ಈ ಪುಟವನ್ನು ಪರಿಶೀಲಿಸಲಾಗಿದೆ
24 ಕಾದಂಬರೀ ಸಂಗ್ರಹ ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ಕಲಹಗಳು ಹುಟ್ಟಲಾರದೆಂದು ಅಭಿಪ್ರಾಯವಿದ್ದುದರಿಂದ ಅದಕ್ಕಾಗಿಯೇ ಶ್ರೀನಗರಕ್ಕೆ ಹೊರಟು ಹೋದರು.
ಈಗ ಹರಪುರದಲ್ಲಿ ನಾನು ನನ್ನ ಅಕ್ಕ ಅವರ ಸಂಸಾರ, ನಮ್ಮ ಭಾವನವರು ಇಷ್ಟು ಮಂದಿ ಉಳಿದುಕೊಂಡೆವು. ನಮ್ಮ ಭಾವನವರು ಒಳ್ಳೇ ಸರಳ ಹೃದಯರು. ಅಲ್ಲದೆ ತುಂಬಾ ಸಾಧುಗಳು. ಒಬ್ಬರನ್ನು ಒಂದು ದಿನ ಗದರಿಸಿ ಕೊಳ್ಳುವವರಲ್ಲ. ಇಂತಹ ಸುಗುಣಿಗಳಾದ ಭಾವನವರಿಗೆ ನನ್ನ ಮತ್ತು ಅಕ್ಕನ ಅಂತಃಕಲಹಗಳು ತಿಳಿಯದೆ ಹೋಗಲಿಲ್ಲ. ಚಾಡಿಕೋರರು ಹೇಳಿದ ಮಾತನ್ನು ಕೇಳಿ ಅದರಂತೆ ನಡಿಯುವ ಹುಚ್ಚು ನಮ್ಮ ಭಾವನವರಲ್ಲಿ ಇಲ್ಲದ್ದರಿಂದಲೇ ನನ್ನ ಮೇಲೆ ನನ್ನ ಅಕ್ಕನು ವಿಧ ವಿಧವಾಗಿ ಹೇಳಿದ ದೂರುಗಳನ್ನು ಅವರು ಮನಸ್ಸಿಗೆ ನಿಜವೆಂದು ತಿಳಿದುಕೊಳ್ಳಲಿಲ್ಲ. ನಮ್ಮ ಭಾವನವರಿಗೆ ನಮ್ಮ ಯಜಮಾನರನ್ನು ಕಂಡರೆ ತುಂಬಾ ಪ್ರೀತಿ ಇದ್ದಿತು. ಅಲ್ಲದೆ ಅವರಿಗೆ ಚಿಕ್ಕಂದಿನಲ್ಲೇ ಎರಡು ವಿವಾಹವಾಗಿ ಅದು ಕೈ ಸೇರದೆ ಹೋಗಿ ಇಂತಹ ಕಷ್ಟವುಂಟಾಯಿತಲ್ಲಾ ಎಂಬ ಯೋಚನೆಯು ನಮ್ಮ ಭಾವನವರ ಮನಸ್ಸಿಗೆ ಹೊಳೆದಾಗ ಎಷ್ಟೋ ಕನಿಕರವುಂಟಾಗುತ್ತಿತ್ತು. ಅದೇ ಕನಿಕರವೇ ನಾದಿನಿಯಾದ ನನ್ನ ಮೇಲೂ ಇದ್ದಿತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ನನ್ನ ಅಕ್ಕನು ಗೃಹಕೃತ್ಯದಲ್ಲಿ ತುಂಬಾ ಪಳಗಿದವರು. ಪತಿಸೇವೆಯಲ್ಲಿ ಬದ್ದಾದರರು. ಒಂದು ದಿನವೂ ಭಾವನವರ ಮನಸ್ಸಿಗೆ ಆಯಾಸವಾಗದಂತೆ ನಡೆದು ಕೊಳ್ಳುತ್ತಿದ್ದರು. ಶಿಶುಪೊಷಣೆಯಲ್ಲಿ ಅಕ್ಕನವರಿಗಿರುವಷ್ಟು ಅನುಭವವು ನನಗೆ ಇರಲಿಲ್ಲ. ಅಲ್ಲದೆ ಅಕ್ಕನು ಒಳ್ಳೆಯ ನೀತಿಪರರಾಗಿದ್ದರು. ಇಂತಹ ಸುಗುಣಿಗಳಾದ ಅಕ್ಕನವರು ನನ್ನ ಮೇಲೆ ಅವಿಶ್ವಾಸಿಗಳಾದುದು ನನ್ನ ದುರ್ದೈವವೋ ಅಥವಾ ನಾನು ಈ ಮನೆಗೆ ಪ್ರವೇಶ ಮಾಡಿದ ವೇಳೆಯ ಫಲವೋ ಹೇಳುವುದಕ್ಕಾಗುವುದಿಲ್ಲ. VI ನಮ್ಮ ಯಜಮಾನರು ಶ್ರೀನಗರಕ್ಕೆ ಹೊರಟುಹೋಗಿ ಎರಡು ತಿಂಗಳಾದರೂ ಅವರಯೋಗಕ್ಷೇಮವೇ ತಿಳಿಯಲಿಲ್ಲ. ಎರಡು ತಿಂಗಳು ಕಳದ ಮೇಲೆ ಅವರೊಂದು ಕಾಗದವನ್ನು ಬರೆದರು. ಆ ಕಾಗದದಿಂದ ನಮ್ಮ ಯಜಮಾನರಿಗೆ ಶ್ರೀನಗರದಲ್ಲೇ 25 ರೂಪಾಯಿ ತಲಬುಳ್ಳ ಒಂದು ಶಾಲೋಪಾಧ್ಯಾಯರ ಕೆಲಸವಾಗಿದೆಯೆಂದು ತಿಳಿದು ಬಂದಿತು. ನಮ್ಮ ಯಜಮಾನರು ಶ್ರೀನಗರಕ್ಕೆ ಪ್ರಯಾಣ ಮಾಡಿದ ಮೇಲೆ ನಾನೂ ಅಕ್ಕನೂ ಸರಿ ಹೋಗಿಸಿಕೊಂಡು ಅನ್ಯೋನ್ಯವಾಗಿ ಗೃಹಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದೆವು. ನಮ್ಮ ಮನೆಗೆ ಕಾಗದಬಂದ ೪ ದಿನದೊಳಗಾಗಿ ನಮ್ಮ