ಪುಟ:ನಾಸ್ತಿಕ ಕೊಟ್ಟ ದೇವರು.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೇಲ್ನುಡಿ

೧೭೧

ಒಂಟಿ ನಕ್ಷತ್ರ ನಕ್ಕಿತು
ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಜನಮನ ಪ್ರಾರಂಭದಲ್ಲಿ ತೋರಿ
ಸುವ ಆಶ್ರದ್ದೆಯನ್ನೂ, ಕಾರ್ಯವೊಂದು ಪೂರ್ಣವಾದಾಗ ಜನಮನದಲ್ಲಿ
ಆಗುವ ಆಶ್ಛರ್ಯವನ್ನು ಸಮಾಧಾನವನ್ನೂ ನಾವಿಲ್ಲಿ ದರ್ಶಿಸಬಹುದು.
ಮಗನನ್ನು 'ಉಚ್ಮುಂಡೆ' ಎಂದು ಬೈದ ಹಿರಿಯ ಕೊನೆಗೆ ತನ್ನನ್ನೇ
'ಉಚ್ಮುಂಡೆ' ಎಂದು ಬೈದುಕೊಳ್ಳುವುದರಲ್ಲಿ ಕಥೆ ಪರ್ಯವಸಾನ ಹೊಂದು
ತ್ತದೆ. ಮೂಢನಂಬಿಕೆ, ಪುರುಷಪ್ರಯತ್ನದಲ್ಲಿ ಅಪನಂಬಿಕೆ, ಸಂಪ್ರದಾಯ
ಶರಣತೆ ಇವುಗಳನ್ನು ಉರುಳಿಸಬೇಕಾದರೆ ದೇಶ ಇನ್ನೂ ತುಂಬ ಕಾಲ
ವನ್ನು ಕಳೆಯಬೇಕು. ವಿದ್ಯಾಭ್ಯಾಸ ಹೆಚ್ಚಬೇಕು, ಹೊಸ ತಲೆಮಾರಿನ
ಜನ ಶಕ್ತರಾದ ಮುಂದಾಳುಗಳಾಗಬೇಕು.
ಹಿರಿಯನು ಸೋಲೊಪ್ಪಿದುದನ್ನು ನೋಡಿ, ತಾನೇ ತನ್ನನ್ನು ಬೈದು
ಕೊಂಡದ್ದನ್ನು ನೋಡಿ ಓಂಟಿ ನಕ್ಷತ್ರ ನಕ್ಕಿತಂತೆ. ಈ ಕಥೆಯಲ್ಲಿ ನವಯುಗದ
ನಿರ್ಮಾಣ ಕಾರ್ಯದ ಹಿರಿಮೆ, ಕಷ್ಟ, ನಿಷ್ಠೆಗಳ ಅರ್ಥಪೂರ್ಣ ಚಿತ್ರ ಇವು
ಮೂಡಿಬಂದಿವೆ. ಕಥೆಯ ಅರ್ಥಕ್ಕೆ ಕಥೆಯ ಕೊನೆಯಲ್ಲಿ ಬರುವ ಗಂಡು
ಮಗುವಿನ ಜನನದ ವರ್ತಮಾನ ಹೆಚ್ಚು ಪುಷ್ಟಿಯನ್ನೊದಗಿಸಿದೆ.

ನಂ. ೨೦೮ ಮತ್ತು ನೀಲಿ ಬುಶ್ ಕೋಟು
ವಾತ್ಸಲ್ಯವು ಬಡತನದ ಇಕ್ಕಟ್ಟಿಗೆ ಸಿಕ್ಕಿದಾಗ ಏನು ತಪ್ಪು
ಮಾಡೀತು, ಆತ್ಮಗೌರವದ ಪ್ರತಿಷ್ಠೆ ತಲೆಯೆತ್ತಿದಾಗ ಮನಸ್ಸು ಹೇಗೆ
ನಡೆದುಕೊಂಡೀತು ಎಂಬುದು ಸ್ವಾರಸ್ಯವಾದ ವಿಚಾರ. ಈ ವಿಚಾರ
ಸರಣಿಗೆ ದೃಷ್ಟಾಂತವಾಗಿದೆ ಇಲ್ಲಿಯ ಕಥೆ.
ಶಾರದಾ ಅಕ್ಕ, ನಾಣಿ ತಮ್ಮ. ಅವರಿಬ್ಬರ ತಂದೆ ಐವತ್ತು
ರೂಪಾಯಿನ ನೌಕರ-ತಾಯಿ ರೋಗಪೀಡಿತಳಾದ ನಿತ್ರಾಣಿ. ಈ ಸಂಸಾರದ
ಉದರಂಭರಣಕ್ಕೆ ಶಾರದಾ ಸಹಾಯಕಳಾಗಬೇಕಾಗುತ್ತದೆ'ರೆಡಿಮೇಡ್'
ಉಡುಪುಗಳನ್ನು ತಯಾರಿಸುವ ಕಾರ್ಖಾನೆಯನ್ನು ಸೇರಿ. ನೀಲಿಯ ಬುಶ್
ಕೋಟ್ ಒಂದನ್ನು ಹಾಕಿಕೊಳ್ಳಬೇಕೆಂದು ಇಷ್ಟಪಟ್ಟ ನಾಣಿಗೆ ಉಡುಗೊರೆ
ಕೊಡುವುದಾಗಿ ಅಕ್ಕನ ಮಾತು. ಅದನ್ನು ಕುರಿತು ಹಾಸ್ಯಮಾಡುತ್ತಿದ
ತಮ್ಮ ನಾಣಿ-ಇವೆಲ್ಲದರ ನಡುವೆ ಶಾರದೆಯ ಕಣ್ಣಿಗೆ ನೀಲಿಯ ಬುಶ್
ಕೋಟ್ ಕಾಣಿಸುತ್ತದೆ , ಒಬ್ಬಳೇ ಇದ್ದಾಗ. ಅದನ್ನೇ ಕದ್ದು ಟಿಫಿನ್