ಪುಟ:ನನ್ನ ಸಂಸಾರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ಸಂಸಾರ

                                                        49

ತಮ್ಮ-ಅಹುದು. ಚೆನ್ನಾಗಿಬಲ್ಲೆನು, ಸೌಭಾಗ್ಯವತಿಯೇ ಹಣವನ್ನು ತೆಗೆದುಕೊಂಡಿರುವಳೆಂಬುದಕ್ಕೆ

    ಸಾಕಾದಷ್ಟು ಪ್ರಮಾಣಗಳೂ ತೋರಿಬಂದುವು. (ಪ್ರತ್ಯಕ್ಷವಾದರೂ ಪ್ರಮಾಣಿಸಿ 
    ನೋಡಬೇಕಲ್ಲವೆ ? ) 

ಅಣ್ಣ-ಕೈಹುಣ್ಣಿಗೆ ಕನ್ನಡಿ ಏಕೆ ? ಎಂಬಂತೆ ನಮ್ಮ ಮನೆಯಲ್ಲಿ ಸಾಕಾದಷ್ಟು ಪ್ರಮೇಯಗಳಿಂದ

    ನಿನ್ನ ಹೆಂಡತಿಯು ದ್ರವ್ಯಾಸಹಾರ ಮಾಡಿದುದು ಖಚಿತವಾಗಿ ತೋರಿದರೂ ನೀನು ಈ 
    ವಿಧವಾದ ಸುಳ್ಳುಹೇಳಿ ದೋಷಿಯಾದ ಹೆಂಡತಿಯನ್ನು ನಿರ್ದೋಷಿಯೆಂದು ಹೇಗೆ 
    ಹೇಳಿಕೊಳ್ಳುವೆ ? 

ತಮ್ಮ-(ಕ್ರೋಧಕಂಪಿತಸ್ವರದಿಂದ) ಏನೇನು ? ನನ್ನಹೆಂಡತಿ-ಹಣವನ್ನು ಕದ್ದಳೆಂದು ಪುನಃ

    ಹೇಳುವಿರಾ ? ನನ್ನಹೆಂಡತಿಯು, ಈ ಹಣವು ನಮ್ಮ ತಾಯಿಯಿಂದ ನನಗೆ 
    ಕೊಡಲ್ಪಟ್ಟಿತು. ಎಂದು ಹೇಳಿದ ಮಾತಿನ ನಿಶ್ವಯಾಂಶವನ್ನು ತಿಳಿಯಲು ನಾನು 
    ರಂಗಪುರಕ್ಕೆ ಹೋಗಿದ್ದುದೂ ಅಲ್ಲನಡೆದ ವರ್ತಮಾನವನ್ನು 
    ನಿನ್ನೆಯದಿನವೇ ತಂತಿಯಮೂಲಕ ತಿಳಿಸಿದುದನ್ನೂ ನೀವು ಈಗಲೇ ಮರೆತಂತೆ
    ತೋರುತ್ತದೆ.

ಅಣ್ಣ-ಏಕಾದೀತು ? ಇದೆಲ್ಲಾಸುಳ್ಳು ! ಇಂದ್ರಜಾಲ ! ನಿನ್ನ ಹೆಂಡತಿಯ ತಪ್ಪನ್ನು

    ಮುಚ್ಚಬೇಕೆಂದು ನೀವೆಲ್ಲಾ ಗುಂಪುಕೂಡಿ ಆಲೋಚನೆಮಾಡಿ ಈ ಆಟವನ್ನು 
    ಹೂಡಿರುವಂತೆ ತೋರುತ್ತದೆ. ನಾನೇನು ನಿಮ್ಮ ಮಾತನ್ನು ನಂಬುವಷ್ಟು
    ಹೇಡಿಯಲ್ಲ. ನಿನಗೇಕೆ ಹೀಗೆ ಬುದ್ದಿಬದಲಾಗಿ ಹೋಯಿತು. ಹೇಳು. 

ತಮ್ಮ -(ಅನಿರ್ವಾಯವಾಗಿ ಬಂದ ಕೋಪವನ್ನು ಕಷ್ಟದಿಂದ ತಡೆದು) ಅಣ್ಣನವರೇ !

    ತಡೆದು ಮಾತನಾಡಿರಿ. ನಿದಾನವಾಗಿ ಆಲೋಚಿಸಿ. ನಾನು ನಿಮ್ಮ ಮಾತಿಗೆ 
    ಮೀರಿ ಮರ್ಯಾದೋಲ್ಲಂಘನನ್ನು ಮಾಡಬೇಕಾದ ಸಮಯವು ಪ್ರಾಪ್ತವಾ 
    ದಂತಿದೆ. ದೋಷಿಯಾಗಿದ್ದಾಗ್ಯೂ ಹೆಂತಿಯನ್ನು ನಿರ್ದೋಷಿಯೆನ್ನುವುದಕ್ಕೆ 
    ನಾನೇನೂ ಷಂಡನಲ್ಲ. ನಿಮ್ಮೊಡನೆ ಸುಳ್ಳುಹೇಳಿ ನಾನೇನೂ ದ್ರವ್ಯಾಪಹಾರ 
    ಮಾಡುವುದಕ್ಕೆ ಬಂದಿಲ್ಲ. ಸಾವಿರ ಮಾತಿನಿಂದೇನು ? ಲೋಕವನ್ನು ಮೆಚ್ಚಿಸಿ 
    ನನಗಾಗಬೇಕಾದುದು ತಾನೇ ವಿಸಿರುವುದು ? ಪ್ರಾಮಾಣಿಕತನವೂ ಧರ್ಮವೂ 
    ನಮ್ಮಲ್ಲಿರುವುದಾದರೆ ಸರ್ವತ್ರವ್ಯಾಪಿಯಾದ ಪರಮಾತ್ಮನು ಮೆಚ್ಚಿಯೇ 
    ಮೆಚ್ಚುವನು, ಅಧರ್ಮದಿಂದ ಲೋಕವೆಲ್ಲಾ ಮೆಚ್ಚಬೇಕೆಂಬ ಆಶೆನನಗಿಲ್ಲ. 
    ನನ್ನ ಹೆಂಡತಿಯಿಂದ ನೀವು ಪೂರ್ವಾಪರ ವಿವೇಚನೆಇಲ್ಲದೆ ಸ್ವೀಕರಿಸಿರುವ
    ಹಣವನ್ನು ತಾವು ಹಿಂದಕ್ಕೆ ಕೊಡಬೇಕಾದುದಿಲ್ಲ, ಅವಳು ನನ್ನೊಡನೆ