ಪುಟ:ನಾಸ್ತಿಕ ಕೊಟ್ಟ ದೇವರು.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೨೫

ಯಾದ. ಸರ್ಕಸ್ಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ నిಜವಾಯಿತು.
ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆ ಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್ ಸಾಬಿ ಅರೆಹುಚ್ಚನಾದ. ಅವನ ಹೆಂಡತಿ, ಮುಸಲ್ಮಾನ - ಹಿಂದೂ ದೇವರಿಬ್ಬರಿಗೂ ಹರಕೆ ಹೊತ್ತಳು . . . ಹುಡುಗ ಕುತ್ತಿನಿಂದ ಪಾರಾದ . . . ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿಯಾಗಿ ಬಂದಳು.
ಆ ಕಿರಿಯವನೇ, ತನ್ನ ಜೀವನಾಧಾರವಾದ ರೈಲ್ವೆಶಾಖೆಗೆ ಇಮಾಮ್ ಸಾಬಿ ನೀಡಿದ ಕಾಣ್ಕೆ. ಹಿಂದೆ ಇಬ್ಬರೇ ಹಮಾಲರಿದ್ದ ನಿಲ್ದಾಣದಲ್ಲಿ ಈಗ ನಾಲ್ವರಿದ್ದರು. ಇಮಾಮ್ ಸಾಬಿಯ ಮಗ ಕರೀಂ ಐದನೆಯವನಾದ.
"ನನಗೆ ವಯಸ್ಸಾಯ್ತು. ಇನ್ನು ಕರೀಂ ಇರ್ತಾನೆ."
"ನೀನು ರಾತ್ರಿ ನಿದ್ದೆ ಕೆಡ್ಬೇಡ, ದಾದಾ ಮಿಯಾ. ತ್ರೀ-ಆಪ್ ಫೋರ್ ಡೌನ್ ಎಲ್ಲಾ ಕರೀಂ ನೋಡ್ಕೊಳ್ಳಿ."
"ಹೂಂ, ಹೂಂ."
ಹೂಂ-ಎಂದನಾದರೂ, ಸದಾ ಕಾಲವೂ ರಾತ್ರಿಯ ದುಡಿಮೆಯನ್ನು ಮಗನಿಗೇ ವಹಿಸಿ ಕೊಡಲಿಲ್ಲ ಇಮಾಮ್ ಸಾಬಿ. ಒಂದು ವಾರ ಇವನಾದರೆ ಒಂದು ವಾರ ಅವನು.
ಆ ಹುಡುಗಿ, ತನ್ನ ಕಿರಿಯ ಸೊಸೆ, ಈಗ ತುಂಬಿದ ಗರ್ಭಿಣಿ. ಹಳ್ಳಿ ಯಲ್ಲಿ ಬಾಣಂತಿತನಕ್ಕೆ ಅನುಕೂಲವಿರಲಿಲ್ಲವೆಂದು ಇಮಾಮ್ ಸಾಬಿ ಇಲ್ಲಿಯೇ ಇರಿಸಿಕೊಂಡಿದ್ದ. ಅಲ್ಲದೆ, ಹೆಣ್ಣು ಮಕ್ಕಳಿಲ್ಲದ ವೃದ್ಧ ದಂಪತಿ ಗಳು ಆ ಮುಗ್ಧೆಯ ಬಗೆಗೆ ವಿಶೇಷ ಒಲವನ್ನು ತೋರಿಸುತ್ತಲಿದ್ದರು. ಇಮಾಮ್ ಸಾಬಿಯ ಹೆಂಡತಿ ಆ ಹುಡುಗಿಗೆ ಅತ್ತೆಯೂ ಆಗಿದ್ದಳು.
ಚೊಚ್ಚಲ ಹೆರಿಗೆ ಬೇರೆ–
ಬೆನ್ನು ಹುರಿಯನ್ನು ನಡುಕ ಮುತ್ತಿಡಲು ಇಮಾಮ್ ಸಾಬಿ ತನ್ನಷ್ಟಕ್ಕೆ ಅಂದುಕೊಂಡ :
"ಈಗ ಸೂಲಗಿತ್ತಿ ಇದ್ದಾಳೆ. ತಾನೆಲ್ಲಾ ನೋಡ್ಕೊಳ್ತೀನಿ ಅಂದಿ ದಾಳೆ. ಐದು ರೂಪಾಯಿ ಕೊಟ್ಟರಾಯ್ತು."