ಪುಟ:ನನ್ನ ಸಂಸಾರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

8

ಕಾದಂಬರೀ ಸಂಗ್ರಹ

ಗುಂಟಾದ ಕಷ್ಟದಿಂದ ನನ್ನ ಹೃದಯವು ಒಡದುಹೋಗುವ ಹಾಗಾಗಿದೆ. ನಮ್ಮ ಮಧುಸೂದನನನ್ನು ಮಗುವಾಗಿದ್ದಾಗಲಿಂದಲೂ ನಾನೇ ಎತ್ತಿ ಲಾಲನೆ ಪಾಲನೆ ಮಾಡಿದವನು. ನನಗೆ ಸಂಸಾರವೇ ಇಲ್ಲದಿದ್ದರಿಂದ ಮಧುಸೂದನನನ್ನು ನನ್ನ ಮಗನೆಂದೇ ತಿಳಿದುಕೊಂಡಿದ್ದೇನು. ಅವನೂ ಸಹಾ ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಾ ನನ್ನ ಮಾತುಗಳನ್ನು ಮೀರಿ ನಡೆಯದೆ ಇದ್ದನು. ಅವನು ತಂದೆಗೆ ತಿಳಿಸದ ಅನೇಕ ವಿಷಯಗಳನ್ನು ನನಗೆ ಹೇಳಿದ್ದನು. ಅವುಗಳಲ್ಲಿ ಒಂದನ್ನೂ ಇದುವರೆಗೂ ನಾನು ಯಾರ ಸಂಗಡಲೂ ಹೇಳಿಲ್ಲವು. ಅದು ಯಾವುದೆಂದರೆ ಅವನು ಕಲ್ಕತ್ತಾ ನಗರದಲ್ಲಿದ್ದಾಗ ಕೆಲವು ದುರ್ಮಾರ್ಗಪ್ರವರ್ತಕರು ಅವನು ಬಹಳ ಎಶ್ವರ್ಯಕ್ಕೆ ಯಜಮಾನನೆಂದು ತಿಳಿದು ಅವನನ್ನು ಕೆಡಿಸುವುದಾಗಿ ನಿಷ್ಕರ್ಷೆಮಾಡಿಕೊಂಡು ಅವನ ಸ್ನೇಹವನ್ನು ಬೆಳಸಿದರು. ಅವನು ಅವರ ಮೋಸವನ್ನರಿಯದೆ ಅವರ ಕಪಟಸ್ನೇಹಕ್ಕೆ ಮರುಳಾಗಿ ಅವರ ಸಂಗಡವೇ ಕಾಲಕಳೆಯಲು ಪ್ರಾರಂಭಮಾಡಿದರು. ಆ ದುರ್ಮಾರ್ಗಿಗಳೆಲ್ಲರೂ ಜನಗ ಳನ್ನು ಮೋಸಮಾಡಿ ತಮ್ಮ ಜೀವನವನ್ನು ಮಾಡಿಕೊಳ್ಳತಕ್ಕಂಥಾ ಒಂದು ಕಳ್ಳ ಸಂಘಸಂಸ್ಕರಣ ಪಂಗಡಕ್ಕೆ ಸೇರಿದವರು. ಈ ಸಂಘದವರನ್ನು ಕಂಡರೆ ಇತರ ಸಂಘದವರೆಲ್ಲಾ ರಹಸ್ಯದಿಂದ ತಮ್ಮ ಕೂಟಕ್ಕೆ ಕೆಟ್ಟ ಹೆಸರು ತರುವವರೆಂದು ಅವರನ್ನು ಜರೆಯುತ್ತಿದ್ದರು. ಇವರಿಗೆಲ್ಲಾ ಮುಖಂಡನಾಗಿ ಒಬ್ಬ ಬಿ.ಎ, ಬಿ.ಎಲ್. ಪರೀಕ್ಷೆ ಮಾಡಿದ ನೀಚನೊಬ್ಬನಿದ್ದನು. ಈ ದುರ್ಮಾರ್ಗಗಳು ತಾವು ಮಹಾ ಸುಗುಣಿಗಳಂತೆ ತೋರ್ಪಡಿಸಿಕೊಳ್ಳುತ್ತಾ ತಮ್ಮ ಕೆಲ ಉಡುಪುಗಳನ್ನು ಧರಿಸಿಕೊಂಡು ಎಲ್ಲಾ ಸಂಘ ಸಂಸ್ಕರಣ ಸಂಬಂಧವಾದ ಮೀಟಿಂಗಿಗೆ ನಿಲ್ಲುತ್ತಲೂ, ಋತುವಾದ ಕನ್ಯೆಗಳನ್ನು ವಿವಾಹ ಮಾಡಿಕೊಳ್ಳುವುದಾಗಿ ಬರೆದು ಕೊಡುತ್ತಲೂ ಜಾತಿ ಭೇದವಿಲ್ಲವೆಂದು ಹೇಳಿ ಎಲ್ಲರೊಡನೆಯೂ ಸೇರಿ ಮಾದಕ ಪದಾರ್ಥಗಳನ್ನು ಸೇವಿಸುತ್ತಲೂ ಯಾವಾಗಲೂ ಸಿಗರೇಟ್ ಮುಂತಾದವುಗಳನ್ನು ಬಾಯಲ್ಲಿ ಕಚ್ಚಿಕೊಂಡೇ ಅಲೆಯುತ್ತಲೂ, ವೈದೀಕರನ್ನು ಕಂಡರೆ ಜರಿಯುತ್ತಲೂ, ಇದ್ದರು. ಇಂಥಾ ನೀಚರು ತಮ್ಮ ಪಂಗಡಕ್ಕೆ ಏನೂ ಅರಿಯದ ಹೊಸಮನುಷ್ಯರನ್ನೆಲ್ಲಾ ಸೇರಿಸಿಕೊಂಡು ಅವರನ್ನೂ ಹಾಳುಮಾಡುತ್ತಿದ್ದರು. ಇವರ ಮೇಲೆಲ್ಲಾ ಪೋಲೀಸಿನವರಿಗೆ ಕಣ್ಣು ಇದ್ದೇ ಇತ್ತು. ಈ ಮಹಾತ್ಮರುಗಳು ಅನ್ಯಾಯವಾಗಿ ದೇಶವತ್ಸಲರಾದ ನಿರ್ಮಲ ಹೃದಯರಾದ ಸಂಘಸಂಸ್ಕರಣಕರ್ತರ ಹೆಸರನ್ನು ಹಾಳುಮಾಡುತ್ತಿದ್ದರು. ಇಂಥಾ ನೀಚರ ಗುಣವನ್ನರಿಯದೆ ನಮ್ಮ ಮಧುಸೂದನನು ಅವರ ಸ್ನೇಹವನ್ನು ಮಾಡಿದನು ಸ್ವಲ್ಪ ಕಾಲದಲ್ಲೇ ಈ ನೀಚರು ಇವನನ್ನು ದುರ್ಮಾರ್ಗಕ್ಕೆಳೆಯಲು ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲೇ