ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪
‌‌‌‌‌‌ಬೆನಕನ ಮಹಿಮೆ

ನೆನೆದಮಾತ್ರಕೆ ವಕ್ರತುಂಡನು | ಮನದೆಮುದವನುತಾಳ್ದು ಭಕ್ತನ |
ಮನಕೆ ಸಂತಸಗೈದನಾಗಳೆ ಭಕ್ತವತ್ಸಲನು |
ವಿನುತ ಮಹಿಮನುಮಾತ್ಮರೂಪವ | ನನಿತನಜನಿಗೆ ತೋರ್ಕೆಗೊಡುತಿರೆ |
ತನುಜ ! ಪಕ್ಕದೊಳಿರ್ದುನೋಡಿದೆನದನೆಪೇಳುವೆನು | ೧೯ ||
ರಕ್ತವರ್ಣನ ಸಿಂಧುರಾಸ್ಯನ | ರಕ್ತನೇತ್ರನ ಚಂದ್ರಕೋಟಿ |
ವ್ಯಕ್ತತೇಜನ ಸೂರ್ಯಕೋಟಿಸಮಾನಭಾಸನನು ||
ಭಕ್ತನುಗ್ರದಮರೂಪದಂದವ | ಮುಕ್ತಲೋಚನನಾಗಿ ಕಂಡನು |
ತ್ಯಕ್ತಧೈರೈನು ಜಪವಮಾಣುತೆ ಮುಚ್ಚೆಯೆಯ್ದಿದನು || ೨೦ ||
ಕೆಲದೊಳೊದವಿದಕಾಂತಿರಾಶಿಯ | ನಲಘುವಿಕ್ರಮನಂದುನೋಡುತೆ |
ಛಲದೊಳೆದ್ದನು, ಸಾವಧಾನದೊಳಿಷ್ಟದೇವತೆಯ ||
ಬಲದತೇಜೋರೂಪವನುಕಂಡಲುಗದಿರ್ದನು. ವಿಧಿಯು ಕೈಮುಗಿ |
ದಲಸನಾದೆ, ಧೈರ್ಯದಿಂದಲೆನಿಂದುನುತಿಸಿದನು. || ೨೧ ||
ಜಯಜಯಾನಂದ ಸ್ವರೂಪನೆ ! | ಜಯಜಯ ಧರಾಧಾರಭೂತನೆ !|
ಜಯ ಸುಸತ್ಪಾತ್ಮಕನೆ ! ನಿತ್ಯನೆ ! ನಿನಗೆನಮಿಸುವೆನು ||
ಭಯನಿವಾರಕ ! ದೇವದೇವನೆ ! ನಿಯತನೀಹರಿಹರನುವಿಧಿಯೈ |
ಜಯವ ಪೇಳ್ವೆನು ಮತ್ತೆ ವಂದಿಪೆನೆಂದುಬೆಸಗೊಂಡ || ೨೨ ||
ಪರಮ ದೇವನು ಕೇಳ್ದು ಭಕ್ತನ | ಪಿರಿದುನುತಿಯನವಂಗೆನಿಜಸಂ |
ದರುಶನಂಗಳನಿತ್ತು ಸೃಷ್ಟಿ ವಿಘಾತವನು ಕೇಳಿ ||
ಕರುಣದಿಂದಲಿ ತನ್ನ ಭಕ್ತನಿ | ಗೊರೆದನಜನಿಗೆ ದೇವದೇವನು |
ಧರಿಣಿಗೇಳ್ಗೆಯ ಮಾಳ್ವಪರಿಯಿಂ ಕುವರ ಸಂತಸದೆ || ೨೩ ||
ಆರಮಂತ್ರವ ನೀನು ನೆನೆದೆಯ | ದಾರುಮಂತ್ರವ ನಿನಗೆ ಪೇಳ್ದರೊ |ಸಾರವಹದೇವೇಶನಾತನಯೋಗಮಾರ್ಗದೊಳು ||
ಪಾರುತಿರ್ಪರೊಸವಕಮೊದಲಹ | ಭೂರಿಮುನಿಗಳು ವಕ್ರತುಂಡನು |ಧೀರನಾನೆಯ್ತಂದೆ ನಿನ್ನಿಷ್ಟವನುಸಲಿಸುವೆನು || ೨೪ ||
ನನ್ನ ಕರೆವರು ವಕ್ರಮುಖನೆನು | ತಿನ್ನು ಲೋಕದ ವಸ್ತುವೆಲ್ಲವು |
ನನ್ನ ರೂಪವು ಪೇಳ್ವುದೇನೈ ನಾನೆ ಜಗವೆನಿಪೆ ||
ನನ್ನಿಯೈ: ಕೇಳೆಂಬ ದೇವನ | ಸನ್ನು ತಾಲಾಪವನು ಕೇಳುತೆ |
ತನ್ನ ಚಿತ್ತದೊಳಾಂತುಮುದವನು ಬಿದಿಯು ಬೇಡಿದನು || ೨೫ ||