ಪುಟ:ನಾಸ್ತಿಕ ಕೊಟ್ಟ ದೇವರು.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬

ನಾಸ್ತಿಕ ಕೊಟ್ಟ ದೇವರು

ಹೊರಗೆ, ಬೆಳಗ್ಗೆ ಕುಳಿತಿದ್ದಲ್ಲೇ ಒರಗುಬೆಂಚಿನ ಮೇಲೆ ಆಸೀನನಾದ.
ಒಂದು ಜಟಕಾ ಅವನ ಹತ್ತಿರದಿಂದಲೇ ಬಂತು. ಅದನ್ನು ಕಂಡೂ ಕಾಣದವನಂತಿದ್ದ ಇಮಾಮ್ ಸಾಬಿ. ಕೆಳಕ್ಕೆ ಇಳಿದವನು ಸಿಗರೇಟು ಸೇದುತಲಿದ್ದ ಯುವಕನೊಬ್ಬ. ತಾನು ಏಳದೆ ಕುಳಿತೇ ಇದ್ದುದನ್ನು ಕ೦ಡು ಆತ ಅಚ್ಚರಿಗೊಂಡಂತೆ ಇಮಾಮ್ ಸಾಬಿಗೆ ಭಾಸವಾಯಿತು. ಜಟಕಾದವನು ಕರೆದ :
" ಆವೋ ದಾದಾ ಮಿಯಾ."
ಹ್ಞಾ–ಹೋಗಬೇಕು ತಾನು.
ಒಂದು ಸೂಟ್ ಕೇಸು;ಒಂದು ಕಿಟ್.
"ಇಂಟರ್,ಸಾಬ್? "
ಯುವಕ ಅಬ್ಬರಿಸಿದ:
"ಸೆಕೆಂಡ್ ಕ್ಲಾಸ್! ಇಂಟರಂತೆ---"
ಇಮಾಮ್ ಸಾಬಿಯ ಮುಖ ಕೆಂಪೇರಿತು. ಇಂಟರ್ ತರಗತಿ ಇತ್ತೆಲ್ಲಿ ಗ? ಆದರೂ, ಮತ್ತೆ ಮತ್ತೆ ಹಳೆಯದಕ್ಕೇ ಅ೦ಟಿಕೊಳ್ಳುತ್ತಿತ್ತು, ಅವನ ನಸ್ಸು.
ಬೇರೆಯೂ ಕೆಲ ಪ್ರಯಾಣಿಕರಿದ್ದರು. ಆದರೆ ಇಮಾಮ್ ಸಾಬಿ ಅತ್ತ ನೋಡಲೂ ಇಲ್ಲ.
ಜುಕುಜುಕು ಧ್ವನಿ...
ನಿಲ್ಲುವುದೇ ಇಲ್ಲವೇನೋ ಎನ್ನುವಂತೆ ನೇರವಾಗಿ ಮುಂದಕ್ಕೋಡಿನಿಂತು ಬಿಡುವ ಗಾಡಿ.
ಎಲ್ಲಿತ್ತು ಸೆಂಕೆಂಡ್ ಕ್ಲಾಸ್?
"ಎಲ್ಲಯ್ಯಾ ಇದೆ?”
ಇಮಾಮ್ ಸಾಬಿಗೆ ಏನೂ ಕಾಣಿಸುತ್ತಿರಲಿಲ್ಲ.
ರೇಗುತ್ತ ಯುವಕನೇ ಅತ್ತ ಓಡಿದ, ಇತ್ತ ಓಡಿದ. ವಿನೀತನಾಗಿ ಅವನನ್ನು ಹಿಂಬಾಲಿಸಿದ, ವೃದ್ಧ.
"ಇಲ್ಲೇ ಒಳಗಿಡು! "
ಇನ್ನು ಎರಡಾಣೆಗೆ [ಎಷ್ಟು ನಯೇ ಪೈಸೆಗೋ?] ಕೈ ನೀಡಬೇಕು.
ನಾಣ್ಯ ನಾಲ್ಕಾಣೆಯ ತುಣುಕಿನಂತೆ ಕಂಡಿತು.