ಪುಟ:ನಾಸ್ತಿಕ ಕೊಟ್ಟ ದೇವರು.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೨೯

ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂದಾ ಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನುಕಾಡಿಸಿ ಪೀಡಿಸಿ ಆದಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು.ಎಷ್ಟೋ ಸಾರಿ ಗೆಲ್ಲುತ್ತಿದ್ದರು. ಯಾರಾದರೂ ಗದರಿದರೆ ಜಗಳಕಾಯುತ್ತಿದರು. ಇಮಾಮ್ ಸಾಬಿ ಮಾತ್ರ, ಅಷ್ಟು ಕೊಡಿ-ಇಷ್ಟು ಕೊಡಿ ಎಂದುಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಕೇಳಿದರೆ, ತಿಷ್ಟು-ಎಂದು ನ್ಯಾಯಸಮ್ಮತವಾದುದನ್ನು ತಿಳಿಸುತಿದ್ದ . . .
ಮತ್ತೆ ಹಲ್ಲೋ ! ಹಲ್ಲೋ! [ಫೋನಿನ ಖಣಖಣತ್ಕಾರ]
ನೌಕರ ಘ೦ಟೆ ಬಾರಿಸಿದ.
ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ.ಕೈಕಂಬ ಮಿಸುಕಿ ಸಿಗ್ನಲ್ ಬಿತ್ತು.
ಘಂಟೆಯ ಸಪ್ಪಳ ಇಮಾಮ್ ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟಗಿಯೇ.ಕೈಕಂಬ ಕಾಣಿಸುತ್ತಿದ್ದುದೂ ಮಸಕು ಮಸಕಾಗಿಯೇ.ಆದರೂ ಸಿಗ್ನಲ್ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.
ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು__ಎಂದು ಛೀಗಳೆಯುತ್ತಇಮಾಮ್ ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ಹದ ಭಾರವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.
ಗೂಡ್ಸ್ ಕಟ್ಟಿಯಲ್ಲಿದ್ದ ಮೂವರು ಹಮಾಲರು ಅದೆಷ್ಟು ಹೊತ್ತಿಗೆಇತ್ತ ಜಿಗಿದರೋ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವಗಲೇ ಮಗ್ನರಾಗಿದ್ದರು. ಯುವಕರು. ಒಬ್ಬನಂತೂ ಮಹಾ ಖದೀಮ.
ಪ್ಯಾಸೆಂಜರ್ ಗಾಡಿ ಹತ್ತುವವರೂ ಕಡಮೆ, ಇಳಿಯುವವರೂ ಡವೆು. ಇಮಾಮ್ ಸಾಬಿ ಹೊರಗೆ ಹೋಗದೆ ಒಳಗೇ ನಿಂತ.
ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದುರಿಮಾಯವಾದರು.