ಈ ಪುಟವನ್ನು ಪರಿಶೀಲಿಸಲಾಗಿದೆ
೨೬ ಬೆನಕನಮಹಿಮೆ
ಬ್ಬರನು ಬೆನಕನ ಸನಿಯಕೈದಿಸಿ ಜಯವಬೆಸಗೊಂಡ ||೨೬||
ಮಡಿದರೆಲ್ಲರು ಗಣನ ಸೈನಿಕ |ರಿಡಿದುಬಂದೆನು ತಂದೆ! ರಣದೊಳು
ಪಿಡಿದುಮಿವರನು, ಗಣನು ಮೊರ್ವನುಸಿಂತನಿಂದಿನೊಳು||
ಬಿಡದೆ ನೀನೇ ಕೊಂದು ಗಣನನು| ಮೊಡರಿಸಮೃತವ ನವಗಮಿಳೆಯೊಳ|
ಗೊಡೆಯದೈತ್ಯನ ಸುತರಿಗವನಿಯ ನೀಡುನೀನೆಂದ ||೨೭||
ಇಂತು ಸ್ಕಾಂದಪುರಾಣಾಂತರ್ಗತಮಾದ ವಿನಾಯಕವಿಜಯದೊಳ್ ಚಿಂತಾಮಣ್ಯುವಾಟ್ಯಾನವೆಂಬ
ಆರನೆಯ ಪ್ರಕರಣವು ಮುಗಿದುದು. __________________________
ಏಳನೆಯ ಪ್ರಕರಣವು. ____________
ಸೂ|| ದುರುಳ ಗಣನನು ಕೊಂದು ಗಣಪನು
ಪರಮಚಿಂತಾಮಣಿಯ ಪೆಸರನು| ತಿರೆಯೊಳೊಂದಿಯೆ ಮುನಿಯ ಕಪಿಲನಕಾಯ್ದ ನೇನೆಂಬೆ||
ತನುಜ ಕೇಳೈ ಸಿದ್ದಿ ಪುತ್ರನು|ವಿನುತಲಕ್ಷನು ಜಯಿಸಿ ಬಲವನು|
ಜನಪಸೂನುಗಳೆಂದು ಕುವರರ ತಿಳಿದು ಸಲಹಿದನು ||
ಮನದೊಳಂಜಿಕೆಯಾಂತರುಳಿದರು|ಕೊನೆಗೆ
ತಾಂಗ್ರಂಥನರಗುವರ|ಬೆನಕಲ್ಲಿಗೆ ಲಕ್ಷನುಯ್ದ ನೆನುತ್ತೆ ತಾತಿಳಿದ ||೧||
ಶೂಲಪಾಣಿಯು ಸುಲಭರಿಬ್ಬರು | ಕಾಲಬಲದಿಂ ಯುದ್ಧ ಮಾಡಲು|
ಕೋಲನೆಲ್ಲಂ ಪಿಡಿದು ಪೋದರ್ಗೇನು ಗತಿಯಾಯ್ತೋ||
ಮೇಲುಗಾಣೆ ವಿಚಾರಿಸವನೀ ಪಾಲಯೆನುತುಂನುಡಿಯುತಿರಲಾ ವೇಳೆಗೊರ್ವನು ಭರದೆ ಬಂದಾ ಗಣಗೆ ಪೇಳಿದನು ||೨||
ಅರಸ ಕೇಳೈ ನಿನ್ನ ಮಕ್ಕಳು|ಧುರದೆ ಕಾಯ್ದರು ಪಿರಿದು ದಳವನು|
ತಿರೆಗೆಮಲಗಿಸೆ ಘೋರರೂಪನು ಬಂದುದಳವಿಡಿದು ||
ಪುರುಷಹರಿಗಳ ಪಿಡಿದು ನಿಜಬಲ| ಪರಿಸರಕ್ಕೆನೊಯ್ದುನಲ್ಲಿಂ|
ಭರದೊಳೇಗೆಯ್ದಪರೊ ? ಕಾಣೆನು ದೇವಕೇಳೆಂದ ||೩||
ಎಂದು ನುಡಿದನ ಮಾತನಾಲಿಸು| ತಂದು ರಾಯನು ಬಳಲಿನೊಂದನು|
ಮಿ೦ದು ಕಣ್ಣೀರೊಳಗೆ ಸುಲಭನೆ ! ಶಲಫಾಣಿಗಳೆ ||