ಪುಟ:ನಾಸ್ತಿಕ ಕೊಟ್ಟ ದೇವರು.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೦

ನಾಸ್ತಿಕ ಕೊಟ್ಟ ದೇವರು

ಅಸಹನೀಯ ವೇದನೆಯಾಗಿತ್ತಿತ್ತು. ಒಂಟಿಯಾಗಿದ್ದಾಗ ಅಸಹಾಯತೆಯ ಕಣ್ಣು ಹನಿಯನ್ನೂ ಅವಳು ಉರುಳಗೊಟ್ಟಳು . . .
ಅದೇ ಪ್ರೀತಿಯ ಸೋದರ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ಈಗ. ಈ ಸಂದರ್ಭದಲ್ಲಿ ಆ ಉಡುಗೊರೆಯನ್ನು ತಾನು ಕೊಡುವುದು. ಸಾಧ್ಯವಾದರೆ? ಓ, ಸಾಧ್ಯವಾದರೆ?
ಆದರೆ, ಸಾಧ್ಯಗೊಳಿಸುವ ಹಾದಿ ಯಾವುದು ?

****

ಉದ್ದನೆಯ ಕಟ್ಟಡದಲ್ಲಿ ನೂರಾರು ಗಂಡಾಳುಗಳು, ಒಂದೇ ಸಾರಿಗೆ, ಐವತ್ತು ಅರುವತ್ತು ಪದಗಳ ಬಣ್ಣ ಬಣ್ಣದ ಅರಿವೆಯ ಮೇಲೆ ವಿದ್ಯುತ್ ಕತ್ತರಿ ಯಂತ್ರವನ್ನು ಪ್ರಯೋಗಿಸುತ್ತಿದ್ದರು. ಇನೊಂದು ಉರುಳುಯಂತ್ರ, ಬಟ್ಟೆಯನ್ನು ನೀಟಾಗಿ ಒಂದರ ಮೇಲೊಂದು ಹಾಸುತ್ತಿತ್ತು. ಸುಂಯ್ ಎಂದು ಮೀಟುತ್ತಿತ್ತು ವಿದ್ಯುತ್ ಯಂತ್ರ. ವಿವಿಧ ಆಕೃತಿಗಳ ಮಾದರಿಗಳ ಸಾಮೂಹಿಕ ಉತ್ಪನ್ನ—ನೂರು ನೂರರ ಸಂಖ್ಯೆಯಲ್ಲಿ. ಇನ್ನೊಂದೆಡೆ, ಫ್ಯಾಷನ್ ರೂಂ. ಅಲ್ಲಿ ಮಾದರಿಗಳು ನಿರ್ಮಾಣವಾಗುವುವು - ಮಕ್ಕಳಿಂದ ಮೊದಲಾಗಿ ವಿವಿಧ ವಯೋಮಾನದ ವರೆಗೆ; ಚಡ್ಡಿಯಿಂದ ತೊಡಗಿ ಉಣ್ಣೆಯ ವೇಸ್ಟ್ ಕೋಟಿನ ತನಕ. ಬಲ ಮಗ್ಗುಲಲ್ಲಿ ಯಂತ್ರ ಹೊಲ್ಲಿಗೆಯ ವಿಭಾಗ; ಅದರಾಚೆ ಕೈಹೊಲಿಗೆಯ ಶಾಖೆ. ಶಾರದೆಯನ್ನು ಒಳಗೊಂಡು ಮೂವತ್ತು ಹುಡುಗಿಯರು ದುಡಿಯುವುದು ಅಲ್ಲೇ. ಹೊರ ವಠಾರದಲ್ಲಿ ಕೊನೆಯ 'ಇಸ್ತ್ರಿ ಕೋಣೆ' . . .
ಶಾರದೆಗೆ ಬೇಕಾಗಿದ್ದುದು ಒಂದೇ ಒಂದು ನೀಲಿ ಬುಶ್ ಕೋಟು.
ಸಣ್ಣ ಸೈಜಿನದು, ಪೂರ್ಣ ತೋಳಿನದು . . .
ಕಣ್ಣೀರು ಒತ್ತರಿಸಿ ಬಂತು. ಹುಬ್ಬು ಗಂಟಿಕ್ಕಿತು. ಎಲ್ಲರೂ ತನ್ನನ್ನೇ ನೋಡಿ ನಗುತ್ತಲಿದ್ದಂತೆ ಅವಳಿಗೆ ಭಾಸವಾಯಿತು.
ಯೋಚನೆಗಳು ಮತ್ತೆ ಹರಿದುವು.
ತನ್ನ ಪ್ರೀತಿಯ ತಮ್ಮನಿಗಾಗಿ ಒಂದು ಬುಶ್ ಕೋಟು ಕೊಂಡುಕೊಳ್ಳುವ ಸಾಮರ್ಥ್ಯವೂ ಇಲ್ಲದೆ ಹೋಯಿತಲ್ಲ ತನಗೆ ?
ಕೈ ಬೆರಳುಗಳ ಮಕ್ಕಳ ಫ್ರಾಕುಗಳ ಅಂಗಿಗುಂಡಿಗಳನ್ನು ಹೊಲಿಯುತ್ತಿದ್ದುವು. ಆದರೆ ಅದೆಲ್ಲವೂ ಯಾಂತ್ರಿಕವಾದ ರೀತಿಯಲ್ಲಿ. ತಲೆಬಾಗಿಯೇ