ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಧುಸೂದನ
7




ಭಾಸ್ಕರ:- ಅವರಿಬ್ಬರಿಗೂ ಮನೆಯ ಪ್ರತಿಯೊಂದು ಭಾಗವೂ ಚನ್ನಾಗಿ ತಿಳಿದಿ
ದೆಯೋ?
ಸೋಮಸುಂದರ ಅವರಿಬ್ಬರಲ್ಲಿ ಮುದುಕನಾದ ಕೃಷ್ಣನಿಗೆ ಅನೇಕ ವಿಷಯಗಳು
ತಿಳಿದಿರುತ್ತವೆ. ಈಗ ತಾನೇ ಸ್ವಲ್ಪದಿವಸಗಳ ಕೆಳಗೆ ಅವನು ನನಗೊಂದು ಗುಪ್ತಮಾರ್ಗ
ವನ್ನು ತೋರಿಸಿದನು, ಅಲ್ಲಿಯವರಿಗೂ ಅದು ಇರುವುದಾಗಿ ನನಗೆ ತಿಳಿದೇ ಇರಲಿಲ್ಲ.
ಆ ಗುಪ್ತ ಮೂರ್ಗವು ನನ್ನ ಕೊಠಡಿಯಿಂದ ಅದೋ ಅಲ್ಲಿರುವ ಕೊಠಡಿಗೆ ಭೂಮಿಯೊಳ
ಗಿಂದ ದಾರಿಮಾಡಿಕೊಂಡು ಹೋಗುತ್ತದೆ. ಎನಲು ಇಲ್ಲಿ ನೋಡೋಣ ನೀವು ಆ
ಗುಪ್ತ ಮಾರ್ಗವಿರುವ ಸ್ಥಳವನ್ನು ತೋರಿಸಿರಿ. ಎಂದುಹೇಳಿ ಭಾಸ್ಕರನು ಮತ್ತೊಂದು
ಕೊಠಡಿಯಿರುವ ದಿಕ್ಕನ್ನು ನೋಡಿಕೊಂಡು ಅದಕ್ಕೆ ಸರಿಯಾಗಿ ತಾನುಕುಳಿತಿದ್ದ
ಕೊಠಡಿಯ ಬಾಗಲನ್ನು ತನ್ನ ಸೂಕ್ಷ್ಮವಾದ ಕಣ್ಣಿನಿಂದ ನೋಡಿದನು. ಅಲ್ಲೊಂದು
ದೊಡ್ಡದಾದ ಗುಂಡಾದ ಮೇಜುಹಾಕಿತ್ತು. ಇ೦ಥಾ ಗುಪ್ತಮಾರ್ಗಗಳ ವಿಷಯವ
ನ್ನರಿತಿದ್ದ ಭಾಸ್ಕರನು ಅಲ್ಲೇ ಏನೋ ಗುಟ್ಟಿದೆಯಂದು ಯೋಚಿಸಿ" ಆ ಗುಪ್ತಮಾರ್ಗದ
ದಾರಿಯು ಆ ಗುಂದಾದ ಮೇಜಿನಡಿಯಿಂದ ಪ್ರಾರಂಭವಾಗುತ್ತದೆಂದು ತಿಳಿಸಿದನು.
ಸೋಮಸುಂದರನು ನಕ್ಕು, ಹೌದು ಅದು ಅಲ್ಲೇಇರುವುದು. ಆದರೆ ನಾನು ಹೇಳದೇ
ಇದ್ದರೆ ಪತ್ತೆಯಾಗುವುದು ಆಸಾಧ್ಯವಲ್ಲವೇ" ಎಂದು ಕೇಳಿದನು.
ಭಾಸ್ಕರ :-ದಯವಿಟ್ಟು ಆ ಕೃಷ್ಣನೆಂಬ ಸೇವಕನನ್ನು ನನ್ನ ಕೊಠಡಿಗೆ ಕಳುಹಿ
ಸಿರಿ, ಮತ್ತು ನಾನು ಕೇಳುವ ಪ್ರಶ್ನೆಗೆ-ಗೆಲ್ಲಾ ಸುರಿಯಾದ ಉತ್ತರವನ್ನು ಕೊಡುವಂತೆ
ಹೇಳಿಕಳುಹಿಸಿ, ಎಂದು ಹೇಳಿಬಿಟ್ಟು ತನ್ನ ಕೊಠಡಿಗೆ ಹೋದನು. ಸ್ವಲ್ಪ ಹೊತ್ತಿಗೆ
ಎಂಭತ್ತು ವರ್ಷ ವಯಸ್ಸಿನ ಅತಿವೃದ್ಧನೊಬ್ಬನು ಕೋಲೂರಿಕೊಡು ಕೆಮ್ಮುತ್ತಾ
ಬಂದು ಭಾಸ್ಕರನಿತ್ತ ಆಸನದ ಮೇಲೆ ಕುಳಿತುಕ್ಕೊಂಡು ತನ್ನನ್ನು ಕರೆಯ ಕಳುಹಿಸಿದ
ಕಾರಣವೇನೆಂದು ಕೇಳಿದನು.
ಭಾಸ್ಕರ :-ಅಯ್ಯಾ ನೀನು ಈ ಮನೆಯಲ್ಲಿ ಎಷ್ಟು ವರ್ಷಗಳಿಂದ ಇರುವಿ.
ಕೃಷ :-ಸ್ವಾಮಿಾ ನಾನು ಈ ಮನೆಯನ್ನು ನನ್ನ ಇಪ್ಪತ್ತನೇ ವರ್ಷದಲ್ಲಿ
ಸೇರಿದೆನು. ಈಗ ನನಗೆ ಎಂಭತ್ತೆರಡು ವರ್ಷ ವಯಸ್ಸು, ಆದ್ದರಿಂದ ನಾನು ಇಲ್ಲಿ
ಅರವತ್ತೆರಡು ವರ್ಷಗಳಿಂದಿರುವೆನು. ನಾನು ಕೆಲಸಕ್ಕೆ ಸೇರಿದಾಗ ಸೋಮಸುಂದರರ
ತಾತಂದಿರಿದ್ದರು. ಆಗಿನಿಂದಲೂ ನಾನು ನಂಬಿಗಸ್ತನಾಗಿ ಕೆಲಸಮಾಡುತ್ತಾ ಬಂದೆನು,
ನನ್ನ ವೃದ್ಧಾಷ್ಯದಲ್ಲಿ ಇವರು ನನ್ನನ್ನು ತಮ್ಮ ಮನೆಯವರರಂತೆ ನೋಡಿಕೊಳ್ಳುತ್ತಿದ್ದಾರೆ.
ಎಲ್ಲಾ ವಿಷಯಗಳೂ ನನ್ನ ಮೂಲಕವೇ ನಡೆಯಬೇಕಾಗಿದೆ, ನಮ್ಮ ಯಜಮೂನು