ಪುಟ:ನಾಸ್ತಿಕ ಕೊಟ್ಟ ದೇವರು.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೩೫

ಎಲ್ಲಿಗೂಹೋಗಿರಲಿಲ್ಲ. [ ವಿಸ್ಮಯಗೊಳಿಸುವಂತಹ ತಥ್ಯ.] ಆದರೆ ತನ್ನಮಕ್ಕಳು__ಮೊದಲಿನ ಮೂವರು-ರೈಲು ಗಾಡಿಯಲ್ಲಿ ಕುಳಿತೇ ದೂರದ ರುಗಳಿಗೆ ಹೋಗಿಬಿಟ್ಟಿದ್ದರು, ತನ್ನ ಕಣ್ಣು ತಪ್ಪಿಸಿ. ಈಗ ಇದ್ದಕ್ಕಿದ್ದಂತೆ ವರು ಬಂದರೆ__! ಹಿರಿಯವನನ್ನು ಪರಿಚಯದವರೊಬ್ಬರು ಮುಂಬಯಿ ಯಲ್ಲಿ ಕಂಡಿದ್ದರಂತೆ. [ ತಂದೆಯಂತೆ ಹಮಾಲನೇ!] ನಾಲ್ವರುಮಕ್ಕಳಂತೆ. ಕೆಲವು ವರ್ಷಗಳೇ ಆಗಿದ್ದುವು ಆ ಮಾತಿಗೆ ಇಮಾಮ್ಸಾಬಿಯ ಆಯುಷ್ಯದಲ್ಲಿ ಅಂಚೆಯ ಮೂಲಕ ಒಂದೇ ಒಂದು ಕಾಗದ ಆತನಿಗೆ ಬಂದಿತ್ತು, ಮೂರನೆಯ ಮಗನಿಂದ. ಅಣ್ಣನೊಡನೆ ಪಾಕಿಸ್ತಾನಕ್ಕೆ ಹೋಗುವುದಾಗಿ ಬರೆದಿದ್ದ. ಅದೊಂದು ಹೊಸ ದೇಶ__ಪಾಕಿಸ್ತಾನ.ಚಾಕು ಕಲ್ಲು ಈಟಿಗಳ ಆ ಕತೆಯನ್ನು ಇಮಾಮ್ ಸಾಬಿ ಕೇಳಿ ತಿಳಿದಿದ್ದ, ವಲ್ಪ ಸ್ವಲ್ಪ··· ಇನ್ನು ನಾಲ್ಕನೆಯವನು. ಆ ಸರ್ಕಸ್ ತಾನು ಬದು ರುವಾಗಲೇ ಒಮ್ಮೆ ಮತ್ತೆ ಈ ಊರಿಗೆ ಬಂದರೆ . . . ಇಮಾಮ್ ಸಾಬಿಯ ಮಗ ಡೊಂಬರಾಟಕ್ಕೂ ಇಳಿದ. ಆಹಾ! . . .
ವೃದ್ಧ ನೀಳವಾಗಿ ಉಸಿರುಬಿಟ್ಟ, ಗೊತ್ತು ಗುರಿ ಇಲ್ಲದೆ ಅತ್ತಿತ್ತನಡೆದಾಡಿದ ಸಿಗ್ನಲ್ ಕಂಬದ ಈಚೆಗಿದ್ದ ನೀರಿನ ಟ್ಯಾಂಕಿನ ಬಳಿಸಾರಿ, ಅಲ್ಲೇ ಕೆಳಗೆ ದಿನ್ನೆಯ ಮೇಲೆ ಕುಳಿತ. ಸೂರ್ಯನ ತಾಪ ಕಡಮೆ ಗತೊಡಗಿತ್ತು. ಅಲ್ಲಿಂದ ಅವನಿಗೆ, ನೀಳವಾಗಿ ಮಲಗಿ ಹಸುರು ರಾಶಿ ಳಗೆಲ್ಲೋ ಮಾಯವಾಗಿದ್ದ ರೈಲು ಕಂಬಿಗಳು ಕಾಣಿಸುತ್ತಿದ್ದುವು.
ಮನೆಯ ನೆನಪು ಮತ್ತೆ ಮತ್ತೆ ಮುದುಕನನ್ನು ಬಾಧಿಸಿತು. " ಅಲ್ಲಾ! ಎಲ್ಲ ಸಸೂತ್ರವಾಗಿ ನಡೆಸ್ಕೊಡು” ಎಂದ ಆತ, ತುಸುಧ್ವನಿ ತೆಗೆದೇ ಅನನ್ಯ ಭಕ್ತಿಯಿಂದ, ಬಿಕ್ಕುತ್ತ ಪ್ರಾರ್ಥಿಸಿದ.
. . . ಲೋಕಲ್ ಬಂದು ಹೋಯಿತು.
. . . ಇನ್ನು ಉತ್ತರದಿಂದ ಬರುವ ಪ್ಯಾಸೆಂಜರ್.
. . . ಆಕಳು, ಮೇಕೆ, ಕುರಿಗಳು ಹಿಂಡು ಹಿ೦ಡಾಗಿ ಹಾದುಹೋದುವು.ಗೃಹಾಭಿಮುಖವಾಗಿ.
ಇಮಾಮ್ ಸಾಬಿ, ಸಿಗ್ನಲ್ ಕಂಬಿಯ ರುಂಯ್ ಸಪ್ಪಳ ಕೇಳಿಸಿದಂತಾಗಿ, ಎದ್ದ. ಪ್ರಯತ್ನಪೂರ್ವಕವಾಗಿ ಚುರುಕಾಗಿ ನಡೆಯುತ್ತ ನಿಲ್ದಾಣದತ್ತ ಬಂದ.