ಪುಟ:ನಾಸ್ತಿಕ ಕೊಟ್ಟ ದೇವರು.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಮಾಲ ಇಮಾಮ್ ಸಾಬಿ

೩೭

ಯುವಕನೆಂದ :
" ಮುದುಕನಾದೆ ನೀನು. ಹೋಗು!”
ಇಮಾಮ್ ಸಾಬಿಗೆ ಇದ್ದಕ್ಕಿದಂತೆ ಅಳು ಬಂತು. ಅದನ್ನಾತ ಕಷ್ಟ ಪಟ್ಟ ಅದುಮಿ ಹಿಡಿದು, ಗಾಡಿ ಚಲಿಸಿದಂತೆ ನಿಲ್ಮನೆಯಿಂದ ಹೊರಕ್ಕೆ ಲಿರಿಸಿದ.
ಇಳಿದವರನ್ನು ಹೊತ್ತುಕೊಂಡೋ ಬರಿದಾಗಿಯೋ ಜಟಕಾ ಗಾಡಿಗಳು ತೆರಳುತ್ತಿದ್ದುವು. ನಡೆದೇಹೋಗುತ್ತಿದ್ದರು ಹಲವರು. ಮತ್ತೊಮ್ಮೆಎಲ್ಲವೂ ಶಾಂತವಾಗತೊಡಗಿತ್ತು, ಸೂರ್ಯ ಗುಡ್ಡಗಳಾಚೆ, ಅವಿತಿದ್ದ.
ಮಬ್ಬು ಬೆಳಕು ಎಲ್ಲವನ್ನೂ ಆವರಿಸಿತು.
ಇಮಾಮ್ ಸಾಬಿಗೆ ಇದ್ದುದೊಂದೇ ಯೋಚನೆ-ಮನೆಗೆ ತಾನು ಗಬೇಕು, ನೇರವಾಗಿ, ಮಗುವಿಗೆ ಎಷ್ಟು ಸಂಕಟವಾಗುತ್ತಿದೆಯೋ ನೋ, ಪಾಪ !
ಎಷ್ಟು ಬೇಗನೆ ಹೆಜ್ಜೆ ಇರಿಸಿದರೂ ಮಾರ್ಗಕ್ರಮಣ ನಿಧಾನ ವಾಗಿಯೇ ಆಗುತ್ತಲಿತ್ತು, ಹೃದಯವೊಂದು ಭಾರಗೊಂಡು, ಅದರ ರಗೆ ದೇಹವೇ ಕುಸಿಯುವುದೇನೋ ಎನ್ನಿಸುತ್ತಿತ್ತು.
ಮೂರು ಫರ್ಲಾಂಗುಗಳ ದೂರ ಸಾಗಲು ಅದೆಷ್ಟು ಹೊತ್ತು ಡಿಯಿತೋ?
ಅದೇ ಮನೆ [ಗುಡಿಸಲು], ಯಾರು ಬರುತ್ತಿರುವವರು? ಕರೀಂ? ಏನಾಯ್ತು ?
ಓಡುತ್ತ ಬರುತ್ತಿದ್ದ ಹುಡುಗ.
ಆ_
" ಬಾಬಾ ! "
ಓ ದೇವರೆ–
"ಗಂಡು ಮಗು!"
" ಹ್ಹಾ!"
ಬವಳಿ ಬಂದಂತಾಯಿತು ಇಮಾಮ್ ಸಾಬಿಗೆ. ಪೂರ್ಣಚಂದ್ರನಂತೆ ಮುಖ ಅಗಲಗೊಂಡಿತು. ಕಣ್ಣುಗಳಿಂದ ಆನಂದಾಶ್ರು ಒಸರಿತು.
ಆತ ಕೈಯನ್ನು ಮುಂದಕ್ಕೆ ಚಾಚಿದ.