ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಕಾದಂಬರೀ ಸಂಗ್ರಹ

ಅಲ್ಲಿ ಶಂಕರ ಚರಣಕಮಲವ| ನೆಲ್ಲ ರೀಕ್ಷಿಸಿ ನಮಿಸಿತಮ್ಮಯ|

ತಲ್ಲಣಂಗಳ ಹೇಳಿಕೊಂಡರು ಭಯದೆ ಮೊರೆಯಿಟ್ಟು ||

ಎಲ್ಲರೊಡೆಯನೆ ಕೇಳುನಿನ್ನ ನು| ಮೆಲ್ಲ ನೊಲಿಸಲು ಬಂದುಮಾನಿಸ|

ನಿಲ್ಲಿ ತಪವನು ಗೆಯ್ದು ತಪಿಪನು ನಮ್ಮ ನೀಸಲಹು || ೧೩ ||

ಕಂದಕೇಳ್ವೆ ದೇವನಾ ಕೇ| ಳ್ದ೦ದೆ ನಡೆದೆನು ತವಸಿಯಿರ್ದೆಡೆ|

ಗೊಂದುನಿಮಿಷದೊಳಮರರಲ್ಲಿಯೆ ನಿಂದರಾವೊಳು ||

ಬಂದು ಜಪಸರವಾಂತ ಬಕುತನ| ಚಂದದೊಡಲಿನ ಕೃಶತೆಯಿಾಕ್ಷಿಸಿ |

ಬಂಧುರೋಕ್ತಿಯೊಳೆಂದನಾಗಳೆ ಭಕ್ತಿಭೂಷಣಗೆ || ೧೪ ||

ಸುತನೆ ! ಸುಸ್ಥಿರಮಾದಭಕ್ತಿಗೆ | ವಿತತವರವನು ಕೊಡುವತವಕದೆ|

ಹಿತದೆ ಬಂದಿಹೆನಾನು ನೋಡೆನೆನಲಿದು ಕಿಂಕರನು ||

ವ್ರತಕೆಮೆಜಿ ರ್ದೈನ್ನ ವರದಾ| ತೃತೆಯನಾಲಿಸಿ ಚರಣಕೆರಗುತೆ |

ನುತಿಸಿವರವನು ಬೇಡೆನಿಂದವನೊಡನೆ ವೇಳಿದೆನು ||೧೫ ||

ಗಣನು ಕೈಮುಗಿದೆಂದನೀಪರಿ ಗಣಸಜನಕನೆ ! ನಿನ್ನ ಕಂಡೀ |

ಕ್ಷಣಯುಗಗಳೇಂ ಧನ್ಯನೂದುವೊಜನ್ಮ ಕರ್ಮಗಳು ||

ಗುಣಕೆ ಬಂದುನಿವೆಂದು ಬೇಗನೆ ಗಣನು ನುತಿಸಿದನಾಗಶಂಭುವೆ! |

ಫಣಿಭೂಷಣ ಭುವನಕರ್ತನೆ ! ನಿನಗೆ ನಮಿಸುವೆನು || ೧೬ ||

ಹರನೆ ! ಭಕ್ತಾಭೀಷ್ಟವರದನೆ | ಗುರುವೆ! ಯೋಗಿಧ್ಯಾನಗಮ್ಯನೆ |

ಕರುಮಫಲದನೆ ! ಭುಕ್ತಿಮುಕ್ತಿಪ್ರದನೆ ! ನಮಿಸುವೆನು ||

ದೊರಕದಿರ್ದಪೆ ಮನಕೆ ಮಾತಿಗೆ | ಪರಮಬೊಮ್ಮನೆ ನೀನು ನಿತ್ಯನು |

ಸುರಪಮಾನ್ಯನೆನುತ್ತ ಕೀರ್ತಿಸಿ ವರವಬೇಡಿದನು || ೧೭ || -

ಕೇಳುದೇವನೆ ! ನೀನು ನೆರೆಕರು | ಣಾಳುವಾದೊಡೆ, ನಿನ್ನ ಚರಣಾ |

ಬ್ಳಿಯೊಳಗಾಭಕ್ತಿರಸವನು ಕೊಡುವುದೆನಗೆನುತ ||

ಭಾಳಲೋಚನ ನಾನು ಕೇಳ್ದು ಕೃ| ಪಾಳುವಾಗಿ ತಥಾಸ್ತುವೆಂದೆನೆ|

ಪೇಳೆಭೂಸಗೆ ವರವನಿತ್ತಪೆನೆಂದು ಹೇಳಿದೆನು || ೧೮ ||

ಮೂರುಲೋಕವ ಸೆಳೆವಶಕ್ತಿಯ| ನೀರಸಾತಳದಲ್ಲಿ ಕೊಟ್ಟನು|

ವಾರಿಜಾಸನಮು.ಖರು ನಿನ್ನನು ವಧಿಸಲಳ ವಲ್ಲ ||

ಶೂರರುಂ ನಿನಗಂಜಿ ಯುದ್ದದೆ ದೂರದಿಂದಲೆ ಶರಣರಹವೊಲ್ |

ಸಾರಶಕ್ತಿಯನಿತ್ತು ನಾನೀ ಲೋಕ ಕೆಯ್ತಂದೆ || ೧೯ |