ಪುಟ:ನನ್ನ ಸಂಸಾರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ನನ್ನ ಸಂಸಾರ 25 ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ಯಜಮಾನರು ಹರಪುರಕ್ಕೆ ಬಂದು ನನ್ನನ್ನೂ ಜತೆಯಲ್ಲಿ ಕರೆದುಕೊಂಡು ಶ್ರೀನಗರಕ್ಕೆ ಪ್ರಯಾಣ ಮಾಡಿದರು.

    ಶ್ರೀನಗರದಲ್ಲಿ ನಮಗೆ ಸ್ವಂತಮನೆಯಿರುವ ವಿಷಯವು ಪಾಠಕಿಯರಿಗೆ ತಿಳಿದೇ ಇದೆ. ನಾವು ನಮ್ಮ ಮನೆಯಲ್ಲೇ ಇದ್ದುಕೊಂಡಿದ್ದೆವು. ನಮ್ಮ ಯಜಮಾನರು ಶ್ರೀನಗರದಲ್ಲಿರುವ ವಿಷಯದಲ್ಲಿ 'ನಮ್ಮ ತಾತನವರಿಗೆ ಅಭಿಪ್ರಾಯವಿರಲಿಲ್ಲ. ಆದರೂ ಹಠವಾದಿಗಳಾದ ನಮ್ಮ ಯಜಮಾನರು ತಾತನವರ ಮಾತನ್ನು ಅನಾದರಿಸಿ ಶ್ರೀನಗರದಲ್ಲೇ ಇದ್ದುಬಿಟ್ಟರು. ನಮ್ಮ ಮನೆಯವರು ಈರೀತಿಮಾಡಿದುದು ಮುಂದೆ ಬಹು ಅನರ್ಥಕ್ಕೆ ಮೂಲವಾಯಿತು.
    ನಾವು ಶ್ರೀನಗರದಲ್ಲಿ ಒಂದು ವರ್ಷ ಕಾಲವನ್ನು ನೂಕಿದೆವು. ಅಷ್ಟರಲ್ಲಿ ನಮ್ಮ ಭಾವನವರಿಗೆ ಹರಪುರದಿಂದ ಶ್ರೀನಗರಕ್ಕೆ ವರ್ಗವಾಗಿ ಎಪ್ಪತ್ತು ರೂಪಾಯಿ ತಲಬುಳ್ಳ ಶಾಲಾಪರೀಕ್ಷಕರ (Schools' Assistant Inspector) ಅಧಿಕಾರವು ಪ್ರಾಪ್ತವಾಯಿತು. ಈ ವರ್ತಮಾನವನ್ನು ಕೇಳಿ ನಮ್ಮ ಮನೆಯವರೆಲ್ಲರಿಗೂ ತುಂಬಾ ಸಂತೋಷವುಂಟಾಯಿತು. ನನಗೂ ಸಹ ಇನ್ನುಮೇಲೆ ಎಲ್ಲರೂ ಒಟ್ಟಿಗೆ ಇರಬಹುದೆಂಬ ಆನಂದವು ಮಿತಿಮೀರಿ ಹೋಯಿತು. ಆದರೆ ನಮ್ಮಿ ಆನಂದವು ಮುಂದೆ ಕ್ರಮವಾಗಿ ಶಿಥಿಲವಾಗುತ್ತಬಂದಿತು.
    ಭಾವನವರೂ ಸಂಸಾರದೊಡನೆ ಶ್ರೀನಗರಕ್ಕೆ ಬಂದು ಕೆಲಸದ ಮೇಲೆ ದಾಖ ಲಾದರು. ಇದೇ ಸಮಯದಲ್ಲಿ ನಮ್ಮ ಅತ್ತಮ್ಮನವರೂ, ತಾತನವರೂ, ಕಾಶೀಯಾತ್ರಾದಿ ಮಹಾಯಾತ್ರೆಗೆ ಹೊರಡಬೇಕೆಂದು ಸಂಕಲ್ಪಿಸಿ ಅದರಂತೆ ಪ್ರಯಾಣಮಾಡಿದರು. ಈಗ ಮನೆಯಲ್ಲಿ ನಮ್ಮ ಮತ್ತು ಅಕ್ಕನ ಸಂಸಾರ ಮಾತ್ರವೇ ಇದೆ.
    ಮಾತೃ ಭೂಮಿಯಾದ ಹರಪುರದಲ್ಲಿ ಈಗ ಯಾರೂ ಇಲ್ಲ. ತಾತನವರಂತೂ ನಮ್ಮ ಯಜಮಾನರನ್ನು ಹರಪುರಕ್ಕೆ ಹೋಗುವ ವಿಷಯದಲ್ಲಿ ಎಷ್ಟೋ ಪ್ರೋತ್ಸಾಹಿಸಿದರು. ಅವರು ಲಕ್ಷಿಸಲಿಲ್ಲ. ಭಾವನವರು, ತಮ್ಮನನ್ನು ಕುರಿತು, ಹರಪುರಕ್ಕೆ ಹೋಗಿ ಯಾರಾದರೊಬ್ಬರು ಅಲ್ಲಿ ವಾಸಿಸದಿದ್ದರೆ ಮನೆ, ಭೂಮಿಗಳು ನೋಡುವವರಿಲ್ಲದಂತಾಗುತ್ತದೆ ಯಾದುದರಿಂದ ಅಲ್ಲಿ ಹೋಗಿರುವದು ಒಳ್ಳೆಯದೆಂದೂ ನಾವುಗಳು ಎಲ್ಲರೂ ಇಲ್ಲಿಯೇ ಇದ್ದು ಬಿಟ್ಟರೆ ಸ್ಥಳದಲ್ಲಿ ತುಂಬಾ ನಷ್ಟ ವುಂಟೆಂದೂ ಮುಂತಾಗಿ ನಮ್ಮ ಯಜಮಾನರೊಡನೆ ನೀತಿಯನ್ನು ಹೇಳಿದರು. ಭಾವನವರು ಪೂರ್ವಾಪರವಿವೇ ಚನೆಯುಳ್ಳವರು. ಅಲ್ಲದೆ ದೇಶಭಾಷೆಯಲ್ಲಿ ಪದವೀಧರರಾಗಿ ಪಂಡಿತರೆನಿಸಿ ಕೊಂಡಿದ್ದರು. ಯುಕ್ತಾ ಯುಕ್ತ ವಿವೇಚನಾಜ್ಞಾನವು ಅವರಿಗೆ ಸಂಪೂರ್ಣವಾಗಿದ್ದಿತು.