ಪುಟ:ನನ್ನ ಸಂಸಾರ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದ೦ಬರೀ ಸಂಗ್ರಹ

ದಳವ್ರಸುತ್ತಲ್ ಗಣನಬಳಸಿರೆ | ಬಳದೆಬೆರಸುತೆ ಜೈತ್ರಯಾತ್ರೆಗೆ|

ಘಳಿಲನಾಗಳೆ ನೂರುಯೋಜನದೆಡೆಯನಾವರಿಸಿ ||

ದಳವು ನಾಲ್ಕು೦ ಕಡೆಯೊಳಿವನನು | ಬಳಸಿ ನಡೆದುದು ಮುಟ್ಟಿತವನೀ |

ತಳವ, ಸೈನ್ಯದ ವಾದ್ಯ ಶಬ್ಬ ಕೊಡೆದುದೆಣ್ಣೆಸೆಯು || ೨೭ ||

ಕೆಲದೊಳೆಡದೊಳೂ ಲಪಾಣಿಯು| ಬಲದೆ ಸುಲಭನು ಸೈನೈಮಧ್ಯದೆ|

ಕಲೆತುಗಣನಿರೆ ಬಳಿಕ ತಾರಾಮಂಡಲಾಂತರದೆ ||

ನೆಲಸಿ ಕಣ್ಗೊಳಿವೋಷಧೀಶನ |ಕಲೆಯಪಳಿವಂತಿರ್ದ ನೀ ಭೂ |

ತಲದೊಳಿರ್ಪಾ ಯುದ್ಧ ವೀರರನೆಲ್ಲ ಸೋಲಿಸಿದ || ೨೮||

ಶರಣುವೊಕ್ಕಾ ನೃಪರ ಪೊರೆದನು | ಗರುವವಿಲ್ಲದ ನೃಪರ ತೊರೆದನು |

ತಿರೆಯೊಳಿರ್ಪಾ ಭೂಪರೆಲ್ಲರ ಜಯಿಸಿಕೊಳುಗೊಳದೆ ||

ತಿರಯನೆಲ್ಲವಗೆಲಿದು ತಾನಿರ| ಅರಸು ಕುವರರು ಶಾಂತರಾಗದೆ|

ಮರಳಿ ಯುದ್ದೋಮದತೀಂಟಿಯೊಳಿರ್ದರಾ ಭಟರು || ೨೯||

ಇಂತುಸ್ಕಾಂದಸರಾಣಾಂತರ್ಗತವಾದ ವಿನಾಯಕ ವಿಜಯದೊ೪ ಚಿಂತಾಮಣ್ಣುಪಾಖ್ಯಾನವೆಂಬ

ಮೂರನೆಯ ಪ್ರಕರಣವು ಮುಗಿದುದು.

ನಾಲ್ಕನೆಯ ಪ್ರಕರಣ.

ಸೂ|| ಹರಿಯಹಯವನು ಮುನಿಯಮಣಿಯನು

ನರಸನಾಗಣ ಕಿತ್ತು ಕೊಂಡಂ|

ತರದೆಮೆರೆದನೊ ಮೂರುಲೋಕದೊಳಾರುಖಲ್ಲೆ ನುತ||

ಇಂತುರಾಯನು ಮಹಿಯನೆಲ್ಲವ ನುಂತೆಗೆಲಲ್ದಾಳಿಕ ಚಿತ್ತದೆ

ಚಿಂತಿಸುತ್ತಲಿ ದೇವಲೋಕದ ಗೆಲವನಾಶಿಸಿದ ||

ಪಿಂತೆಮಂತ್ರಿಗಳೊಪ್ಪೆವಿಬುಧರು| ನಿಂತು ಗೆಲ್ಲಲು ಬೇಗನಡೆದುದ

ನಂತಸೇನೆಯು ಶರವಸಿಡಿದೇಂ ಗಗನಕೊಡಿದುದೊ? || ೧||

ಸುರಲಬನದೊಳು ಕಂಡುಕುದುರೆಯ|ನರಸನಾಗಳೆ ಬಲುಮೆಯಿಂದಲಿ|

ಕರಿಯನಾಂತೇರಿದನು ಸುರಮಾತಲಿಯೊಡನೆತಾನು ||

ಸುರಪಲ್ಲಿಗೆ ಪೋಗಿದೈತ್ಯನ| ಕರುಮವೆಲ್ಲವ ಪೇಳಲಿಂದ್ರನು |

ಕೆರಳಿಗಜವನುಹತ್ತಿಸುರಗಣದೊಡನೆ ಪೊರಮಟ್ಟ || ೨ ||