ಪುಟ:ನನ್ನ ಸಂಸಾರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



                                    ನನ್ನ ಸಂಸಾರ                     21                                        
                                                                  

ಅವರ್ಣನೀಯ ವ್ಯಥೆಗಳನ್ನು ತಪ್ಪಿಸಿ ಸ್ವಲ್ಪವೇ ವೆಚ್ಚದಿಂದ ಒಂದೇ ಒಂದು ತಿಂಗಳೊಳಗಾಗಿ ಮಹಾಯಾತ್ರೆಗಳನ್ನು ಮಾಡಿಸಿ ಜನರನ್ನು ಪ್ರತಿಕ್ಷಣವೂ ಮುಕ್ತ್ಯಂಗನಾ ಲಿಂಗನ ಸುಖಕ್ಕೆ ಭಾಗಿಗಳನ್ನಾಗಿ ಮಾಡುತ್ತಿರುವುದಾವುದು? ರೈಲುಗಾಡಿಯಲ್ಲವೋ ? ಇಂತಹ ರೈಲುಗಾಡಿಯನ್ನು ಕಂಡುಹಿಡಿದು ಲೋಕೋಪಕಾರಮಾಡಿದಂತಹ ಮಹಾ ತ್ಮನ ಬುದ್ಧಿಶಕ್ತಿಯು ಎಷ್ಟಿರಬಹುದು ? ಅರ್ಥಸಾಧನೆಗೆ ಮೂಲ ಮಂತ್ರದಂತಿರುವ ಧೂಮಶಕಟನಿರ್ಮಾಣ ಕ್ರಮವನ್ನು ಕುರಿತು ನಮ್ಮ ಸೋದರರು ವಿಮರ್ಶೆಮಾಡಲಿ ! ಇದರಂತೆಯೇ ಜಲಪಾತಗಳ ಮೂಲಕ ವಿದ್ಯುಚ್ಛಕ್ತಿಯನ್ನಾಕರ್ಷಿಸಿ ಹೊಗೆ ಹೊರಡದಿರುವ, ಎಣ್ಣೆಯನ್ನು ತುಂಬುವ ಮತ್ತು ಬತ್ತಿಯನ್ನಿಡುವ ಶ್ರಮವನ್ನು ಹೊಂದದೆ, ಒಬ್ಬರು ಹತ್ತಿಸಬೇಕೆಂಬ ತೊಂದರೆಯನ್ನುಂಟುಮಾಡದಿರುವ ದೀಪಗಳನ್ನು ನೋಡಿದರೆ ಬುದ್ದಿಗೆ ಎಂತಹ ಶಕ್ತಿ ಇದೆಯೆಂಬುದು ಎಲ್ಲರಿಗೂ ಗೊತ್ತಾಗುವದಲ್ಲವೆ ? ಇಂತಹ ಸರ್ವೋತ್ತಮವಾದ ಬುದ್ಧಿಯನ್ನು ಪರಮಾತ್ಮನು ಸಮಸ್ತ ಮನುಷ್ಯರಿಗೂ ದಯಪಾಲಿ ಸಿರುವಾಗ ಅಂತಹ ಬುದ್ದಿಯಿಂದ ಎಷ್ಟು ಲೋಕೋಪಕಾರಮಾಡಬಹುದೆಂಬುದು ಸರ್ವರ ಗಮನಕ್ಕೂ ಬರಲಿ. ಅಸಂಖ್ಯ ಜನಸಂಖ್ಯೆಯುಳ್ಳ ಈ ಭೂಲೋಕದಲ್ಲಿ ಕೋಟಿಗೊಬ್ಬ ಮನುಷ್ಯನ ಬುದ್ದಿಯಾದರೂ, ರೈಲ್ವೆ, ವಿದ್ಯುಚ್ಛಕ್ತಿ ಮುಂತಾದ ನಿರ್ಮಾಣಕ್ರಮವನ್ನು ಹೊಸಹೊಸ ರೀತಿಯಿಂದ ವಿಧವಿಧ ವಸ್ತು ಚಾತದಿಂದ ಕಂಡು ಹಿಡಿವ ಶಕ್ತಿಯನ್ನು ಹೊಂದಿದುದಾದರೆ ಲೋಕದ ಪುಣ್ಯಕ್ಕೆ ಎಣೆಯೇ ಇಲ್ಲ.

           ಇಂತಹ ಸಮಸ್ತ ಕಲಾ ಕೌಶಲ್ಯದಿಂದಲೂ ಶ್ರೀನಗರವು ತುಂಬಲ್ಪಟ್ಟಿದ್ದಿತು. ಅಲ್ಲದೆ ಇದು ರಾಜಧಾನಿ. ಮನೋಹರವಾದೀ ಪಟ್ಟಣದ ಮಧ್ಯಭಾಗದಲ್ಲಿ ಇಂದ್ರನ ಅರಮನೆಯನ್ನು ಮೀರಿಸುವ ಅರಮನೆಯೊಂದಿರುವುದು. ಚಂದ್ರಕಾಂತ ಶಿಲಾನಿರ್ಮಿತವಾದೀ ಅರಮನೆಯ ಮಹಾದ್ವಾರದ ಮುಂದುಗಡೆ ಒಂದು ಕ್ಷಣ ಯಾವನಾದರೂ ನಿಂತು ನೋಡಿದರೆ ಆ ಮನುಷ್ಯನ ಮನಸ್ಸಿನಲ್ಲಿ ಎಷ್ಟು ಯೋಚನೆಗಳಿದ್ದರೂ ಅವೆಲ್ಲವೂ ಮಲಿನವಾಗಿ ಅರಮನೆಯ ಸೌಂದರ್ಯವನ್ನು ಕುರಿತು ಯೋಚಿಸಲಾರಂಭವಾಗುವುದು. ಚಂದ್ರಕಾಂತ ಶಿಲೆಯಲ್ಲಿ ಕೆತ್ತಲ್ಪಟ್ಟು ಸುಂದರವಾಗಿ ಬಿಡಿಸಿ ನಿರ್ಮಿಸಿರುವ ವಿಧ ವಿಧ ದೇವ ಮೂರ್ತಿಗಳು ಮನಸ್ಸನ್ನು ಅಪಹಾರ ಮಾಡುವುವು. ಅರಮನೆಯ ಹೊರ ಸೊಬಗೇ ಇಂತಿರುವಲ್ಲಿ ಒಳಗಣ ವೈಭವವನ್ನು ಏನು ಹೇಳೊಣ. ಸುವರ್ಣ ಮಯಸ್ತಂಭಗಳಿಂದಲೂ ರತ್ನಮಯಕುಟ್ಟಿ ಮಗಳಿಂದಲೂ ವಿವಿಧ ಚಿತ್ರಗಳನ್ನೋಳಗೋಂಡಿರುವ ಮಹಾ ರಜತಮಯ ಭಿತ್ತಿಗಳಿಂದಲೂ, ಎಲ್ಲೆಲ್ಲಿ ನೋಡಿದರೂ ರತ್ನವೈಡೂರ್ಯ ಮರಕತ ವಿಕಾರಗಳಾದ ಪ್ರಾಂತಗಳೇ ಕಂಗೊಳಿಸುವ ಆಸ್ಥಾನವೂ, ಇದಕ್ಕಿಂತ ಶತಾಧಿಕ ಪ್ರಕಾಶಗ