ಪುಟ:ನಾಸ್ತಿಕ ಕೊಟ್ಟ ದೇವರು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ನಾಸ್ತಿಕ ಕೊಟ್ಟ ದೇವರು

. . . ಆತ ಉಣ್ಣುತ್ತಿದ್ದುದನ್ನು ರಾಮನ್ ನೋಡುತ್ತ ನಿಂತ. ಹಿಂದೆ
ಎಲ್ಲಿ ಕಂಡಿದ್ದೆ ಇವನನ್ನು? —ಎಲ್ಲಿ ? ಓ ! ರೈಲು ದೆಹಲಿ ನಿಲ್ದಾಣ ಬಿಟ್ಟ
ಮೇಲೆ ಓಡಿ ಬಂದು ಹತ್ತಿದವನು ಈತನೇ. ನಸುಹಳದಿಯ ಪ್ಯಾಂಟು,
ಬಿಳಿಯ ಬುಶ್ ಶರಟು, ಕನ್ನಡಕ. ಆಹ ಈತನೇ—
ಕೊಲೆಗಡಕನೂ ಅಲ್ಲ, ಕಳ್ಳನೂ ಅಲ್ಲ. ಯಾವುದಾದರೊಂದು ಅವ
ಸರದ ಕೆಲಸದ ಮೇಲೆ ಹೊರಟಿರಬಹುದು. ಉತ್ತರ ಭಾರತೀಯನೆ? ಇರ
ಲಾರದು. ತಮಿಳನಂತೂ ಅಲ್ಲ. ತನ್ನ ನಾಡಿನವನು ? ಕಲ್ಪನೆಯೇನೋ
ಮಧುರವಾದುದು. ಆದರೆ ಊಹೆಗೆ ಯಾವ ಆಧಾರವೂ ಇರಲಿಲ್ಲ.
ತೆಲುಗನೂ ಇದ್ದಂತಿಲ್ಲ.
ತಮಿಳಿನಲ್ಲಿ ರಾಮನ್ ಕೇಳಿದ:
" ಮದರಾಸಿಗೆ ಹೋಗ್ತಿದೀರೇನು?"
" ಮತ್ತೂ ಮುಂದೆ. ಬೆಂಗಳೂರಿಗೆ."
—ಇಂಗ್ಲಿಷಿನಲ್ಲಿ ಬಂದ ಉತ್ತರ.
['ಕನ್ನಡಿಗ ಹಾಗಾದರೆ.']
ಊಟ ಮುಗಿದಾಗ ಆ ಮನುಷ್ಯ ಕೇಳಿದ:
"ಬಿಲ್ ಎಷ್ಟಾಯ್ತು ? ಈಗಲೇ ಕೊಡಲಾ ?"
"ಹೇಗೆ ಬೇಕೋ ಹಾಗೆ. ಮದರಾಸಿನಲ್ಲೇ ಕೊಟ್ಟೀರಂತೆ."
"ಆಗಲಿ," ಎಂದ ಆತ ಸಿಗರೇಟು ಹಚ್ಚುತ್ತ.
ಮಾತು ತನ್ನ ಬಾಯಿಯಿಂದ ಹೊರಬಿದ್ದ ಬಳಿಕ ರಾಮನ್ ಚಡ
ಪಡಿಸಿದ. ಛೆ ! ಏನು ಮಾಡಿದೆ ತಾನು? ಬಿಲ್ಲಿನ ಹಣ ಎಲ್ಲಾದರೂ
ಸಿಗದೇ ಹೋದರೆ ? ಈ ತಿಂಗಳ ವೇತನಕ್ಕೇ ಸಂಚಕಾರ. ಈಗ ಏನೂ
ಮಾಡುವಂತಿರಲಿಲ್ಲ. ಆ ಹೆಂಗಸಿಗಾದರೆ ನಕಾರದ ಉತ್ತರವಿತ್ತಿದ್ದ, ಬಲು
ಸುಲಭವಾಗಿ. ಇಲ್ಲಿ ಯಾಕೆ ಹೀಗಾಯಿತು? ಯಾಕೆ?
ಬಾಗಿಲಲ್ಲಿ ಆ ಹೆಣ್ಣುಮಗಳು ಕಾಣಿಸಿಕೊಂಡಳು.
ಮ್ಯಾನೇಜರು, ಪಕ್ಕದಲ್ಲಿದ್ದ ತನ್ನ ಅಚ್ಚುಮೆಚ್ಚಿನ ಕೆಲಸಗಾರ
ನೊಡನೆ ನಗುತ್ತ ಅಂದ:
" ಡಿ ಲಕ್ಸ್ ಬರ್ತಿದೆ, ನೋಡು!"
ಅವಳ ಹಿಂದೆ ಹುಡುಗಿ ಇದಳು. ಹುಡುಗಿಯ ಹಿಂದೆ, ತಂದೆ.