ಪುಟ:ನನ್ನ ಸಂಸಾರ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ಸಂಸಾರ 47

ಯಮಾತನ್ನಾಡಿ ಸಮಾಧಾನಪಡಿಸಬೇಕು. ವಿಪತ್ತು ಬಂದಾಗ ನಿಮ್ಮ ಪತಿಯು ಯಾವ ಸ್ಥಿತಿಯಲ್ಲಿರುವನೋ ನೀವೂ ಅದೇ ಸ್ಥಿತಿಯಲ್ಲಿರಬೇಕು. ಯಾವಾಗಲೂ ಅಸಮಾ ಧಾನಪಡಬಾರದು. ಅತ್ತೆ, ವಾರಗಿತ್ತಿ, ಅತ್ತಿಗೆನಾದಿನಿಯರು ಕ್ರೂರವಾಗಿ ಮಾತನಾ ಡಿದರೆ ಸಹಿಸಿಕೊಂಡಿರಬೇಕು. ಅವರು ಇನ್ನು ಮುಂದೆ ಅಂತಹ ತಾವಾಗಿಯೇ ಬಿಡುವಂತೆ ನಿಮ್ಮ ಸಮಾಧಾನಸದ್ದುಣಗಳಿಂದ ಏರ್ಪಡಿಸಿಕೊಳ್ಳಬೇಕು. ಗಂಡನಸ್ಥಿತಿಯು ಒಳ್ಳೆಯದಾಗಲೀ ಕೆಟ್ಟದ್ದಾಗಲೀ ಗಂಡನಿಗೆ ಐಶ್ವರ್ಯವಿರಲಿ ಬಡತನ ವಿರಲಿ ಅದನ್ನು ಹೆಂಡತಿಯ ಅನುಭವಿಸಬೇಕು, ತಂದೆಯಾದವನು ಧೊರೆಯಾಗಿ ದ್ದಾಗ್ಯೂ ಆತನ ಪದವಿಗೆ ಸ್ತ್ರೀಯು ಎಂದೂ ಅಧಿಕಾರಿಯಾಗಲಾರಳು. ತನ್ನ ಗಂಡನ ಮಾನವನ್ನು ಕಾಪಾಡಿ ಆತನಿರುವ ಸ್ಥಿತಿಯಲ್ಲೇ ತಾನೂ ಇರಬೇಕು, ಮೇಲೆಕಂಡ ಸುಗುಣಗಳಿಂದ ಕೂಡಿದ ಸ್ತ್ರೀಯೇ ಈ ಲೋಕದಲ್ಲಿ ಮಾನ್ಯಳಾಗಿಯೂ, ಪೂಜ್ಯಳಾ ಗಿಯೂ, ಪ್ರಾತಃಸ್ಮರಣೀಯಳಾಗಿಯೂ, ಇರುತ್ತಾಳೆ, ಇದೇ ಗುಣದಿಂದ ಕೂಡಿದ್ದು ದರಿಂದಲೇ ಅಲ್ಲವೆ, ಸೀತೆ, ಸಾವಿತ್ರಿ, ದಮಯಂತಿ, ಸತ್ಯವತಿ, ಲೋಪಾಮುದ್ರೆ, ಮುಂತಾದ ಕುಲಸ್ತ್ರೀಯರ ಹೆಸರು ಈ ಭರತಖಂಡದ ಎಲ್ಲಾ ಕಡೆಯಲ್ಲೂ ಸುವ ರ್ಣಾಕ್ಷರಗಳಿಂದ ಕೆತ್ತಲ್ಪಟ್ಟು ರಾರಾಜಿಸುತಲಿವೆ-ಇವರು ಪರಮ ಪತಿವ್ರತೆಯರಾಗಿ ಪತಿಭಕ್ತರಾಗಿ ಅವರಲ್ಲಿ ಅತ್ಯಂತ ಪ್ರೇಮವನ್ನಿಟ್ಟು ಕೊಂಡಿದ್ದುದರಿಂದಲೇ ಅಲ್ಲವೆ. ಅವರ ಕೀರ್ತಿಗಳು ದಶದಿಕ್ಕುಗಳಲ್ಲಿಯೂ ಹರಡಿಕೊಂಡಿವೆ. ಇತರ ವಿಷಯಗಳಲ್ಲಿ ನಮ್ಮಿ ಭರತಖಂಡವು ಉಳಿದ ದೇಶಗಳಿಗಿಂತ ಹಿಂದೆ ಬಿದ್ದಿದ್ದಾಗ್ಯೂ ಸೀತೆ, ಸಾವಿತ್ರಿಯೇ ಮುಂತಾದ ಮಹಾಮಹಾ ಪತಿವ್ರತೆಯರ ಸತ್ಕೀರ್ತಿ ವಿಷಯದಲ್ಲಿ ಇದಕ್ಕೆ ಸಮಾನವಾದ ದೇಶ ಮತ್ತೊಂದಿಲ್ಲ, ತಮ್ಮ ಸ್ತ್ರೀಜನರ ಯೋಗ್ಯತೆಯನ್ನು ಅಭಿವೃ ದ್ವಿಪಡಿಸಲಪೇಕ್ಷೆಯುಳ್ಳ ಸ್ತ್ರೀಯರು ಮೇಲೆ ಹೇಳಿದ ಪುತ್ರನಡತೆಗಳು ಮರಳಿ ಉಜ್ಜೀ ವಿತವಾಗುವಂತೆ ನಡೆದುಕೊಳ್ಳಬೇಕು, ಇದನ್ನು ಕೇಳಿದ ಪ್ರತಿಯೊಬ್ಬಹೆಂಗಸೂ ಇದೇ ವಿಧದಲ್ಲಿ ನಡೆವುದಾದರೆ ಈ ಗ್ರಂಥಲೇಖನವು ಸಾರ್ಥಕವಾಗುವುದು. ಸೋದರಿಯರೇ ! ಇಷ್ಟು ಉಪದೇಶವನ್ನು ಮಾಡಿ ನಮ್ಮ ಯಜಮಾನರು, ಇನ್ನು ಮುಂದೆ ನಿನ್ನಿಷ್ಟದಂತೆ ಮಾಡೆಂದು ಹೇಳಿ ನನ್ನ ಕೈಬಿಟ್ಟುಬಿಟ್ಟು ಸುಮ್ಮನಾದರು. ಅವರ ಉಪದೇಶವನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಬಹುವಾಗಿ ಸಂತೋಷವಾಯಿತು. ಹರ್ಷಾಶ್ರುಗಳು ಕಣ್ಣಿನಿಂದುದುರಿದುವು. ಕೂಡಲೆ ಪತಿಚರಣಗಳಲ್ಲಿ ನನ್ನ ಶಿಸ್ಸನ್ನಿಟ್ಟು, ದೇವ! ಕ್ಷಮಿಸು. ಇದುವರಿಗೆ ನಾನು ಮೂಢತನದಿಂದ ಮಾಡಿದ ತಪ್ಪುಗಳನ್ನೆಲ್ಲಾ ಮನ್ನಿಸು. ಇಂದು ನಿಮ್ಮ ಉಪದೇಶದಿಂದ ನಾನು ಪುನರು