ಪುಟ:ನಾಸ್ತಿಕ ಕೊಟ್ಟ ದೇವರು.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೩೭

ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್ ಸಾಬಿಯಬಗೆಗೆ ಆಗಲೆ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತು. ಮುಗುಳುನಗೆ ಮೂಡಿತ್ತು ಮುಖದಮೇಲೆ.
"ಆಕ್ಸಿಡೆಂಟ್ ಆಗಿಲ್ವ ಮಾಸ್ತರ್ ಸಾಬ್?"
"ಕನಸು ಬಿತ್ತೇನಪ್ಪ?"
ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟೆಗೆ ತಾಗಿ ನಿಂತಿತ್ತುಮಾಲ್ ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ ತುಸು ಗದ್ದಲ ಮಾಡಿದ್ದುವು.
ಅದೇ ಸದ್ದು-ಧಡ್ ಧಡಾಲ್.
ಆಕ್ಸಿಡೆಂಟ್.
ನಾಚಿಕೆಯಿಂದ ಇಮಾಮ್ ಸಾಬಿಯ ಮುಖ ಕೆ೦ಪೇರಿತು.
"ವಯಸ್ಸಾಗೋಯ್ತು ನಂಗೆ!" ಎಂದು ನುಡಿದು, ತಲೆ ತಗ್ಗಿಸಿ ನೆಲನೋಡುತ್ತ, ಪ್ಲಾಟ್ ಫಾರ್ಮಿನುದ್ದಕ್ಕೂ ಆತ ನಡೆದುಹೋದ.
ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಿಸೆಮರದ ಕೆಳಗೆ, ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರುಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.
ಹೇಗೆ ಬೇಸ್ತು ಬಿದ್ದೆ ತಾನು!
ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಲ್ಲಾ ಕನಸು ಕಂಡು, ಮೂಕನಂತೆ ಅಸ್ಪಶ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದಾಗ ಅವನ ಊರಿದ ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿವನಿ ಅದೆಲ್ಲ. ಅವಘಡವನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್ ಸಾಬಿ.ಆದರೂ ಅದು ಸಂಭವಿಸಿದ ಕೆಲವೇ ಗಂಟೆಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್‌ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್