ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕಾದಂಬರಿ ಸಂಗ್ರಹ

ಮಾತೇನು ? ಆಚಾರ ರುಚಿ ಇವುಗಳಿಗೆ ಆ ಭೋಜನಶಾಲೆಯು ತವುರು ಮನೆಯಾ ಗಿತ್ತು, ಇತರ ಹೋಟಲುಗಳಿಗಿಂತಲೂ ಇಲ್ಲಿನ ದರವು ಸ್ವಲ್ಪ ಜಾಸ್ತಿಯಾಗಿತ್ತು. ಆದರೂ ಇಲ್ಲಿಗೆ ಎಲ್ಲಾ ಹೋಟಲಿಗಿಂತಲೂ ಹೆಚ್ಚಾಗಿ ಜನಗಳು ಬರುತ್ತಿದ್ದರು,

              ಅನೇಕರು ಹೋಟಲುಗಳಲ್ಲಿರುವುದರಿಂದ ಹಾಳಾಗಿ ಹೋಗಿ ದುರ್ರ್ಮಾರ್ಗಿಗಳಾಗಿರುವರೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ, ಹೋಟಲುಗಳಲ್ಲಿ ಯಾವ ಆಚಾರವೂ ಇಲ್ಲದೆ ಮನಸ್ಸಿಗೆ ಬಂದಹಾಗೆ ನಡೆಯುವುದರಿಂದ ಕೆಟ್ಟ ನಡತೆಗಳಿಗೆ ತವರು ಮನೆಗಳಾಗಿವೆ. ಆಚಾರ ಸಂಪನ್ನರಾದವರು ವಿಧಿಯಿಲ್ಲದೆ ಹೋಟಲುಗಳಿಗೆ ಸೇರಿ ಸ್ವಲ್ಪಕಾಲದಲ್ಲೇ ಆಚಾರಾದಿಗಳನ್ನು ಮರೆತು ನಾಸ್ತಿಕರಾಗುತ್ತಾರೆ. ನಾವು ಮೇಲೆ ವಿವರಿಸಿರುವ ಕಲ್ಕತ್ತಾ ನಗರದ ವೈದೀಕ ಹೋಟಲಿನ ನೇಮನಿಷ್ಟೇಗಳಲ್ಲಿ ಹತ್ತರ ಲ್ಲೊಂದು ಭಾಗವು ಇತರ ಹೋಟಲುಗಳಲ್ಲಿ ನಡೆದರೂ ಸಹಾ ಸಾಕಾಗಿದೆ. ಅನೇಕರು ಅಲ್ಲಿಗೆ ಸೇರಿ ತಮ್ಮ ಆಚಾರಾದಿಗಳನ್ನುಳಿಸಿಕೊಳ್ಳುವರು.
      ಭಾಸ್ಕರನು ಮೇಲೆ ಕಂಡ ವೈದಿಕರ ಹೋಟಲಿಗೆ ಹೋಗಿ ಅಲ್ಲಿನ ಯಜಮಾನ ನೊಡನೆ ಸ್ವಲ್ಪಹೊತ್ತು ಮಾತನಾಡಲಪೇಕ್ಷಿಸಿದನು. ಲೌಕಿಕರನ್ನು ನೋಡುವುದಕ್ಕಾ ಗಿಯೇ ಪ್ರತ್ಯೇಕವಾಗಿ ನಿರ್ಮಾಣವಾಗಿದ್ದ ಕೊಠಡಿಗೆ ಭಾಸ್ಕರನು ಹೋಗಿ ಕಾದಿರಲು ಸ್ವಲ್ಪ ಹೊತ್ತಾದ ಮೇಲೆ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಭೂತಿಯನ್ನು ಧರಿಸಿದ್ದ ಬ್ರಾಹ್ಮಣನೊಬ್ಬನು ಬಂದು ತನ್ನನ್ನು ಕರೆಯ ಕಳುಹಲು ಕಾರಣವೇನೆಂದು ಕೇಳಿದನು. ತನ್ನ ದೇಶದವನಾದ ಆ ಬ್ರಾಹ್ಮಣನು ತನ್ನನ್ನು ಸ್ವಭಾಷೆಯಲ್ಲಿ ಮಾತನಾಡಿ ಸಲು ಭಾಸ್ಕರನು ಸಂತೋಷಪಟ್ಟವನಾಗಿ ಅವನಿಗೆ ವಂದಿಸಿ, ಅಯ್ಯಾ ತಮ್ಮ ಗೃಹದಲ್ಲಿ ಈಗೆರಡು ವರ್ಷಗಳಹಿಂದೆ ಭೋಜನಮಾಡುತ್ತಿದ್ದ ಮಧುಸೂದನನೆಂಬುವನನ್ನು ಬಲ್ಲಿರಾ? "
      ಬ್ರಾಹ್ಮಣಃ-ಚೆನ್ನಾಗಿ ಬಲ್ಲೆನು, ಅವನಸಂಗಡ ಅವನ ಸಹಪಾಠಿಗಳಾದವರು ಅನೇಕರು ಬರುತ್ತಿದ್ದರು. ಅವರಿಗೆಲ್ಲಾ ಅವನೇ ದುಡ್ಡು ಕೊಡುತ್ತಿದ್ದನು, ನಾನು ಅಲ್ಲಲ್ಲಿ ಜನಗಳ ಆಚಾರಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಗೂಢಚಾರರನ್ನಿಟ್ಟಿರುವೆನು, ಒಂದು ದಿವಸ ನನ್ನ ಗೂಢಚಾರರಲ್ಲೊಬ್ಬನು, ಮಧುಸೂದನನ ಸ್ನೇಹಿತನೊಬ್ಬನು ರಾತ್ರೀ ಕಾಲದಲ್ಲಿ ಇಲ್ಲೇ ಸಮಿಪದಲ್ಲಿರುವ ಮದ್ಯದಂಗಡಿಯಿಂದ ಹೊರಕ್ಕೆ ಬರುವುದನ್ನು ನೋಡಿ ನನಗೆ ತಿಳಿಸಿದನು, ನಾನು ಆ ವಿಷಯವನ್ನು ಸುಯಾಗಿ ವಿಚಾರಿಸಲು ಅವನು ಮದ್ಯಪಾಯಿಯೆಂದು ತಿಳಿಯಬಂದಿತು. ಅವನನ್ನು ಇಲ್ಲಿಗೆ ಇನ್ನು ಮುಂದೆ ಬರಕೂಡ ದೆಂದು ಕಟ್ಟಳೇಮಾಡಿದೆನು. ಮಧುಸೂದನನು ಅವನ ಪರವಾಗಿ ಮಾತನಾಡಿದನು, ನಾನು