ಪುಟ:ನಾಸ್ತಿಕ ಕೊಟ್ಟ ದೇವರು.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ನಾಸ್ತಿಕ ಕೊಟ್ಟ ದೇವರು

ಕುಳಿತಿದ್ದರು. ಅದು ಕಚೇರಿಯ ಹಂಗಾಮಿ ಜವಾನ ನಾಗಪ್ಪನಿಗೆ ಸಂಬಂಧಿಸಿದ್ದು.
ನಾಗಪ್ಪ, ಹಿಂದಿನ ಸಾಹೇಬರು ನೇಮಿಸಿಕೊಂಡಿದ್ದ ಮನುಷ್ಯ. ತನ್ನ ಸೇವೆಯ ಮೂರೇ ವರ್ಷಗಳಲ್ಲಿ ಆ ಕಚೇರಿಯ ಬಲಾಢ್ಯ ವ್ಯಕ್ತಿಯಾಗಿದ್ದ. ಹೆಬ್ಬೆಟ್ಟು ಗುರುತಿನ ಈ ಧೀರ, ಕಚೇರಿಯ ಸಿಬ್ಬಂದಿಯನ್ನೆಲ್ಲ ಹದ್ದುಬಸ್ತಿನಲ್ಲಿಡಲು ಸಮರ್ಥನಾದ ಬಗೆ ಅದ್ಭುತವಾಗಿತ್ತು.
ಸಾಲುಸಾಲಿಗೂ ಪುನರುಕ್ತಿಯ ಅನುಪಲ್ಲವಿಯಿದ್ದ ಆ ನೋಟ್ ನಲ್ಲಿ ಒಟ್ಟಿನಲ್ಲಿ ಇದ್ದುದಿಷ್ಟು:
ಜವಾನ ನಾಗಪ್ಪ ಯಾರ ಅಂಕೆಗೂ ಒಳಪಡುವುದಿಲ್ಲ. ಅವನು ಉದ್ಧಟ. ಸೇವೆಯ ನಿಯಮಗಳನ್ನುಪಾಲಿಸುವುದಿಲ್ಲ; ಕಚೇರಿಗೆ ಬಂದವರಿಂದ ದುಡ್ಡು ಕಿತ್ತುಕೊಳ್ಳುತ್ತಾನೆ; ಬೆನ್ನ ಹಿಂದಿನಿಂದ ಅಧಿಕಾರಿಗಳನ್ನು ಹೀನಾಯವಾಗಿ ಜರೆಯುತ್ತಾನೆ; ಕುಡುಕ ಬೇರೆ.
ಕಚೇರಿಯ ಮುಖ್ಯಸ್ಥ ನೋಟ್ ಬರೆಯುವುದಕ್ಕೆ ಮುನ್ನ ಸಾಹೇಬರೊಡನೆ ಚರ್ಚಿಸಿದ್ದ.
ಉಮಾಪತಿ ಕೇಳಿದ್ದರು :
"ಹಿಂದಿದ್ದವರ ವಿಶ್ವಾಸಕ್ಕೆ ಇವನು ಪಾತ್ರನಾಗಿದ್ದ-ಎನ್ನುತ್ತಿರಲ್ಲಾ?"
ಮುಖ್ಯಸ್ಥ ಪ್ರಯಾಸಪಡುತ್ತ ಅಂದಿದ್ದ :
" ಆ ವಿಷಯ ನಾನು ಹೆಚ್ಚು ಹೇಳಬಾರದು . . ."
"ಕುಡುಕ ಅಂತೀರಿ. ಇల్లి ಪ್ರೊಹಿಬಿಷನ್ ಇದೆಯಲ್ಲಾ ?"
"ಇದೆ. ಆದರೆ ಕಳ್ಳಭಟ್ಟಿಯವರೆಲ್ಲ ಇವನಿಗೆ ಸ್ನೇಹಿತರು."
ಉಮಾಪತಿಗೆ ನಗುಬಂದಿತ್ತು.
ತನ್ನ ಮಾತನ್ನು ನಂಬದೆ ಸಾಹೇಬರು ನಕ್ಕರೇನೋ ಎಂದು ಕಚೇರಿಯ ಮುಖ್ಯಸ್ಥನಿಗೆ ಗಾಬರಿಯಾಯಿತು.
ಅವನೆಂದ:
"ತಮ್ಮ ವಿಷಯದಲ್ಲೇ ಅವನು ಆಡ್ತಿರೋದನ್ನ ಕೇಳಿದರೆ . . ."
"ಏನಂತೆ ?"
"ಮಿಾಸೆ ಬರದವರೆಲ್ಲ ಈಗ ಆಫೀಸರಾಗ್ತಾರಂತೆ. ಐ.ಎ.ಎಸ್.