ಪುಟ:ನಾಸ್ತಿಕ ಕೊಟ್ಟ ದೇವರು.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ನಾಸ್ತಿಕ ಕೊಟ್ಟ ದೇವರು

ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕು ಬಿಟ್ಟು, ಎಂಜಿನ್ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು.ಪ್ರಯಾಣಿಕರ ಆಕ್ರಂದನ ಕರ್ಣಭೇದಕವಾಗಿತ್ತು. ಅವಸರ ಅವಸರವಾಗಿ ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಳಲ್ಲಿ ಸಿಲುಕಿಕೊಂಡವರ–ಬದುಕಿ ಉಳಿದವರ-ರಕ್ಷಣೆಗಾಗಿ ಯತ್ನ ನಡೆತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮ ಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ ಬರುವ ಹೊತ್ತಿಗೆ ಆ ದುಡಿಮೆ ಮುಗುಯಿತು. ಸತ್ತವರ ಶವಗಳೆಲ್ಲ ದೊರೆತಿದ್ದವು __ಐವತ್ತೆಂಟ ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದುದು ಇಪ್ಪತ್ತೆರಡು ಮಂದಿಗೆ. ಸಣ್ಣ ಪುಟ್ಟ ಗಾಯಗಳು ಇನ್ನೂ ಅನೇಕರಿಗೆ.
ಮುಂದೆ ಅನೇಕ ವರ್ಷಗಳ ಅನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಘಟನೆ.
ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆ೦ದುಇಮಾಮ್ ಸಾಬಿ ಕುಳಿತ. ಮೈ ಥರಥರನೆ ನಡುಗುತ್ತಿತ್ತು. ತೀವ್ರಗೊಂಡಿದ್ದ ಎದೆಗುಂಡಿಗೆಯ ಬಡಿತ ಇನ್ನೂ ಕಡಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲಾ ಬೆವತಿದ್ದುವು.
ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತಊರಿನಿಂದ ಬಂದಿದ್ದ ಹಲವರೊಡನೆ, ರಾತ್ರಿ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾಮ್ ಸಾಬಿ ಹಿಂದಿರುಗಿದ.
ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:
"ಭಾರಿ ಸಂಪಾದನೆಯಾಗಿರ್ಬೇಕು ಇಮಾಮ್ಗೆ!"
ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದು ಕಣ್ಣಿಗೆ ಕತ್ತಲು ಕವಿತಾಯಿತು ಈತನಿಗೆ.
ಇವನು ಸ್ವರವೇರಿಸಿ ಅಂದಿದ್ದ:
"ಥೂ ನಿಮ್ಮ ! ನೀವು ಮನುಷ್ಯರೋ ಮೃಗಗಳೋ?"
ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.