ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ೯ ಕರ್ಣಾಟಕ ಕಾವೈಕಲಾನಿಧಿ.

  • [ ಸಂಧಿ ಅವಳ ರೂಪಗುಣಾತಿಶಯಗಳ | ನಮಗೆ ಬಣ್ಣಿಸಲಳವೆ ಕೇಳ್ತಾ | ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು || ಪ್ರವಿಮಲಾಕಾರದಲಿ ನೋಡಲು | ಸವಿನುಡಿಯು ಸಂಭಾಷಣೆಗಳಲಿ | ಭುವನದಲಿ ಕಂಡಿಲ್ಲ ದಮಯಂತಿಯ ಸಮಾನರನು ||

ಮುರಹರನ ನಿಜಸೊಸೆಯ ರೂಪಂ | ತಿರಲಿ ಚಂದನ ಮಗಳ ಚೆಲುವ | ತಿರಲಿ ಮೈನಾಕನ ಸಹೋದರಿಯಂದನಂತಿರಲಿ | ಶರಧಿತನುಜೆಯ ಸಂದರಿಯವನು ! ಮಳಸಿತೆಂಬುದು ಲೋಕದೊಳ ಗಾ | ಸರಸಿಜಾಕ್ಷಿಯ ಬಗೆಗೆ ಸರಿದೊರೆಯಿಲ್ಲ ಕೇಳೆಂದ | - ಮಿಸುನಿಯೋಲೆಯ ಡಾಳ ಕದವಿನೊ ಆಸೆದೆ ಮೇಲುದು ಜಾತಿ ಕುಚಭರ | ವೆಸೆಯೆ ನಡುವಲಾಡೆ ಮಸಗಿದ ಮಂದಹಾಸದಲಿ | ಎಸೆವ ಸೋ'ರು ಡಿಬಾರದು ಬಾ | ಗಿನಿದ ಕೊರಳಿನ ಕೈಯ ವಿ'ಣೆಯು | ಬಿಸರುಹಾಕ್ಷಿಯ ಸೊಬಗ ಬಣ್ಣಿಸಲಳವೆ ತನಗೆಂದ || ಹೆಳುತಿರೆ ನುಡಿನುತ್ತಿಗೆ ಮೆಚ್ಚುತ | ಕೇಳಿ ತಲೆದೂಗಿದನು ನಿಷಧ ವಿ | ಪಾಲನಯನಕೆ ಕಮಲಮುಖಿ ಗೋಚರಿಸಿದಂತಾಗೆ | ಬಾಲಕಿಗೆ ಮೋಹಿಸುತ ಪುಸ್ಮಶ | ರಾಳಿಯಲಿ ಮನನೊಂದು ಶಿವಶಿವ | ಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ || - ವಸಿತಗುಣಗಳನೊಂದನೊಂದನು | ಮನದೊಳಗೆ ಸವಿವಾಡಿ ತರುಣಿಯ | ನೆನೆದು ಹೋ೦ಪುಳಿಯಾಗಿ ವಿರಹದಿ ಮನನಕಿಡಾಗಿ || ೯೩|