ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಆ ಕಾಳ ರಾತ್ರಿ

೧೨೧

...ಯುಗಾದೀನಂತೆ, ನಾಡಿದ್ದು... ಏನು ಯುಗಾದೀನೋ! ಅಂತೂ ಮಕ್ಕಳ ಭಾಗ್ಯ-ಕಮಲೂ ಭಾಗ್ಯ-ಅವರು ಪಾರಾಗಿದ್ದಾರಲ್ಲಾ...
...ರಿಲಾಪ್ಸೆ? ಹಾಗೇಂತಂದ್ರೆ?... ಅಯ್ಯೋ, ಇಲ್ಲಪ್ಪ...ಸರಿಯಾಗಿ ನೋಡ್ಕೋತೀವಿ ನಮ್ಮಪ್ಪ ... ಏನೂ ತಿನ್ನಿಸೋಲ್ಲ... ಹೋಗ್ಬಿಟ್ಟು ಬಾ...ಮರೀಬೇಡಾಣ್ಣಾ ... ಯುಗಾದಿ ದಿನ ಬಂದ್ಬಿಡು... ಕಮ್ಲೂ, ನಾಣಿ, ಅಣ್ಣನ ಜೊತೇಲಿ ಅಷ್ಟು ದೂರ ಹೋಗ್ಬಿಟ್ಟು ಬನ್ನೀಪ್ಪಾ...

ಕಮಲ

ಇನ್ನೂ ಒಂದಷ್ಟು ಪುಸ್ತಕ ತಗೊಂಡು ಬನ್ನಿ ಅಣ್ಣ...ಅದೊಂದೇನೆ ನನಗಿರೋ ಸುಖ... ಈ ಮೂರು ತಿಂಗಳು ಒಂದೇ ಒಂದು ಸಿನಿಮಾ ನೋಡಿಲ್ಲ...ಒಬ್ಬಳೇ ಒಬ್ಬ ಸ್ನೀಹಿತೆಯ ಮನೆಗೂ ಹೋಗಿಲ್ಲ...ಈ ಚಿಂದಿ ಉಟ್ಕೊಂಡು ಹೇಗೆ ಹೋಗಲಿ?... ಇರೋದು ಎರಡೇ ಸೀರೆ. ಒಂದನ್ನ ನೋಡಿ ಇನ್ನೊಂದು ಹಲ್ಕಿಸೀತಾ ಇದೆ... ಈ ಒಂದು ವರ್ಷವೆಲ್ಲಾ ಚಪ್ಪಲಿಕೊಂಡಿಲ್ಲ. ಅಪ್ಪನಿಗೆ ಬರೋ ಐವತ್ತನಾಲ್ಕರಲ್ಲಿ ಏನನ್ನಕೊಳ್ಳೋದು, ಏನನ್ನ ಬಿಡೋದು...
...ಓ, ಯಾವುದೊ ಬಸ್ಸು ಬರ್ತಾ ಇದೆ. ಈ ಬಸ್ನಲ್ಲಿ ಹೋಗ್ತೀರಾ? ಅದರಲ್ಲಿ ಐದಾಣೆ. . . ಸಿಟಿಮಾರ್ಕೆಟ್ ಬಸ್ನಲ್ಲಿಹೋಗಿ . . . ಮೂರಾಣೆ, ಅಲ್ಲಿಂದ ಚಾಮರಾಜಪೇಟೆಗೆ ನಡೆದರಾಯ್ತು...ಇಲ್ಲ ಈ ಬಸ್ಸಲ್ಲ. . . ಇನ್ನೊಂದು ಬರುತ್ತೆ. . .
ತಿಂಡೀನೇ ? ಬೇಡಿ, ನಾವೇನೂ ತಿನ್ನೋಲ್ಲ... ಕೋಪಿಸ್ಕೋಬೇಡಿ...ಅಮ್ಮ ಗಲಾಟೆ ಮಾಡ್ತಾಳೆ . . . ಅಪ್ಪನೂ ಒಪ್ಪೋಲ್ಲ . . . ಹೋಟ್ಲಿನ ತಿಂಡಿ ತಿನ್ಬಾರ್ದು. . . ಬೇಡಿ . . . ಬೇಕಾದರೆ ಯಾವುದಾದ್ರೂ ಮಾಸಪತ್ರಿಕೆ ತೆಗಿಸ್ಕೊಡಿ. . .

ನಾಣಿ

ನಾನು ಮುಟ್ಟೊಲ್ಲಮ್ಮ ... ಒಂದು ರೂಪಾಯೀನೋ ! ಓಹೋ ಬೇಡಿ... ಹಾಗೆ ದುಡ್ಡು ತಗೋಬಾ‍‍ರ್ದು...ಒಂದು ಪೆನ್ಸಿಲು ತೆಗಿಸಿಕೊಡಿ ಸಾಕು...