ಪುಟ:ನಾಸ್ತಿಕ ಕೊಟ್ಟ ದೇವರು.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಕೃತಿ ಸಿದ್ಧವಾದ ಮೇಲೆ ಸ್ವಲ್ಪ ಕಾಲ ಮನಸ್ಸಿಗೆ ನೆಮ್ಮದಿ ಎನ್ನಿಸಿತು. ಸೀತಾಪತಿ ಹೊರಹೋಗಿ, ಮತ್ತೆ ಶೂನ್ಯವನ್ನೆ ನೋಡುತ್ತ ಕುಳಿತ. ತಿರುಗಿ ಆ ಶೂನ್ಯ, ಅವ್ಯಕ್ತ ವೇದನೆಯ ಭಾರವಾದ ಹೊರೆಯನ್ನು ಅವನ ಮೇಲೆ ಹೇರಿತು ... ಆ ನೋವು-ಅಸಮಾಧಾನ-ಕ್ಷೋಭೆ ...

ದೀಪ ಹಚ್ಚುವ ಹೊತ್ತಿಗೆ ಆ ಪ್ರದೇಶದ ಧರ್ಮಗುರು ಬಂದರು.

"ಮನೆಯವರನ್ನು ಕಾಣಬೇಕಾಗಿತ್ತೆ? ಆತ ಊರಲಿಲ್ಲ,” ಎಂದ ಸೀತಾಪತಿ.

"ಇಲ್ಲ ಮಿಸ್ಟರ್ ಸೀತಾಪತಿ, ನಿಮ್ಮನ್ನೇ ಕಾಣಲು ಬಂದೆ.”

"ನಾನು ಬರಹೇಳಿದ್ದು ನೆನಪಿಲ್ಲ.”

"ఇల్ల, ನಾನಾಗಿಯೇ ಬ೦ದೆ."

"ಅಪ್ಪಣೆಯಾಗಲಿ! ಏನು ಸಮಾಚಾರ?”

ಅವರು ಸಮಾಚಾರ ಹೇಳಿದರು. ಸೀತಾಪತಿ ಅಳ್ಳೆ ಬಿರಿಯುವಂತೆ ಬಿದ್ದು ಬಿದ್ದು ನಕ್ಕ.

"ನಿಮ್ಮದು ಅಭಿನಂದನೀಯ ಸಾಹಸ ಗುರುಗಳೆ! ಹೀಗೆಲ್ಲ ಕೇಳಿ ನೀವು ನನ್ನನ್ನು ಗೌರವಿಸುತ್ತಿದ್ದೀರಿ!”

"ಇಲ್ಲ ಸೀತಾಪತಿ. ನೀವು ತಪ್ಪುಗ್ರಹಿಸಬಾರದು. ಇದು ಮಹತ್ವದ ವಿಷಯ."

ಸೀತಾಪತಿಯೊಂದು ದೇವರನ್ನು ನಿರ್ಮಿಸುವುದು ಮಹತ್ವದ ವಿಷಯ ವಲ್ಲದೆ ಮತ್ತೇನು ?

ತೋಟದ ಜೀವನದಲ್ಲಿ ಕೆಲಸಗಾರರು ಸುಖ ಕಾಣುವುದಿಲ್ಲ. ಅವರ ಯೋಚನೆ ಸತ್ಪಥದಲ್ಲಿ ಸಾಗುವುದಿಲ್ಲ. ಅವರನ್ನು ನಾಗರಿಕರನ್ನಾಗಿ ಮಾಡಲು ಇರುವ ಸಾಧನ, ಧರ್ಮವೊಂದೇ. ಅವರು ಈಗ ಕಷ್ಟಪಡುತ್ತಿರು ವುದು ಹಿಂದಿನ ಜನ್ಮದಲ್ಲಿ ಅವರು ಮಾಡಿದ ಕೆಟ್ಟ ಕೃತಿಗಳ ಕಾರಣದಿಂದ. ಈಗ ಧರ್ಮನಿಷ್ಟರಾಗಿ ದೈವಭಕ್ತರಾಗಿ ಸ್ವಾಮಿಭಕ್ತರಾಗಿ ಸಚ್ಚರಿತ್ರರಾಗಿ ಅವರು ಇದ್ದರೆ, ಮು೦ದಿನ ಜನ್ಮದಲಾದರೂ ಅವರಿಗೆ ಸುಖ ದೊರೆಯ ಬಹುದು. ತೋಟದ ಮಾಲಿಕರೂ ಹಾಗೆಯೇ ಹೇಳಿದ್ದಾರೆ. ಶ್ರದ್ಧೆ ಇಲ್ಲದೆ