ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ನಾಸ್ತಿಕ ಕೊಟ್ಟ ದೇವರು

... ಹೂಂ. ಹೋಗಿ ... ಒಳಗೇನೆ ಕಾಫಿ ತಗೊಂಡರಾಯಿತು....
ಏ ರುಕ್ಕೂ ... ರಾಯರು ಹೊರಡ್ತಾರಂತೆ ... ಕಮ್ಲೂ-ನಾಣಿ ಬಸ್ ಸ್ಟ್ಯಾಂಡ್ ತನಕ ಹೋಗಿ ಇವರನ್ನು ಬಿಟ್ಬಿಟ್ಟು ಬನ್ನಿ ... ಇಲ್ಲ. ನಾನು ಏಳೋಲ್ಲ ... ಮಲಗೇ ಇರ್ತೀನಿ... ತುಂಬಾ ಆಯಾಸ ... ಏ ಪರಮಾತ್ಮ...

ರುಕ್ಮಿಣಮ್ಮ

ನೀವು ಅಳಬೇಡ ಅಂತೀರಿ ... ಆದರೆ ನಾನೇನು ಕಲ್ಲೆ ? ಮರವೆ ? ಹೇಗೆ ಸಹಿಸೋದು ? ಹಿರಿಯರ ಪುಣ್ಯದಿಂದ ಎಲ್ಲ ಸರಿಹೋಯಿತು ... ಇವತ್ತು ಇಷ್ಟಾದ್ರೂ ಮಾತಾಡಿದ್ದಾರೆ. ನಿಮ್ಮನ್ನು ಗುರುತುಹಿಡಿದಿದ್ದಾರೆ...
ಆದರೆ ಮೊನ್ನೆ, ಮೊನ್ನೆ... ಅಯ್ಯೋ ... ಅಷ್ಟು ದಿನ ಕಳೆದದ್ದೇ... ಏನಾದರೂ ಆಗಿದ್ದರೆ-ಅನಾಹುತ ಆಗಿದ್ದರೆ- ಅಯ್ಯೋ-
ಇಲ್ಲಪ್ಪ ಅಳೋದಿಲ್ಲ; ಅಪ್ಪಾ, ನೀನು ನನ್ನ ತಮ್ಮ ಇದ್ದ ಹಾಗೆ... ನಿನ್ನಂಥವರು ನಾಲ್ಕು ಜನ ಈ ಪ್ರಪಂಚದಲ್ಲಿ ಇಲ್ಲದೇ ಇದ್ರೆ ಬದುಕೋದುಂಟೆ ?
ಆ ಮನೆಯ ಯಜಮಾನನೋ...ಆ ಮಹರಾಯ ಕಟುಕ... ಮೂರು ತಿಂಗಳ ಬಾಡಿಗೆ ಬಾಕೀಂತ ಹಿಂಸೆ ಕೊಡ್ತಿದಾನೆ. . . ಅವರು ಪ್ರಜ್ಞೆ ಇಲ್ದೆ ಮಲಗಿದ್ದಾಗ್ಲೂ ಬಂದು, ಮನೆ ಖಾಲಿ ಮಾಡೀಂತಂದ ; ಯುಗಾದಿಗೆ ಬೇರೆಯವರಿಗೆ ಬಾಡ್ಗೆಗೆ ಕೊಡ್ತೀನೀಂತಂದ ; ಆ ಒಂದೇ ಒ೦ದು ಹಳೇ ಧರ್ಮಾವರ ಸೀರೇನ ಮೂರು ಕಾಸಿಗೆ ಕೊಟ್ಟಿದ್ದಾಯಿತಪ್ಪಾ... ಅಂತೂ ಇನ್ನು ಎರಡು ತಿಂಗಳ ಬಾಡಿಗೆ ಬಾಕೀನೇ...
...ಸಂಪಾದ್ಸೋದು ಇನ್ನು ಯಾವತ್ತೊ. . . ಬಾಲೂ . . .ಉ!... ನಾಣೀನೂ ಈ ವರ್ಷ ಲೋಯರ್ ಸೆಂಕೆಂಡರಿ. . . ಮುಂದೆ ಹೇಗಪ್ಪಾ ಓದ್ಸೋದು . . .
...ಮನಸ್ಸು ಕಠಿನವಾಗುತ್ತೆ ಒಮ್ಮೊಮ್ಮೆ...ಯಾತಕ್ಕೆ ಈ ಮಕ್ಕಳು ಹುಟ್ಟಿದುವೋ. . . ಸದ್ಯ ಕಮ್ಲೂ ಹುಟ್ಟಿದ್ಮೇಲೆ ಎರಡನ್ನೂ ಯಮರಾಯ ಕಣ್ಣು ತೆರೆಯೋಕೆ ಮುಂಚೇನೆ ತಗೊಂಡು ಹೋದ. ಇಲ್ದೇ ಹೋಗಿದ್ರೆ ಇವಿಷ್ಟೂ ಮಕ್ಕಳ ಬವಣೆ ನೋಡೋದಕ್ಕಾಗ್ತಿತ್ತೆ?