ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾಸ್ತಿಕ ಕೊಟ್ಟ ದೇವರು

೧೨೨

ಮುಂದಿನ ವರ್ಷ ಹೈಸ್ಕೂಲಿಗೆ ಹೋಗ್ಬೇಕು ... ಆಮೇಲೆ ಕಾಲೇಜು... ಇಂಜನಿಯರಾಗ್ತೀನಿ. . .
ಅಂತೂ ಮೊದಲು ಕಮ್ಲೂ ಮದುವೆ. . .ಅದು ಮುಖ್ಯ. ಹಾಗೇಂತ ಅಪ್ಪಯ್ಯ ಯಾವಾಗ್ಲೂ ಹೇಳ್ತಾನೆ ಇರ್ತಾನೆ. . .
ಬಸ್ಸು ಬಂದ್ಬಿಡ್ತು. . .ಅಣ್ಣ ಹೊರಡ್ತೀರಾ?. . .ಯುಗಾದಿ ದಿವಸ ಬನ್ನಿ. . .ನಮಸ್ತೆ. . .ನಮಸ್ತೆ. . .

ಕತೆಗಾರ

ನಾನು ಶ್ರೀಮಂತನಲ್ಲ; ಕ್ಷುದ್ರಸಾಹಿತ್ಯ ನಿರ್ಮಾಣ ಮಾಡಿ ಆ ಮಸಾಲೆ ಮಾರಿದರೆ ಮಾತ್ರ ದುಡ್ಡು ಬರುವ ಕಾಲ ಇದು. ಆದರೂ ಬರೆದು ಬದುಕುವ ಸಾಹಿಸಿ ನಾನು. . .ಯುಗಾದಿ ಬಂದಾಗ ಆ ಖರ್ಚು, ಈ ಖರ್ಚು ಇಲ್ಲದಿರುವುದುಂಟೆ? ಹಬ್ಬ ವೊಹರಂ ಇರಲಿ, ಕ್ರಿಸ್ ಮಸ್ ಇರಲಿ, ಖರ್ಚು ಖರ್ಚೇ.
ಹಾಗಂತಲೇ ಯುಗಾದಿ ದಿನ ಅನಂತಯ್ಯನ ಮನೆ ಹುಡುಗರಿಗೆ ಉಡುಗೊರೆಯೆಂದು ಎರಡು ಮೂರು ಪೊಟ್ಟಣಗಳನ್ನು ಸಿದ್ಧಪಡಿಸಿದೆ. ಅದು ಏನೆಂದು ಹೇಳಿ ನನ್ನ ಬಂಡವಾಳ ತೋರಿಸಿಕೊಳ್ಳುವ ಇಷ್ಟವಿಲ್ಲ.
ಮಲ್ಲೇಶ್ವರದ ಹಾದಿ ಹಿಡಿದು ಅವರ ಮನೆಗೆ ಹೋದೆ, ಬೀಗ ಹಾಕಿತ್ತು. ಮನೆ ಮಾಲಿಕ ಅವರನ್ನು ಹೊರ ಹಾಕಿರಬಹುದೇ? ಎಂಬ ಶಂಕೆ ಮೂಡಿತು. ವಿಚಾರಿಸಿದೆ. ಅದೇ ಬೆಳಗ್ಗೆ ಅನಂತಯ್ಯನನ್ನು ಅಸ್ಪತ್ರೆ ಸೇರಿಸಿದರೆಂದೂ ಮನೆಯವರೆಲ್ಲ ಅಲ್ಲಿದ್ದಾರೆಂದೂ ತಿಳಿಯಿತು. ಮನಸ್ಸಿಗೆ ತುಂಬಾ ಕಸಿವಿಸಿಯಾಯಿತು. ಅಂತೂ ಯಾವುದರ ಬಗೆಗೆ ನಾನು ಭಯಪಟ್ಟಿದ್ದೆನೊ ಅದೇ ಸಂಭವಿಸಬೇಕೆ ?
ಸಿಟಿ ಮಾರ್ಕೆಟ್ ಬಸ್ ಹಿಡಿದು, ಬಂದಿಳಿದು, ನಾನು ಆಸ್ಪತ್ರೆ ಸೇರಿದೆ. ಹುಡುಕುವುದು ಕಷ್ಟವಾಗಲಿಲ್ಲ. ಜನರಲ್ ವಾರ್ಡಿನಲ್ಲಿ ಒಂದು ಮೂಲೆಯಲ್ಲಿ ಒಂದು ಮಂಚದ ಮೇಲೆ ಅನಂತಯ್ಯನನ್ನು ಮಲಗಿಸಿದ್ದರು. ಅದೊಂದು ಎಲುಬುಗೂಡು.
ಬಲು ಕಠಿನವಾಗಿ ಶ್ವಾಸೋಛ್ವಾಸವಾಗುತಿತ್ತು. ಮೈ ಕೆಂಡದಂತೆ ಕಾದಿತ್ತು. ಆಂ-ಊಂ ಎಂದು ನರಳುತಿದ್ದರು. ಮಾತಾಡಲೆಂದು