ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಧುಸೂದನ
21

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^

ಮಾರನೇ ದಿವಸವೇ ಬೊ ಬಚಾರ್‌ ಬೀದಿಗೆ ಹೋಗಿ ಅಲ್ಲಿನ 29 ನೇ ನಂಬರ್‌ ಮನೆಯ
ಯಜಮಾನನನ್ನು ಹುಡುಕಿಕ್ಕೊಂಡು ಹೋದನು, ಅವನನ್ನು ಕಂಡುಹಿಡಿದು ಅವನನ್ನು
ಮಧುಸೂದನನ ವಿಷಯವೇನಾದರೂ ಗೊತ್ತೋ ಎಂದು ಕೇಳಿದನು.
ಯಜಮಾನ:-ಮಧುಸೂದನನೆಂಬುವನು ಈಗ ನಮ್ಮ ಮನೆಯಲ್ಲಿ ಇಲ್ಲ.
ಭಾಸ್ಕರ-ಈಗ್ಯೆ ಎರಡು ವರ್ಷಗಳ ಹಿಂದೆ ಇಲ್ಲಿ ಇದ್ದನು. ಅವನನ್ನೇನಾ
ದರೂ ಈಚಿಗೆ ನೋಡಿದ್ದೀರಾ ?
ಯಜಮಾನ-: ಆಹಾ! ಈಗ ಜ್ಞಾಪಕಕ್ಕೆ ಬಂದಿತು, ಈಗ ಎರಡು ವರ್ಷ
ಗಳಲ್ಲಿ ಮಧುಸೂದನನೆಂಬೊಬ್ಬ ಜಮಿನ್ದಾರನಿದ್ದನು. ಅವನು ನನ್ನ ಮನೆಯನ್ನು
ಬಿಟ್ಟ ಮೇಲೆ ಏನಾದನೋ ನನಗೆ ಗೊತ್ತಿಲ್ಲ.
ಭಾಸ್ಕರ :-ಅವನ ಸಂಗಡ ಅನೇಕ ಸ್ನೇಹಿತರಿದ್ದರು. ಅವರ ವಿಷಯವೇನಾ
ದರೂ ನಿಮಗೆ ಗೊತ್ತಿದೆಯೋ ?
ಯಜಮಾನ-: ಸ್ವಾಮಿ ನನಗಾವುದೂ ತಿಳಿಯದು. ಆ ಮಧುಸೂದನ
ನೆಂಬುವನು ಹೊರಟು ಹೋದಮೇಲೆ ಅವರೆಲ್ಲರೂ ಹೊರಟು ಹೋದರು. ಅಷ್ಟೇ
ನನಗೆ ಗೊತ್ತಿರುವುದು.
ಭಾಸ್ಕರನು ಇನ್ನು ಇವನನ್ನು ಕೇಳಿ ಪ್ರಯೋಜನವಿಲ್ಲವೆಂದು ಅವನಿಂದಪ್ಪಣೆ
ಯನ್ನು ಪಡೆದುಕೊಂಡು ಕಾಳೀಬೀದಿಯಲ್ಲಿದ್ದ ವೈದೀಕರ ಹೋಟೆಲಿಗೆ ಹೋದನು.
ಆ ಹೋಟಲು ಮೈಸೂರು ದೇಶಸ್ಥನಾದ ಸುಬ್ರಹ್ಮಣ್ಯಶಾಸ್ತ್ರಿಯೆಂಬುದವನಿಂದ ನಡೆಸ
ಲ್ಪಡುತ್ತಿತ್ತು, ಅಲ್ಲಿ ವೈದೀಕರಿಗೆ ಮಾತ್ರ ಭೋಜನವನ್ನು ಹಾಕುತ್ತಿದ್ದರು, ಪ್ರತಿ
ಯೊಬ್ಬನೂ ಸ್ನಾನಾದಿಗಳನ್ನೂ ಅಲ್ಲೆ ಮಾಡಿಕೊಂಡು ಜಪ ತಪಗಳನ್ನೂ ಮಾಡಿ
ಅಲ್ಲಿದ್ದ ವಿಗ್ರಹಗಳ ಪೂಜೆಯನ್ನು ನೋಡಿಬಿಟ್ಟು ಅಭಿಷೇಕ ಒಲವನ್ನು ಸ್ವೀಕರಿಸಿ
ಸಾಲುಸಾಲಾಗಿ ಹಾಕಿದ್ದ ಎಲೆಗಳ ಬಳಿ ಕುಳಿತು ಭೋಜನಮಾಡುತ್ತಿದ್ದರು. ನೆಲವೆಲ್ಲಾ
ಚನ್ನಾಗಿ ಸಾರಿಸಲ್ಪಟ್ಟು ರಂಗವಲ್ಲಿ ಗಳಿಂದಲಂಕರಿಸಲ್ಪಟ್ಟಿರುತ್ತಿದ್ದವು, ಅಡಿಗೆ ಮುಂತಾದ
ವೆಲ್ಲವೂ ವಯಸ್ಕರಾದ ಮತ್ತು ಆಚಾರ ಸಂಪನ್ನರಾದ ವಿಧವೆಗಳಿಂದ ನಡೆಯುತ್ತಿ
ದ್ದವು. ಬಡಿಸುವವರೂ ಅವರೇ ಆಗಿದ್ದರು. ಇತರ ಹೋಟಲುಗಳಹಾಗೆ ಅಲ್ಲಿ
ಯಾರೂ ತಮ್ಮ ಅಂಗಿ ಮುಂತಾದವುಗಳೊಡನೆ ಕುಳಿತು ಭೋಜನಮಾಡುವುದಕ್ಕೆ
ಆಗುತ್ತಿರಲಿಲ್ಲ. ಮಧ್ಯದಲ್ಲಿ ಯಾರೂ ಎದ್ದು ಹೊಗಕೂಡದು. ಭೋಜನವು ನಡೆಯು
ತ್ತಿರುವಾಗ ಇಬ್ಬರು ಬ್ರಾಹ್ಮಣರು ವೇದ ಮಂತ್ರಗಳನ್ನು ಹೇಳುತ್ತಿದ್ದರು. ಹೆಚ್ಚಿನ