ಪುಟ:ನಾಸ್ತಿಕ ಕೊಟ್ಟ ದೇವರು.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಣ್ಣಿನ ಮಗ ಗನ್ನು ತಂದ

"ನಿನ್ನ ಮಗ್ಗುಲಲ್ಲಿ ತಿರುಗಿ ನೋಡು ..."
"ತುಂಬಾ ಅಶಕ್ತಿ."
"ಮಗ್ಗಲು ಹೊರಳ್ಬೇಡ. ಹುಚ್ಚಪ್ಪ! ಹಾಗೆ–ದೃಷ್ಟಿ ತಿರುಗಿಸು."
"ಆ, ಇದೇನು ಕರ್ನಾಯಿಲ್ ನಿನ್ನ ಕಾಲಿಗೆ? ರಗ್ಗಿನ ಸಂದಿಯಿಂದ ಏನೋ ಕಾಣಿಸ್ತಿದೆಯಲ್ಲ?"
"ಬ್ಯಾಂಡೇಜು, ಗುಲ್ಡು ... ಹಿಮ ಕಡಿದದ್ದು."
"ಹಿಮ?"
"ಹ್ಞು."
"ನಾನು?"
"ನನ್ನ ಪಕ್ಕದಲ್ಲೆ ಮಂಚದ ಮೇಲೆ ಮಲಗಿದೀಯಾ."
"ಇದು ಕ್ಯಾಂಪ್ ಅಲ್ಲ?"
"ಅಲ್ಲ ಗುಲ್ಡು. ಇದು ಆಸ್ಪತ್ರೆ ಡೇರೆ."
"ಆಸ್ಪತ್ರೆ? ನಾವು ಮಲಗಿದೀವಿ?"
"ಎದುರಿಗೆ, ಆಚೆ ಮಗ್ಗುಲಿಗೆ, ಎಲ್ಲಾ ಕಡೆ ನಮ್ಮವರು ಮಲಗಿದಾರೆ."
"ವೆಲಾಂಗ್?"
"ಇದು ತೇಜಪುರ, ಗುಲ್ಡು."
"ತೇಜಪುರ? ಇಲ್ಲಿಗೆ ನಾವು ಹ್ಯಾಗ್ಬಂದ್ವಿ? ಯಾಕ್ಬಂದ್ವಿ?"
"ಶ್! ಸ್ವರ ಏರಿಸ್ಬಾರ್ದು, ಗುಲ್ಡು. ನೀನು ಹೀರೋ. ನಮ್ಮ ಹೀರೋಗಳಲ್ಲಿ ಒಬ್ಬ."
"ಹೀರೋ? ನಾನು? ... ಆಯ್! ಏಳೋಕೆ ಆಗ್ತಿಲ್ವಲ್ಲ!"
"ನಿನ್ನ ಪಕ್ಕೆಗೆ ತಗಲಿದ ಎರಡು ತೋಟಾಗಳನ್ನ ಸರ್ಜನ್ ಸಾಹೇಬರು
ತೆಗೆದಿದಾರೆ."
"ನನ್ನ ಪಕ್ಕೆಗೆ ತಗಲಿದ ಎರಡು ತೋಟಾಗಳು? ಆ್ಹ. ಆ್ಹ. ಆ ದಿನ..."

*****

ವೆಲಾಂಗ್.
ಕತ್ತಲೆಯ ಮುಸುಕಿನಲ್ಲಿ ಚೀಣೀ ಪಡೆಗಳು ನುಸುಳಿಬಂದಿದ್ದುವು.ಒಮ್ಮಿಂದೊಮ್ಮೆಲೆ ಟ್ಯಾಂಕುಗಳು ಬೆಂಕಿಯುಂಡೆಗಳನ್ನು ಉಗುಳಿ ಬೆಳಕು