ಪುಟ:ನಾಸ್ತಿಕ ಕೊಟ್ಟ ದೇವರು.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೯

 ಕಥೆ: ನಾಲ್ಕು
ತಪ್ಪು ಎಣಿಕೆ



ಮಾಪತಿ ಉಸಿರು ಬಿಗಿಹಿಡಿದು ಚೀಟಿಯನ್ನೋದಿದರು; ಕೈಗಡಿಯಾರವನ್ನು ದಿಟ್ಟಿಸಿದರು; ಯಾಂತ್ರಿಕವಾಗಿ ತಲೆ ಎತ್ತಿ ಗೋಡೆ ಗಡಿಯಾರವನ್ನು ನೋಡಿದರು. ಇದರಲ್ಲಿ ಇಪ್ಪತ್ತು ನಿಮಿಷ. ಅದರಲ್ಲಿ ಇಪ್ಪತ್ತೆರಡು. ಚೀಟಿಯನ್ನು ಹಿಡಿದಿದ್ದ ಎಡಗೈಯ ಹೆಬ್ಬೆರಳು ತೋರುಬೆರಳುಗಳು ತುಸು ಮಿಸುಕಿದುವು. ಬೇಗನೆ ಹೊರಟುಬಿಡಲೇ?-ಮನಸ್ಸು ಹೊಯ್ದಾಡಿತು. ಎಷ್ಟೆಂದರೂ ಇನ್ನಿರುವುದು ಇಪ್ಪತ್ತೇ ನಿಮಿಷ; ಅಲ್ಲ ಇಪ್ಪತ್ತೆರಡು ನಿಮಿಷ. ಅವರೆದೆ ಡವಡವನೆಂದಿತು. ನೀಳವಾಗಿ ಉಸಿರೆಳೆದು ಬಿಟ್ಟು, ನೆಮ್ಮದಿಯನ್ನು ಮರಳಿಪಡೆಯಲು ಅವರು ಯತ್ನಿಸಿದರು.

ಆ ಚೂರು ಕಾಗದದ ಒಕ್ಕಣೆ:
"ಡಿಯರೆಸ್ಟ್,
ನನ್ನ ಬೆಂಡೋಲೆ ಕಳವಾಗಿದೆ. ಅಡುಗೆಯವನು, ಮುಸುರೆಯವಳು, ಮಾಲಿ–ಎಲ್ಲರನ್ನೂ ಕೇಳಿದ್ದಾಯಿತು. ಯಾರೂ ಕಂಡಿಲ್ಲವಂತೆ. ನನಗೆ ಯಾಕೋ ಭಯ. ತಕ್ಷಣ ಬನ್ನಿ. —ವೀ"

"ಅಸಿಸ್ಟೆಂಟ್ ಕಮಿಾಶನರ ಮನೆಯಲ್ಲಿ ಕಳವು. ಆ ಊರಿಗೆ ಬಂದಿನ್ನೂ ತಿಂಗಳಿಲ್ಲ, ಅಷ್ಟರಲ್ಲೇ ಅಂತಹ ಅನುಭವ.
"ತಕ್ಷಣ ಬನ್ನಿ . . ."
ಇನ್ನು ಹದಿನೆಂಟು ನಿಮಿ‌ಷ.
ಮತ್ತೊಮ್ಮೆ ನೀಳವಾಗಿ ಉಸಿರುಬಿಟ್ಟು ಉಮಾಪತಿ, ಆ ಚೀಟಿಯನ್ನು ನಾಜೂಕಾಗಿ ಒಮ್ಮೆ–ಎರಡು ಸಾರೆ—ಮಡಚಿ, ತಮ್ಮ ಕೋಟಿನ ಒಳಕಿಸೆಯೊಳಕ್ಕೆ ಇಳಿಬಿಟ್ಟರು.
ಪತ್ನಿಯ ಕರೆ ಬಂದುದಕ್ಕೆ ಮುನ್ನ, ಕಚೇರಿಯ ಮುಖ್ಯಸ್ಥ ಸಿದ್ಧಪಡಿಸಿದ ಸುದೀರ್ಘ 'ನೋಟ್' ಒಂದನ್ನು ಅಭ್ಯಸಿಸುತ್ತ ಉಮಾಪತಿ