ಪುಟ:ನಾಸ್ತಿಕ ಕೊಟ್ಟ ದೇವರು.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮

ನಾಸ್ತಿಕ ಕೊಟ್ಟ ದೇವರು

ಕರೀಂ ಅದನ್ನು ಹಿಡಿದುಕೊಂಡ.
ಏನನ್ನೋ ಹೇಳುತ್ತಲೇ ಇದ್ದ ಮಗ––
ಏನನ್ನೋ. ಹುಚ್ಚು ಸಂತಸದ ತೊದಲು ಮಾತಿನ ಹಾಗಿತ್ತು ಅದು.
ನಾಲ್ಕು ಹೆಜ್ಜೆ, ಮನೆ.
"ಅಮ್ಮಾಜಾನ್! ಬಾಬಾ ಬಂದ್ರು !"
ಶೇಖರಿಸಿ ಇಟ್ಟಿದ್ದ ಸಕ್ಕರೆಯಿಂದೊಂದು ಚಿಟಕಿ ತೆಗೆದು ಬೀಬಿ ಹೊರಕ್ಕೆ ಓಡಿಬಂದಳು.
ಇಮಾಮ್ ಸಾಬಿ ನಿಲ್ಲಲಾಗದೆ, ಗೋಡೆ ಹಿಡಿದು, ಕುಸಿದು ಕುಳಿತಿದ್ದ, ಬಾಗಿಲ ಚೌಕಟ್ಟಿಗೊರಗಿ.
ಬೀಬಿ ಸಕ್ಕರೆಯನ್ನು ಆತನ ಬಾಯಿಗೆ ಹಾಕಲೆಂದು ಬಾಗಿದಳು.
ಬಾಗಿದವಳೇ ಚೀರಿದಳು.
ಕೆಂಪು ರುಮಾಲು, ನೀಲಿ ಅಂಗಿ, ಕೊಳಕು ಧೋತರ,ಎಲ್ಲವೂ ಇದ್ದುವು. ತೆರೆದ ಜೇಬಿನಲ್ಲಿ ನಾಣ್ಯಗಳಿದ್ದುವು––ದಿನದ ಸಂಪಾದನೆ.
ಇಮಾಮ್ ಸಾಬಿ ಮಾತ್ರ ಇರಲಿಲ್ಲ.