ಪುಟ:ನಾಸ್ತಿಕ ಕೊಟ್ಟ ದೇವರು.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪

ನಾಸ್ತಿಕ ಕೊಟ್ಟ ದೇವರು

ಆ ಅಂಶ ಮತ್ತೆ ಮತ್ತೆ ನೆನಪಾಗಿ, ಇಮಾಮ್‌ ಸಾಬಿಯ ಒಳಗೆ ಚಳಿ ಎನಿಸುತ್ತಿತ್ತು.
ಅವನು ತಾತನಾಗಲಿದ್ದುದು ಅದೇ ಮೊದಲ ಸಲವೇನೂ ಆಗಿರಲಿಲ್ಲ. ಹಾಗೆ ನೋಡಿದರೆ, ರೆಂಬೆಗಳು ವಿಶಾಲವಾಗಿ ಹರಡಿದ್ದ ವೃಕ್ಷ ಆತ. ಆದ ಕೇನು? ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಕುಗಳಿಗೆ ಅವುಗಳನ್ನು ಕಡಿ ದೊಯ್ದಿದ್ದರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆಪಟ್ಟವರೆಷ್ಟು ಜನ! ಹಾಗೆ ಅವರು ಆಡಿದ್ದೇ ಕೆಡುಕು ಮಾಡಿತೋ ಏನೋ. ಇಮಾಮ್ ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.
ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿ ಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್ ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಇಷ್ಟವಾಗಲಿಲ್ಲ.
“ ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬೆಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಆಗಲಿ,” ಎಂದುಕೊಂಡ ಇಮಾಮ್ ಸಾಬಿ.
ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಮನೆಯ ಸೊಸೆ ತವರಿಗೆ ಹೋಗಿ, ಇಮಾಮ್‌ಸಾಬಿಯ ಮೊಮ್ಮಗನೊಡನೆ ಮರಳಿದಳು.
ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್‌ ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾ ದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.
ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು
ಊರಿಗೊಮ್ಮೆ ಸರ್ಕಸ್‌ ಬಂದು ಬೀಡು ಬಿಟ್ಟಿತ್ತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್ ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆ