ಪುಟ:ನನ್ನ ಸಂಸಾರ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

48

                          ಕಾದಂಬರಿ ಸಂಗ್ರಹ

ಜ್ಜೀವಿತಳಾದೆನು. ಹಣದ ಆಶೆಯೆನ್ನೂ, ಹುರುಡನ್ನೂ, ಹಟಮಾರಿತನವನ್ನೂ ಸತ್ಯ ವಾಗಿಬಿಟ್ಟೆನು. ಇನ್ನು ಮುಂದೆ ಇದೇ ವಿಧವಾಗಿ ನನ್ನನ್ನು ಎಚ್ಚರಗೊಳಿಸುತ್ತಾ ನನ್ನನ್ನು ಕಾಪಾಡಬೇಕು. ನನ್ನ ಜನ್ಮಾಂತರ ಸುಕೃತಪರಿಪಾಕದಿಂದ ತಮಗೆ ನಾನು ಪತ್ನಿ ಯೊಗಿರುವೆನು, ನನ್ನ ಜೀವನವು ಧನ್ಯ ! ನಾನು ಸುಖಿ ! ನಿಮ್ಮ ಉಪದೇಶವನ್ನು ನಾನು ಮರೆವುದಿಲ್ಲ. ನಾನೂ ಆಚರಿಸುತ್ತಾ ನನ್ನ ಸೋದರಿಯರಲ್ಲೂ ಈ ಉಪದೇಶವನ್ನು ಹರಡುವೆನೆಂದು ಹೇಳಿ ನನ್ನ ಸ್ವಾಮಿಗೆ ನಮಸ್ಕರಿಸಿದೆನು. ಅಷ್ಟರಲ್ಲೇ ನಮ್ಮ ಯಜಮಾನರನ್ನು ಯಾರೋ ಹೊರಗೆ ಕೂಗಿದದರಿಂದ ಅವರು ಹೊರಟುಹೋದರು. ಪದೇಪದೇ ಅವರ ಉಪದೇಶವನ್ನು ಧ್ಯಾನಿಸುತ್ತಾ ನಾನು ನನ್ನ ಹಿಂದಿನ ಯೋಜನೆಗೆ ಇನ್ನು ಬಿಟ್ಟು ಮನೆಗೆಲಸಕ್ಕೆ ಹೊರಟುಹೋದೆನು.

   ಪಾಠಕಿಯರೆ ! ಈ ಅಧ್ಯಾಯದಲ್ಲಿ ವಿಷವು ಪರೀಕ್ಷಿಸಲ್ಪಟ್ಟಿರುವುದು. ವಿಷಕ್ಕೂ ಅಮೃತಕ್ಕೂ ಭೇದವು ತೋರಿಸಲ್ಪಟ್ಟಿರುವುದು. ನೀವು ಪುನಃಪುನಃ ಈ ಅಧ್ಯಾಯವನ್ನು ಮಥನಮಾಡಿ. ಭರತಭೂಮಾತೆಯು ಪತಿವ್ರತೆಯರಿಂದ ತುಂಬಲ್ಪಟ್ಟು ಪರಿಶುದ್ದಳಾಗಿ ಬೆಳಗಲಿ !
                           IX
      ನಮ್ಮ ಯಜಮಾನರು ನನಗೆ ಸ್ತ್ರೀಧರ್ಮಗಳನ್ನು ಉಪದೇಶ ಮಾಡಿದ ದಿನ ಮಧ್ಯಾಹ್ನ ನಾಲ್ಕುವರೆ ಗಂಟೆ ಸಮಯದಲ್ಲಿ ನಮ್ಮ ಭಾವನವರಿಗೂ ನಮ್ಮ ಮನೆಯವರಿಗೂ (ಅಣ್ಣತಮ್ಮಂದಿಗೆ) ಈ ಕೆಳಗೆ ಕಂಡಂತೆ ಸಂಭಾಷಣೆ ನಡೆಯಿತು. 

ಅಣ್ಣ - ವಾಸುದೇವ ! ನೀನು ನಿನ್ನೆಯದಿನ ರಂಗಪುರದಿಂದ ಕಳುಹಿಸಿದ ತಂತಿಯು

      ತಲಪಿತು. ನೀನು ನಿಮ್ಮ ಅತ್ತೆಯನ್ನು ನೋಡಿದ್ದೆಯೋ ?

ತಮ್ಮ- ಹೌದು, ನೋಡಿದ್ದೆನು. ಹಣದ ವಿಚಾರವನ್ನು ಕೇಳಿದೆನು ! ಅಣ್ಣ - ಏನೆಂದು ಕೇಳಿದೆ ! ಅವರೇನು ಹೇಳಿದರು ? ತಮ್ಮ- ನಿಮ್ಮ ಮಗಳಲ್ಲಿ ಏನು ಪದಾರ್ಥವನ್ನು ಕೊಟ್ಟಿರುವಿರಿ ಎಂದು ಕೇಳಿದುದಕ್ಕೆ

     ಒಂದು ಅಡ್ಡಿಕೆ, ಐವತ್ತು ರೂಪಾಯಿಗಳನ್ನು ಕೊಟ್ಟಿರುವೆನೆಂದು ಹೇಳಿದರು. 

ಅಣ್ಣ - ಈ ಮಾತು ನಿಜವೋ ? ನಿಜವಾಗಿಯೂ ಅವರು ಹಾಗೆ ಹೇಳಿದರೋ ? ತಮ್ಮ- ನಿಜವಾಗಿಯೂ ಹೀಗೆಯೇ ಹೇಳಿದರು. ಇದರಲ್ಲಿ ಸಂದೇಹ ಪಡಲು

     ಕಾರಣವೇನಿರುವುದು ?

ಅಣ್ಣ - ಆದಿನ ನಡೆದ ಹಣದ ವಿಚಾರದಲ್ಲಿ ಏನೆಂದು ಇತ್ಯರ್ಥವಾಯಿತು. ದೋಷಗ

     ಳಾರೆಂಬುದನ್ನು ಬಲ್ಲೆಯೋ ?