಟ್ಟಿಗೆ ಕಮ್ಮಿಯಾದುವು. ಸರ್ವತ್ರವಿಸ್ತೈತಗತಿಯುಳ್ಳ ಈ ಧೂಮಶಕಟವು ಬಂದ ಮೇಲಂತೂ ದೇಶಕ್ಕೆ ಎಷ್ಟೋ ಸುಖವುಂಟಾಯಿತು. ದೇಶದ ಮೇಲೆ ವ್ಯಾಪಾರಾದಿ ಗಳು ವಿಶೇಷವಾಗಿ ಅಭಿವೃದ್ಧಿಯಾದುವು. ವಾಚಕರೆ ! ಪ್ರಪಂಚದ ಎಲ್ಲಾ ಕಡೆ ಯಲ್ಲೂ ದೊರೆಯಬಹುದಾದ ಸಮಸ್ತ ವಿಧವಾದ ಪದಾರ್ಥಗಳೂ ಒಂದೇ ಊರಿನಲ್ಲಿ ಯಾವಕಾಲದಲ್ಲಿಯೂ ಸಿಕ್ಕಬಹುದಾದ ಚಮತ್ಕಾರವು ಧೂಮಶಕಟದ ಮಹಿಮೆ ಯಲ್ಲವೆ ! ಆಸೇತ ಹಿಮಾಚಲಪರ್ಯಂತವಾಗಿ ಪ್ರಸರಿಸಿರತಕ್ಕ ಹಳ್ಳಿ-ನಗರಗಳಲ್ಲೆ ಲ್ಲೆಲ್ಲಿಯೂ ಒಂದೇ ವಿಧವಾಗಿ ಪದಾರ್ಥಗಳ ಧಾರಣೆಯು ಮಾರ್ಪಟ್ಟಿರುವುದು ಹೊಗೇ ಗಾಡಿಯ ಪ್ರಚಾರದಿಂದಲೇ ಅಲ್ಲವೆ ? ಮೈಲಿಯೊಂದಕ್ಕೆ ಎರಡೇ ಕಾಸಿನಂತೆ ದೇಶದ ಯಾವ ಕಡೆಯಲ್ಲಿ ಸುತ್ತುವುದಕ್ಕೂ ಅನುಕೂಲವನ್ನುಂಟುಮಾಡಿರುವುದು ರೈಲೇ ಅಲ್ಲವೆ ? ಯಾವನಾದರೂ ಪೂರ್ವಕಾಲದಲ್ಲಿ ಕಾಶೀ ಯಾತ್ರೆ ಮಾಡುವುದೆಂದರೆ ಅವನು ಪರಲೋಕಕ್ಕೆ ಹೋದಂತೆಯೇ ಸರಿ. ಏಕೆಂದರೆ ಯಾತ್ರಿಕರು ಕಾಲುನಡಗೆಯಲ್ಲಿ ವರ್ಷಾಂತರಕಾಲ ಕಷ್ಟಪಟ್ಟು ಕಾಶಿಗೆ ಸೇರಬೇಕಾಗಿದ್ದಿತು. ಮಾರ್ಗಮಧ್ಯದಲ್ಲಿ ಎಷ್ಟೋ ಭಯಂಕರವಾದ ದುಃಖಗಳಿದ್ದುವು. ಇಂತಹ ದುರ್ಗಮವಾದ ಕ್ಷೇತ್ರ ಪ್ರಯಾಣದಿಂದ ಹಿಂತಿರುಗುವುದು ಎಷ್ಟು ಹಿಂಸೆಯ ವಿಚಾರವಿರಬಹುದು. ಇಂಥಾ