ಪುಟ:ನಾಸ್ತಿಕ ಕೊಟ್ಟ ದೇವರು.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾల ఇಮಾಮ್ ಸಾಬಿ

೩೧

. . .ಅರಿವಿಲ್ಲದಂತೆಯೇ ತನ್ನ ಮುಖವನ್ನು ಆವರಿಸಿದ ಮಂದಹಾಸವನ್ನು ಬದಿಗೆ ಸರಿಸುತ್ತ ಇಮಾಮ್ ಸಾಬಿ, ಮತ್ತೆ ಹೊರಗಿನ ಒರಗುಬೆಂಚಿ ತ್ತ ಸಾಗೋಣವೇ ಎ೦ದು ನೋಡಿದ. ಆದರೆ ಬಿಸಿಲಿನ ಝಳ ಕಣ್ಣನ್ನು ಕ್ಕಿತು. ಪ್ಲಾಟ್ ಫಾರ್ಮಿನುದ್ದಕ್ಕೂ ಎರಡು ಸಾರೆ ಅತ್ತಿತ್ತ ನಡೆದ.
ಇನ್ನು ಪೂನಾದಿಂದ ಬರುವ ಮೇಲ್ ಗಾಡಿ. ಅದಾದಮೇಲೆ ಡತಿ ತರುವ ಬುತ್ತಿಯೂಟ. ಮುಂದೆ, ಬೆಂಗಳೂరినింದ బರುವ ಲ್ ಗಾಡಿ. ನಾಲ್ಕರ ಸುಮಾರಿಗೊಂದು ಲೋಕಲ್.ಸಂಜೆಗೆ ಕ್ಷಿಣಾಭಿಮುಖವಾಗಿ ಪ್ಯಾಸೆಂಜರ್. ಅದರ ನಿರ್ಗಮನದ ಬಳಿಕ ತಾನು ನೆಗೆ . ..
"ಇವತ್ತೋ ನಾಳೆಯೋ ಆಗಬಹುದು.”
__ಇವತ್ತು ರಾತ್ರಿಯೇ ಆಗಲೂ ಬಹುದು.
ಗೇಟಿನ ಹೊರಗೆ ಗೋಡೆಗೊರಗಿ ಇಮಾಮ್ ಸಾಬಿ ಕುಳಿತ. ಜನ ರತೊಡಗಿದ್ದರು. ಮೂರನೆಯ ತರಗತಿಯವರು.
ಫೋನ್ ಕರೆ.. ಗಂಟೆ.
ಒಂಟಿ ಎತ್ತಿನ ಗಾಡಿಯಲ್ಲಿ ಸಾಮಾನು ಹೇರಿಸಿಕೊಂಡು ಸಂಸಾರವೊಂದು ಬಂತು. ಯಾರು? ಕಾಣಿಸುತ್ತಿಲ್ಲ ಸರಿಯಾಗಿ.
ಅಬ್ದುಲ್ಲನ ಸ್ವರ ಕೇಳಿಸಿತು :
"ಬಾ ದಾದಾ ಮಿಯಾ.”
ಇಮಾಮ್ ಸಾಬಿ ಎದ್ದು ಅಬುಲ್ಲನನ್ನು ಹಿ೦ಬಾಲಿಸಿದ.
"ಒಟ್ಟು ಹನ್ನೊಂದು ಸಾಮಾನು. ಮೊದಲೇ ಹೇಳಿಬಿಡಿ. ಆಮೇಲೆತಕರಾರು ಬೇಡ."
అಬ್ದುಲ್ಲ :
"ಮೂರು ರೂಪಾಯಿ ಕೊಟ್ಬಡಿ బుದ್ದಿ . . ."
"ಮೂರು ರೂಪಾಯಿ ! ಎಲ್ಲಾದರೂ ಉಂಟೆ? ಒಂದು ರೂಪಾಯಿಡ್ತೀని—ఇಬ್ಬరిಗೂ ಸೇರಿಸಿ."
ನರೆಗೂದಲಿಗೆ ಗೌರವ ಕೊಡುವವನಂತೆ ಇಮಾಮ್ ಸಾಬಿಯತ್ತತಿರುಗಿ ಆತ ಮತ್ತೂ ಅಂದ :
"ಸರಿಯೇನಪ್ಪ?”