ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳಚರಿತ್ರೆ ಟಿ ವರಕವಿಗಳ ದಿನದಿ ಧರಣೀ ! ಶೂರರು ಕೈವಾರಿಸಲು ಕೇಳಿದು | * ತರುಣಿ ವಿರಹಕೆ ತನುವ ತೆತಿ ಹಳೆ೦ದರಬಲೆಯರು | - ಕೇಳಿದನು ನಸುನಗುತ ಭೀಮನ್ನ | ಪಾಲ ತನ್ನಾತ್ಮಜೆಯ ಯೌವನ | ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ || ಓಲಗಕೆ ನಡೆತಂದು ಬರಸಿದ || ನೋಲೆಗಳ ಕಳುಹಿದನು ಧರಣಿ | ಪಾಲಕರ ಬರಹೇಳೆನುತ ಹೋಯಿಸಿದನು ಡಂಗುರವ | ೪ - ಹರಿದರರಸಾಳುಗಳು ದಿಕ್ಕುಗ | ಳರಸುಗಳ ನಗರಿಗಳಿಗತ್ತಲು | ಪುರವ ಶೃಂಗರಿಸಿದರು ಭೀಮನ್ನ ಪಾಲನಾಜ್ಞೆಯಲಿ | ತುರಿಸಿದರು ಭಂಡಾರದಲಿ ನವ | ಭರಿತವಾದ ಸುವಸ್ತುಗಳ ವಿ | ಸರಿಸಿ ಕಟ್ಟಿದರಗಲದಲಿ ವೈವಾಹಮಂಟಸವ | - ಹೊಳವ ದಂತದ ಕಂಭಗಳ ಪು | ತಳಿಯ ಸಾಲಿನ ಮೇಲುಕಟ್ಟಿನ | ತಳಿರ ತೋರಣದೋರಣದ ಲೋವೆಗಳ ಅರಳೆಲೆಯ | ಬಿಳಿಯ ಮುತ್ತಿನ ಸರದ ಸವಳದ | ಬಿಳಿಯ ಚೌರಿಯ ಮೇಲುಕಟ್ಟಿನ | ಹೊಳಹು ಮಿಗೆ ರಚಿಸಿದರು ಸತಿಯ ವಿವಾಹಮಂಟಸವ | ೬ ಓರಣದ ಬೀದಿಗಳ ಸಾದಿನ | ಸಾರಣೆಯ ಕತ್ತುರಿಯ ಮಿಗೆ ಪ | ಸ್ಪೀರ ಚಳೆಯದ ಪರಿಮಳದ ಕುಂಕುಮದ ಕಾರಣೆಯ || ತೋರಣದ ತಳಿಗೆಗಳ ಪುನಶ್ಚ೦ | ಗಾರ ಮೆರೆದಿರೆ ಕೇರಿಕೇರಿಯ | ವಾರನಾರಿಯರಿಂದ ಸಂದಣಿಸಿತು ವಿದರ್ಭಪುರ |