ಪುಟ:ನಾಸ್ತಿಕ ಕೊಟ್ಟ ದೇವರು.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ನಾಸ್ತಿಕ ಕೊಟ್ಟ ದೇವರು



ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟೆಯಲ್ಲಿ ಕರೀ೦ ನೀರು ಹಿಡಿದು ತಂದ.
. . . ಊಟ ಮುಗಿದಾಗ ತಂದೆ ಮಗನಿಗೆ ಅಂದ:
"ನೀನು ಮನೇಲೇ ಇರು.”
. . . ಒರಗಿ ಕುಳಿತಲ್ಲೇ, ಸೊಸೆಯನ್ನು ಕುರಿತು ಯೋಚಿಸು ತಿದ್ದಂತೆಯೇ, ಇಮಾಮ್ ಸಾಬಿಗೆ ಜೊಂಪುಹತ್ತಿತು. ಆದರೆ ಹತ್ತಿಪ್ಪತ್ತು ನಿಮಿಷಗಳಲ್ಲೆ ಮಾಸ್ತರರ ಆಳಗಂಟಲ "ಹಲ್ಲೋ __ಹಲ್ಲೋ __ ” ಅವನನ್ನು ಎಚ್ಚರಿಸಿತು.
ನೆರಳು ಸರಿದು, ಕೊಂಬೆಗಳೆಡೆಯಿಂದ ಬಸಿಲು ಅವನ ಅಂಗಾಂಗಳ ಮೇಲೆ ಬಿದ್ದಿತ್ತು.
ಗಾಡಿ ತಡವೆಂದು ತಿಳಿಯದೆ ಜನ ಬರತೊಡಗಿದ್ದರು. ಜಟಕಾ ಬಂಡಿ ಳು ಬಂದುವು.ಅರಳೆ ಹಿಂಜುವ ಗಿರಣಿಯೊಡೆಯರ ಕಾರೂ ಬಂತು.
ಆದರೆ ಇಮಾಮ್ ಸಾಬಿಯನ್ನು ಮೌಢ್ಯ ಆವರಿಸಿಬಿಟ್ಟಿತ್ತು. ಪಾದಗಳು ಚೆಲಿಸುತ್ತಿರಲಿಲ್ಲ. ಪ್ರಯಾಣಿಕರತ್ತ ಅವನ ಗಮನವಿರಲಿಲ್ಲ.
ఒಮ್ಮೆ అಬ್ದುಲ್ಲನೆಂದ:
"ನಿಂತೇ ಬಿಟ್ಟೆಯಲ್ಲ, ದಾದಾ ಮಿಯಾ?”
ಇಮಾಮ್ ಸಾಬಿ ಉತ್ತರವೀಯಲಿಲ್ಲ. ಮುಗುಳುನಗಲು ಯತ್ನಿಸಿದ,ಯತ್ನಿಸಿ ವಿಫಲನಾದ.
ಮನೆಗೆ ಹೊರಟುಬಿಡಬೇಕೆನಿಸಿತು. ರೈಲಿನ ಅವಘಡದ ರಾತ್ರೆ ಅಲ್ಲಿ ಳಿದಂತಹ ಆರ್ತನಾದವೇ ಈಗಲೂ? ಹೋಗಿ ತಾನು ಮಾಡುವುದಾದರೂ ಏನು ?
ಸಂಜೆಯ ಪ್ಯಾಸೆಂಜರ್ ನೋಡಿಕೊಂಡೇ ಹೊರಡುವೆ-ಎಂದು, ಇಮಾಮ್ ಸಾಬಿ ಗಟ್ಟಿ ಮನಸ್ಸು ಮಾಡಿದ.
ಮೇಲ್ ಗಾಡಿ ಬಂದು, ಮುಂದಕ್ಕೆ ಸಾಗಿತು.
ಸದಾ ಚಲಿಸುತ್ತಿರುವ ಜನರು. ಹೆಂಗಸರು, ಗಂಡಸರು, ಮಕ್ಕಳು. ನ್ನಷ್ಟೇ ವಯಸಾದವರು ಕೂಡಾ. ತಾನು ಮಾತ್ರ ಒಮ್ಮೆಯೂರೈಲಿನಲ್ಲಿ ಪ್ರಯಾಣ ಮಾಡಿರಲಿಲ್ಲ. ಜೀವಮಾನವನ್ನೆಲ್ಲಾ ರೈಲುಮನೆಲ್ಲೇ ಸವೆದಿದ್ದರೂ ಗಾಡಿಯಲ್ಲಿ ಮಾತ್ರ ಒಮ್ಮೆಯೂ ಎಲ್ಲಿಗೂ